ಹೃದಯಾಘಾತ ಆಗೋ ಮುನ್ನ ಸಿಗುತ್ತವೆ ಈ ಐದು ಸೂಚನೆಗಳು.

Health & Fitness

ಈಗಿನ ಪರಿಸ್ಥಿತಿಯಲ್ಲಿ ಹೃದಯಾಘಾತ ಅನ್ನುವುದು ಸಾಮಾನ್ಯವಾಗಿದೆ.ಈ ದೇಶದಲ್ಲಿ ಶೇಕಡ 40ರಷ್ಟು ಜನ ಹೃದಯಘಾತಕ್ಕೆ ಒಳಗಾಗಿದ್ದಾರೆ ಹಾಗೂ ಈ ಹೃದಯಾಘಾತಕ್ಕೆ ಒಳಗಾಗುವ ಹಲವಾರು ಮಧ್ಯವಯಸ್ಕರು ಅನ್ನುವುದು ಸಾಬೀತಾಗಿದೆ.ಅಗಾದರೆ ಈ ಹೃದಯಾಘಾತ ಆಗುವ ಮುನ್ನ ನಿಮ್ಮ ದೇಹ ಹಲವಾರು ರೀತಿಯ ಸೂಚನೆಗಳನ್ನು ನೀಡುತ್ತದೆ. ನಿಮ್ಮ ದೇಹದಲ್ಲಿ ಆಗುವಂತಹ ಬದಲಾವಣೆಯ ಬಗ್ಗೆ ನಿಮಗೆ ತಿಳಿಸುತ್ತದೆ. ಆದರೆ ನೀವು ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಹಾಗೂ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಬೇಕು.ಮುಂಜಾಗ್ರತೆ ಕ್ರಮಗಳು ಯಾವುದು ಎಂದು ನೀವು ತಿಳಿದುಕೊಳ್ಳಬೇಕು.

ಹೃದಯಾಘಾತ ಆಗುವ ಮುನ್ನ ನಮ್ಮ ಎದೆಯಲ್ಲಿ ಅಸ್ವಸ್ಥತೆ,ಉಸಿರಾಡುವುದಕ್ಕೆ ತೊಂದರೆ ಹಾಗೂ ಎದೆ ಉರಿ ಈ ರೀತಿಯ ಅನುಭವಗಳನ್ನು ನಮಗೆ ನೀಡುತ್ತದೆ.ನೀವು ತಕ್ಷಣ ವೈದ್ಯರ ಬಳಿ ಹೋಗಬೇಕು. ಇಲ್ಲವಾದರೆ ಜೀವ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು.

ಕೇವಲ ಎದೆಯಲ್ಲಿ ಮಾತ್ರವಲ್ಲ ಎಡಬಾಗದ ತೋಳಿನ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ.ಈ ನೋವು ಅತಿಯಾದರೆ ನಿಮಗೆ ಹೃದಯಾಘಾತ ಆಗಬಹುದು.ಆದ್ದರಿಂದ ನಿಮ್ಮ ಎಡಭಾಗದ ತೋಳಿನಲ್ಲಿ ನೋವು ಬಂದ ತಕ್ಷಣ ವೈದ್ಯರನ್ನು ಭೇಟಿ ಮಾಡುವುದು ಉತ್ತಮ.

ಉಸಿರಾಟದಲ್ಲಿ ತೊಂದರೆ ಆಗುತ್ತದೆ ಹಾಗೂ ಎದೆಯನ್ನು ಹಿಂಡಿದ ಅನುಭವ, ಅತಿಯಾದ ಬೆವರಿಕೆ ನಿಮ್ಮ ದೇಹದಲ್ಲಿ ಆಗುವಂತಹ ಬದಲಾವಣೆಗಳನ್ನು ಸೂಚಿಸುತ್ತದೆ.ಈ ರೀತಿ ಅತಿಯಾಗಿ ಬೆವರಿದಾಗ ಹಾಗೂ ಎದೆ ಹಿಂಡಿದಾಗ ವೈದ್ಯರನ್ನು ಭೇಟಿ ಮಾಡಿ.

ಬೆನ್ನಿನ ಮೇಲ್ಭಾಗದಲ್ಲಿ ನೋವು, ಕತ್ತಿನ ಕೆಳಗೆ ನೋವು, ದವಡೆ, ತಲೆನೋವು ಮತ್ತು ಗಂಟಲು ನೋವು ಈ ರೀತಿ ನೋವುಗಳು ಬಂದಾಗ ನೀವು ಎಚ್ಚರಿಕೆಯಿಂದ ಇರಬೇಕು.ಹಲವಾರು ಬಾರಿ ಗ್ಯಾಸ್ಟಿಕ್ ತೊಂದರೆಯಿಂದ ಈ ನೋವುಗಳು ಕಾಡಬಹುದು.ಅದರೆ ಅತಿಹೆಚ್ಚಾಗಿ ಕಾಡುವುದು ಹೃದಯಾಘಾತದ ಸಂದರ್ಭದಲ್ಲಿ ಆದ್ದರಿಂದ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೆ ವೈದ್ಯರ ಹತ್ತಿರ ಪರೀಕ್ಷೆ ಮಾಡಿಸಿಕೊಳ್ಳಿ.

ಈ ಹೃದಯಾಘಾತ ಸೂಚನೆ ಗಂಡಸರಿಗೆ ಬೇರೆ ರೀತಿ ಮತ್ತು ಹೆಂಗಸರಿಗೆ ಬೇರೆ ರೀತಿ ಮುನ್ಸೂಚನೆಯನ್ನು ನೀಡುತ್ತದೆ. ಗಂಡಸರಿಗೆ ತಲೆನೋವು, ಎದೆ ನೋವು, ವಾಕರಿಕೆ, ಹೊಟ್ಟೆ ಉಬ್ಬರ, ತೋಳಿನ ನೋವುಗಳು ಬರುತ್ತದೆ. ಹೆಂಗಸರಿಗೆ ಎದೆ ನೋವು, ಗಂಟಲು ನೋವು,ಬೆನ್ನುನೋವು, ತಲೆನೋವು,ಸೊಂಟ ನೋವು, ಆಯಾಸ,ವಾಂತಿ,ಉಸಿರಾಟದಲ್ಲಿ ತೊಂದರೆಯ ಸೂಚನೆಗಳನ್ನು ನೀಡುತ್ತದೆ.

ಕೆಲವೊಮ್ಮೆ ಪಿತ್ತ ಜಾಸ್ತಿಯಾದಾಗ ಗ್ಯಾಸ್ಟಿಕ್ ತೊಂದರೆಯಿಂದ ಅಸಿಡಿಟಿ ಸಮಸ್ಯೆಯಿಂದ ಆಗುತ್ತದೆ. ಆದರೆ ಈ ರೀತಿ ಮನ್ಸೂಚನೆಗಳು ನಿಮ್ಮ ದೇಹದಲ್ಲಿ ಆದಾಗ ವೈದ್ಯರ ಹತ್ತಿರ ಪರೀಕ್ಷೆ ಮಾಡಿಕೊಂಡು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.ಈ ರೀತಿ ಮನ್ಸೂಚನೆ ಬರುವುದಕ್ಕೂ ಮುನ್ನ ನೀವು ನಿಮ್ಮ ದೇಹವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಪ್ರತಿಡಿನ ವ್ಯಾಯಾಮ ಮಾಡಬೇಕು. ಒತ್ತಡ ರಹಿತ ಜೀವನವನ್ನು ಸಾಗಿಸಬೇಕು ಹಾಗೂ ಉತ್ತಮ ಆಹಾರವನ್ನು ಸೇವಿಸಬೇಕು.ಉತ್ತಮ ಆಹಾರ ಉತ್ತಮ ಆರೋಗ್ಯಕ್ಕೆ ಕಾರಣವಾಗುತ್ತದೆ.

ಧನ್ಯವಾದಗಳು

Leave a Reply

Your email address will not be published. Required fields are marked *