ಹರವೆ ಸೊಪ್ಪು ಸಿಕ್ಕರೆ ದಯವಿಟ್ಟು ಬಿಡಬೇಡಿ ಯಾಕಂದ್ರೆ!!

Health & Fitness

ಹಸಿರು ಎಲೆ ತರಕಾರಿಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಇಂತಹ ತರಕಾರಿಗಳನ್ನು ದೈನಂದಿನ ಆಹಾರ ಕ್ರಮದಲ್ಲಿ ಬಳಸಿಕೊಂಡರೆ ಆಗ ಖಂಡಿತವಾಗಿಯು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.ಹಸಿರು ಎಲೆ ತರಕಾರಿಗಳು ನೈಸರ್ಗಿಕವಾಗಿದ್ದು ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೇ. ಇವುಗಳು ದೇಹವನು ಆರೋಗ್ಯವಾಗಿ ಇಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇಂತಹ ಹಸಿರು ಎಲೆ-ತರಕಾರಿಗಳಲ್ಲಿ ಹರವೆ ಸೊಪ್ಪು ಒಂದಾಗಿದೆ. ಇದು ದಕ್ಷಿಣ ಭಾರತದ ಕರಾವಳಿ ಪ್ರದೇಶ ಹಾಗೂ ಹಿಮಾಲಯ ತಪ್ಪಲಿನಲ್ಲಿ ಕಾಣಲು ಸಿಗುತ್ತದೆ. ಇದು ಬಂಗಾರ ಕೆಂಪು ಹಸಿರು ಮತ್ತು ನೇರಳೆ ಬಣ್ಣದಲ್ಲಿ ಲಭ್ಯವಿದ್ದು ಇದರಿಂದ ಹಲವಾರು ರೀತಿಯ ಲಾಭಗಳು ಸಿಗುವುದು.ಹರವೆ ಸೊಪ್ಪಿನ ಅರೋಗ್ಯ ಪ್ರಯೋಜನ ಬಗ್ಗೆ ತಿಳಿಸಿಕೊಡುತ್ತೇವೆ.

1, ಹರವೆ ಸೊಪ್ಪಿನಲ್ಲಿ ಪ್ರಮುಖ ಪೋಷಕಾಂಶಗಳು ಹಾಗೂ ಆಂಟಿ ಆಕ್ಸಿಡೆಂಟ್ ಲಭ್ಯವಿದ್ದು ಇದು ಉರಿಯುತ ತಗ್ಗಿಸುವುದು ಮತ್ತು ಆರೋಗ್ಯಕ್ಕೆ ಪೋಷಕಾಂಶವನ್ನು ನೀಡುವುದು.2, ಇನ್ನು 100ಗ್ರಾಂ ಹರವೆ ಸೊಪ್ಪಿನಲ್ಲಿ ಕೇವಲ 24 ಕ್ಯಾಲೋರಿ ಮಾತ್ರ ಇದೆ.ಸ್ವಲ್ಪ ಕೊಬ್ಬು ಮತ್ತು ಕೊಲೆಸ್ಟ್ರಾಲ್ ತುಂಬಾ ಕಡಿಮೆ ಇರುವ ಕಾರಣದಿಂದಾಗಿ ಇದು ಒಳ್ಳೆಯ ಆಯ್ಕೆ ಆಗಿದೆ. ದೇಹದ ತೂಕ ಕಡಿಮೆ ಮಾಡುವವರಿಗೆ ಹರವೆ ಸೊಪ್ಪು ತುಂಬಾನೆ ಒಳ್ಳೆಯದು.

3,ಹರವೆ ಸೊಪ್ಪಿನಲ್ಲಿ ಹಿರಿಕೊಳ್ಳುವ ಮತ್ತು ಹಿರಿಕೊಳ್ಳದೆ ಇರುವ ಅತ್ಯಾಧಿಕಾ ನಾರಿನಂಶ ಅಧಿಕವಾಗಿದೆ. ನಾರಿನಾಂಶವನ್ನು ತಿನ್ನುವುದರಿಂದ ತೂಕ ಇಳಿಸಲು ಮತ್ತು ಕೊಲೆಸ್ಟ್ರಾಲ್ ತಗ್ಗಿಸುವ ಪರಿಣಾಮ ಹೃದಯದ ಕಾಯಿಲೆ ನಿವಾರಣೆ ಮಾಡಲು ನೆರವಾಗುವುದು.

4, ಅಧಿಕ ಪ್ರೊಟೀನ್ ಮತ್ತು ನಾರಿನಂಶವನ್ನು ಹೊಂದಿರುವ ಹರವೆ ಸೊಪ್ಪು ಹಸಿವು ಕಡಿಮೆ ಮಾಡುವುದು ಮತ್ತು ತೂಕ ಇಳಿಸಲು ಸಹಕಾರಿ ಆಗಿದೆ.5, ಹರವೆ ಸೊಪ್ಪಿನಲ್ಲಿರುವ ಕಬ್ಬಿಣ ಅಂಶವು ಕೆಂಪು ರಕ್ತಕಣಗಳನ್ನು ಉತ್ಪಾದಿಸುವುದು ಮತ್ತು ಚಯಾಪಚಯ ಕೋಶಗಳಿಗೂ ಅಗತ್ಯ ಆಗಿರುವುದು.ಹರವೆ ಸೊಪ್ಪಿನಲ್ಲಿ ಇರುವಂತಹ ಕಬ್ಬಿಣ ಅಂಶದಿಂದ ಅತ್ಯಧಿಕ ಲಾಭ ಸಿಗುವುದು.

6, ವಿಟಮಿನ್-ಸಿ ಸೇರಿಸಿದರೆ ದೇಹವು ಹೆಚ್ಚಿನ ಪ್ರಮಾಣದ ಕಬ್ಬಿಣ ಅಂಶವನ್ನು ಹಿರಿಕೊಳ್ಳಲು ಸಹಕಾರಿ ಆಗಿರುವುದು.ಹೀಗಾಗಿ ನಿಂಬೆ ರಸವನ್ನು ಹರವೆ ಸೊಪ್ಪಿನ ಖಾದ್ಯಕ್ಕೆ ಹಾಕಿ ಮತ್ತು ರಕ್ತ ಹೀನತೆ ಸಮಸ್ಸೆ ಇರುವವರಿಗೆ ಇದು ತುಂಬಾ ಸಹಕಾರಿ ಆಗಿರುವುದು.

7, ನಿತ್ಯದ ಆಹಾರದ ಕ್ರಮದಲ್ಲಿ ಹರವೆ ಸೊಪ್ಪು ಬಳಸಿಕೊಂಡರೆ ಅದರಿಂದ ಅಧಿಕ ಪೋಷಕಾಂಶಗಳು ಸಿಗುವುದು. ಇದು ಹಲವಾರು ರೀತಿಯ ಕ್ಯಾನ್ಸರ್ ತಡೆಯುವ ಫ್ರೀ ರೇಡಿಕಲ್ ಪರಿಣಾಮವನ್ನು ಇದು ಕಡಿಮೆ ಮಾಡುತ್ತದೆ.8, ಇನ್ನು ಬೇರೆ ಎಲ್ಲಾ ರೀತಿಯ ಹಸಿರು ತರಕಾರಿಗಳಿಗಿಂತಲೂ ಹರವೆ ಸೊಪ್ಪಿನಲ್ಲಿ ವಿಟಮಿನ್ ಕೆ ಹೆಚ್ಚಿದೆ.ಇದು ಮೂಳೆಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ರಕ್ತ ಹೆಂಪು ಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುವುದು.

9, ಹರವೆ ಸೊಪ್ಪಿನಲ್ಲಿ ವಿಟಮಿನ್ ಬಿ ಗುಂಪಿನ ಅಂಶವು ಉತ್ತಮವಾಗಿದೆ. ಇದು ಹುಟ್ಟುವ ಮಕ್ಕಳಲ್ಲಿ ಅಂಗ ನ್ಯೂನ್ಯತೆಯನ್ನು ತಡೆಯುವುದು ಮತ್ತು ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ನೀಡುತ್ತದೆ. ಅನಾರೋಗ್ಯದಿಂದ ಗುಣಮುಖವಾಗುವರು ಮತ್ತು ಉಪವಾಸ ಬಿಡುವವರಿಗೆ ಹರವೆ ಸೊಪ್ಪನ್ನು ನೀಡಲಾಗುತ್ತದೆ.ಇದರಿಂದ ಜೀರ್ಣ ಕ್ರಿಯೆ ಚೆನ್ನಾಗಿ ಆಗುತ್ತದೆ10, ನಿಯಮಿತವಾಗಿ ಹರವೆ ಸೊಪ್ಪನ್ನು ಸೇವನೆ ಮಾಡುವುದರಿಂದ ಹೆಚ್ಚಿನ ಲಾಭ ಸಿಗುತ್ತದೆ.

Leave a Reply

Your email address will not be published. Required fields are marked *