ಎಳನೀರು ಮಿಸ್ ಮಾಡದೇ ದಿನ ಕುಡಿತೀರಾ? ಪರಿಣಾಮ ಏನಾಗುತ್ತೆ ಗೊತ್ತಾ?

Health & Fitness

ಹೌದು,ಬೇಸಿಗೆ ಬಂತು ಅಂದರೆ ಸಾಕು ಬಿಸಿಲಿನ ತಾಪಕ್ಕೆ ಗಂಟಲು ಒಣಗುತ್ತೆ. ತಂಪಾಗಿ ಏನು ಸಿಕ್ಕರೂ ಕುಡಿಯೋಣ ಅನ್ನಿಸುತ್ತದೆ. ಆದರೆ ತಂಪು ಪಾನೀಯಗಳು ಬೇಕಾದಷ್ಟು ಸಿಗುತ್ತವೆ ಆದರೆ ಅದರಿಂದ ದೇಹಕ್ಕೆ ಯಾವುದೇ ಲಾಭ ಇಲ್ಲ,ದೇಶಕ್ಕೂ ಲಾಭ ಇಲ್ಲ. ಅರೋಗ್ಯಕ್ಕೆ ನಷ್ಟವೇ ಸರಿ.

ಎಳನೀರು ಕುಡಿಯುವುದರಿಂದ ದೇಹಕ್ಕೂ ಲಾಭ,ನಮ್ಮ ದೇಶದ ಬೆನ್ನೆಲುಬಾಗಿ ನಿಂತಿರುವ ರೈತರಿಗೂ ಲಾಭ.ಎಳನೀರಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಸಿ ಸಿಗುತ್ತದೆ. ಹಾಗಾಗಿ ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಇದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಗ್ರಹಿಸುತ್ತದೆ. ಒಳ್ಳೆಯ ಕೊಲೆಸ್ಟ್ರಾಲ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಹಾಗಾಗಿ ಹೃದಯದ ಆರೋಗ್ಯಕ್ಕೆ ಎಳನೀರು ಬೆಸ್ಟ್.

ಸಕ್ಕರೆ ಕಾಯಿಲೆಗೆ ರಾಮಬಾಣ. ಎಳನೀರಿನಲ್ಲಿ ಮಗ್ನೇಶಿಯಂ ಪ್ರಮಾಣ ಹೇರಳವಾಗಿರುತ್ತದೆ. ಇದು ದೇಹದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಿಸುತ್ತದೆ. ಜೊತೆಗೆ ಸಕ್ಕರೆ ಪ್ರಮಾಣ ಕಡಿಮೆ ಮಾಡುತ್ತದೆ. ತತ್ಪರಿಣಾಮ ಬ್ಲಡ್ ಶುಗರ್ ನಿಯಂತ್ರಣದಲ್ಲಿರುತ್ತದೆ.

ರಕ್ತದೊತ್ತಡ ಕಡಿಮೆ ಮಾಡುತ್ತದೆ. ಎಳನೀರಿನಲ್ಲಿ ಸಾಕಷ್ಟು ಪೊಟ್ಯಾಶಿಯಂ ಅಂಶ ಸಿಗುತ್ತದೆ. ಇದು ರಕ್ತದೊತ್ತಡ ಕಡಿಮೆ ಮಾಡುತ್ತದೆ. ಜೊತೆಗೆ ರಕ್ತಹೆಪ್ಪುಗಟ್ಟುವುದನ್ನು ತಪ್ಪಿಸುತ್ತದೆ.ಎಳನೀರು ಸೇವನೆ ಮಾಡಿದರೆ, ಅದರಿಂದ ದೇಹದಲ್ಲಿನ ಆತಂಕ ನಿವಾರಣೆ ಆಗುವುದು ಹಾಗೂ ಹೃದಯ ಬಡಿತ ಕಡಿಮೆ ಮಾಡಬಹುದು. ಮಲಗುವ ಮೊದಲು ಒಂದು ಲೋಟ ಎಳನೀರು ಕುಡಿದರೆ ಒತ್ತಡ ನಿವಾರಣೆ ಆಗುವುದು ಮತ್ತು ಮನಸ್ಸು ಶಾಂತವಾಗುವುದು.
ಮಲಗುವ ಮೊದಲು ಎಳನೀರು ಕುಡಿದರೆ ಅದರಿಂದ ದೇಹದಲ್ಲಿನ ವಿಷಕಾರಿ ಅಂಶವು ಹೊರಗೆ ಹಾಲು ಮತ್ತು ಮೂತ್ರಕೋಶವನ್ನು ಶುಚಿಗೊಳಿಸಲು ಸಹಕಾರಿ.

ಕಿಡ್ನಿ ಸ್ಟೋನ್-ಕಿಡ್ನಿ ಸ್ಟೋನ್ ಕಂಟ್ರೋಲ್ ಮಾಡುತ್ತದೆ. ಎಳನೀರು ಮೂತ್ರ ಕ್ರಿಯೆಯನ್ನು ಸರಾಗಗೊಳಿಸುತ್ತದೆ. ಹೀಗಾಗಿ, ಮೂತ್ರದಲ್ಲಿರುವ ಸಣ್ಣ ಸಣ್ಣ ಹರಳುಗಳು ಮೂತ್ರಕೋಶದಲ್ಲಿ ಸಂಗ್ರಹವಾಗದೇ ದೇಹದಿಂದ ಹೊರಗೆ ಹೋಗುತ್ತವೆ. ಇದರಿಂದ ಕಿಡ್ನಿಯಲ್ಲಿ ಸ್ಟೋನ್ ಸಮಸ್ಯೆ ಉಂಟಾಗುವುದು ತಪ್ಪುತ್ತದೆ

ದೇಹಾಯಾಸ ನೀಗಿಸುತ್ತದೆ. ಎಳನೀರಿನಲ್ಲಿ ಗ್ಲುಕೋಸ್ ಪ್ರಮಾಣ ಹೇರಳವಾಗಿರುತ್ತದೆ. ಇದು ದೇಹಾಯಾಸವನ್ನು ಕ್ಷಣ ಮಾತ್ರದಲ್ಲಿ ನಿವಾರಿಸುತ್ತದೆ. ಜೊತೆಗೆ ದೇಹಕ್ಕೆ ಹೊಸ ಚೈತನ್ಯ ನೀಡುತ್ತದೆ. ಡಿಹೈಡ್ರೇಶನ್ ಕೂಡಾ ಕಡಿಮೆ ಮಾಡುತ್ತದೆ.

ಎಳನೀರು ಕುಡಿದರೆ ಇದು ಜೀರ್ಣಕ್ರಿಯೆಗೆ ಸಹಕಾರಿ. ಇದು ಜೀರ್ಣಕ್ರಿಯೆಗೆ ವೇಗ ನೀಡುವುದು ಮತ್ತು ಊಟ ಬಳಿಕದ ಹೊಟ್ಟೆ ಉಬ್ಬರ ತಡೆಯುವುದು. ನಿಯಮಿತವಾಗಿ ಎಳನೀರು ಕುಡಿದರೆ ಇದರಿಂದ ದೇಹದಲ್ಲಿ ಎಲೆಕ್ಟ್ರೋಲೈಟ್ಸ್ ಸಮತೋಲನ ಕಾಪಾಡಬಹುದು ಮತ್ತು ರಕ್ತದೊತ್ತಡವು ಸರಿಯಾಗಿ ಇರುವುದು. ಜೀರ್ಣಕ್ರಿಯ ವ್ಯವಸ್ಥೆಯನ್ನು ಇದು ಕಾಪಾಡುವುದು.

ಬೊಜ್ಜು ಇಳಿಕೆಗೆ ಸಹಕಾರಿ.ಎಳನೀರಿನಲ್ಲಿ ಫೈಬರ್ ಅಂಶ ಜಾಸ್ತಿ, ಕೊಬ್ಬಿನಾಂಶ ಕಡಿಮೆ ಇರುತ್ತದೆ. ಫೈಬರ್ ಜೀರ್ಣ ಕ್ರಿಯೆಯನ್ನು ನಿಧಾನಿಸುತ್ತದೆ. ಹಸಿವು ಕಡಿಮೆ ಆಗುತ್ತದೆ. ತತ್ಪರಿಣಾಮ ಬೊಜ್ಜು ಬೆಳೆಯುವುದಿಲ್ಲ.ಎಳನೀರು ದೇಹವನ್ನು ಅದ್ಭುತವಾಗಿ ಹೈಡ್ರೇಟ್ ಮಾಡುವುದು ಮತ್ತು ಇದು ವ್ಯಾಯಾಮಕ್ಕೆ ಮೊದಲು ಹಾಗೂ ಬಳಿಕ ದೇಹಕ್ಕೆ ಶಕ್ತಿ ನೀಡುವುದು.ವ್ಯಾಯಾಮದ ಬಳಿಕ ಎಳನೀರು ಕುಡಿದರೆ ಅದರಿಂದ ದೇಹವು ಕಳೆದುಕೊಂಡಿರುವ ಎಲೆಕ್ಟ್ರೋಲೈಟ್ಸ್ ಮರಳಿ ಪಡೆಯಲು ಸಹಕಾರಿ. ಎಳನೀರು ಕುಡಿದರೆ ಅದರಿಂದ ನಿಶ್ಯಕ್ತಿ ಮತ್ತು ಬಳಲಿಕೆ ನಿವಾರಣೆ ಮಾಡಬಹುದು ಹಾಗೂ ದೇಹಕ್ಕೆ ಇದು ಶಕ್ತಿ ನೀಡುವುದು.

ಚರ್ಮದ ಕಾಂತಿ ಹೆಚ್ಚುತ್ತದೆ. ಎಳನೀರು ಚರ್ಮಕ್ಕೆ ಕಾಂತಿ ನೀಡುತ್ತದೆ. ಚರ್ಮದಲ್ಲಿನ ಹೆಚ್ಚಿನ ಎಣ್ಣೆಯ ಅಂಶ ಕಡಿಮೆ ಮಾಡುತ್ತದೆ. ಮುಖದಲ್ಲಿ ಮೊಡವೆಕಾರಕ ರಾಡಿಕಲ್ ಗಳನ್ನು ನಿವಾರಿಸುತ್ತದೆ. ಮುಖ್ಯವಾಗಿ ಮುಖದ ಸುಕ್ಕು ಕಡಿಮೆ ಮಾಡುತ್ತದೆ. ವಯಸ್ಸಾಗಿದ್ದು ಗೊತ್ತೇ ಆಗಲ್ಲ.

ಗರ್ಭಿಣಿಯರಿಗೆ ಅಮೃತ. ಎಳನೀರಿನಲ್ಲಿ ಒಮೆಗಾ 3 ಹೇರಳವಾಗಿ ಸಿಗುತ್ತದೆ. ಗರ್ಭದಲ್ಲಿನ ಮಗುವಿನ ಮೆದುಳಿನ ಬೆಳವಣಿಗೆ ಚುರುಕಾಗಲು ಒಮೆಗಾ 3 ಬೇಕೇ ಬೇಕು. ಹಾಗಾಗಿ ಗರ್ಭಿಣಿಯರು ಎಳನೀರು ಕುಡಿದಷ್ಟು ಒಳ್ಳೆಯದು ಎಂದು ವೈದ್ಯರು ಸಲಹೆ ನೀಡುತ್ತಾರೆ.

ಬಾಯಾರಿಕೆಗೆ ಎಳನೀರಿಗಿಂತ ಉತ್ತಮವಾದ ಜಲ ಈ ಜಗತ್ತಿನಲ್ಲಿಲ್ಲ. ವಿಶೇಷವಾಗಿ ಇದರಲ್ಲಿರುವ ಎಲೆಕ್ಟ್ರೋಲೈಟುಗಳು ದಣಿದ ದೇಹಕ್ಕೆ ಶಕ್ತಿಯನ್ನು ಒದಗಿಸುವ ಜೊತೆಗೇ ಬೆವರು, ಅತಿಸಾರ, ವಾಂತಿ ಮೊದಲಾದ ಕಾರಣಗಳಿಂದ ದೇಹದಿಂದ ನಷ್ಟವಾಗಿದ್ದ ನೀರಿನಂಶವನ್ನು ಮರುದುಂಬಿಸಿ ಕೋಡುತ್ತದೆ.

ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದರೆ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಸಿಗುವುದು. ಎಳನೀರಿನಲ್ಲಿ ಲೌರಿಕ್ ಆಮ್ಲವಿದ್ದು, ಇದು ಪ್ರತಿರೋಧಕ ಶಕ್ತಿ ವೃದ್ಧಿಸುವುದು, ಚಯಾಪಚಯ ಹೆಚ್ಚಿಸುವುದು ಮತ್ತು ತೂಕ ಇಳಿಸಲು ಕೂಡ ಸಹಕಾರಿ.
ಮಲಬದ್ಧತೆ ಮತ್ತು ನಿರ್ಜಲೀಕರಣ ನಿವಾರಣೆ ಮಾಡಲು ಗರ್ಭಿಣಿಯರು ಎಳನೀರು ಕುಡಿಯಬೇಕು ಎಂದು ಹೇಳಲಾಗುತ್ತದೆ. ಇದರಿಂದ ಮಾರ್ನಿಂಗ್ ಸಿಕ್ನೆಸ್ ನಿವಾರಣೆ ಆಗುವುದು ಮತ್ತು ಎದೆಯುರಿಯಂತಹ ಸಮಸ್ಯೆಯು ಕಡಿಮೆ

ಊಟಕ್ಕೆ ಮೊದಲು ಒಂದು ಲೋಟ ಎಳನೀರು ಕುಡಿದರೆ ಅದರಿಂದ ಹೊಟ್ಟೆ ತುಂಬಿದಂತೆ ಆಗುವುದು ಮತ್ತು ಅತಿಯಾಗಿ ತಿನ್ನುವುದನ್ನು ಇದು ಕಡಿಮೆ ಮಾಡುವುದು. ಇದರಲ್ಲಿ ಕಡಿಮೆ ಕ್ಯಾಲರಿ ಇದೆ ಮತ್ತು ಹೊಟ್ಟೆಗೂ ಸಹಕಾರಿ.

ಪೋಷಕಾಂಶಗಳಿಂದ ಸಮೃದ್ಧವಾಗಿದೆ–ಅವಶ್ಯಕ ಎಲೆಕ್ಟ್ರೋಲೈಟುಗಳ ಹೊರತಾಗಿ ಕಾಲ್ಸಿಯಂ, ಮೆಗ್ನೇಶಿಯಂ, ಗಂಧಕ, ಪೊಟ್ಯಾಶಿಯಂ ಮತ್ತು ಸೋಡಿಯಂ ಅಂಶಗಳು ಪ್ರಮುಖವಾಗಿದ್ದು ಆರೋಗ್ಯವನ್ನು ಕಾಪಾಡುವಲ್ಲಿ ನೆರವಾಗುತ್ತವೆ.

ರಕ್ತದೊತ್ತಡದ ಮಟ್ಟಗಳನ್ನು ತಗ್ಗಿಸುತ್ತದೆ–ಎಳನೀರಿನಲ್ಲಿಯೂ ವಿಟಮಿನ್ ಸಿ ಉತ್ತಮ ಪ್ರಮಾಣದಲ್ಲಿದ್ದು ಇದರ ಜೊತೆಗೇ ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಂ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ನೆರವಾಗುತ್ತವೆ. ವಿಶೇಷವಾಗಿ ಉಪ್ಪಿನಲ್ಲಿರುವ ಸೋಡಿಯಂ ಅಂಶದಿಂದ ಎದುರಾಗಿದ್ದ ಪರಿಣಾಮಗಳಿಗೆ ವಿರುದ್ದ ಪರಿಣಾಮವನ್ನು ಪೊಟ್ಯಶಿಯಂ ಒದಗಿಸುವ ಮೂಲಕ ಅಧಿಕ ರಕ್ತದೊತ್ತಡವಾಗದಂತೆ ತಡೆಯುತ್ತದೆ. ಎಳನೀರಿನ ಅತ್ಯುತ್ತಮ ಪ್ರಯೋಜನಗಳಲ್ಲಿ ಇದು ಪ್ರಮುಖವಾಗಿದೆ.

ತಲೆನೋವು ಕಡಿಮೆ ಮಾಡುತ್ತದೆ–ಸಾಮಾನ್ಯವಾಗಿ ತಲೆನೋವು ಅದರಲ್ಲೂ ಇದರ ಅತ್ಯುಗ್ರ ರೂಪವಾದ ಮೈಗ್ರೇನ್ ಸಹಾ ನಿರ್ಜಲೀಕರಣ ಕಾರಣದಿಂದ ಪ್ರಾರಂಭಗೊಳ್ಳುತ್ತದೆ. ಯಾವಾಗ ತಲೆನೋವು ಪ್ರಾರಂಭವಾಯಿತೋ, ಹಾಗೂ ಇದು ಹೆಚ್ಚು ಹೊತ್ತು ನೀರು ಕುಡಿಯದೇ ಇದ್ದಾಗ ಎದುರಾಯಿತೋ, ತಕ್ಷಣವೇ ಒಂದು ಎಳನೀರನ್ನು ಕುಡಿದುಬಿಡಬೇಕು. ಶೀಘ್ರವೇ ಈ ತಲೆನೋವು ಉಲ್ಬಣಗೊಳ್ಳದೇ ಶಮನಗೊಳ್ಳುತ್ತದೆ. ಎಳನೀರಿನಲ್ಲಿ ಮೆಗ್ನೀಶಿಯಂ ಪ್ರಮಾಣ ಹೆಚ್ಚಾಗಿರುವ ಕಾರಣ ಇದು ಮೈಗ್ರೇನ್ ತಲೆನೋವನ್ನು ಕಡಿಮೆ ಮಾಡಲೂ ಸಾಧ್ಯವಾಗುತ್ತದೆ.

ಹೊಟ್ಟೆಯ ತೊಂದರೆಗಳನ್ನು ಸರಿಪಡಿಸುತ್ತದೆ–ಅಜೀರ್ಣತೆಯ ಕಾರಣದಿಂದ ಹೊಟ್ಟೆ ಸರಿಯಿಲ್ಲದಿದ್ದರೆ ಎಳನೀರು ಕುಡಿಯುವ ಮೂಲಕ ಶಮನ ಪಡೆದುಕೊಳ್ಳಬಹುದು. ಸಾಮಾನ್ಯವಾಗಿ ಅಜೀರ್ಣತೆಗೆ ಅತಿ ಆಮ್ಲೀಯತೆಯೇ ಕಾರಣವಾಗುತ್ತದೆ ಹಾಗೂ ಎಳನೀರು ಇದಕ್ಕು ಸರಿಪಡಿಸುವ ಮೂಲಕ ಹೊಟ್ಟೆಯ ಉರಿ, ಹುಳಿತೇಗು, ಎದೆಯುರಿ ಮೊದಲಾದ ತೊಂದರೆಗಳನ್ನು ಅತಿ ಶೀಘ್ರದಲ್ಲಿ ಶಮನಗೊಳಿಸುತ್ತದೆ.

Leave a Reply

Your email address will not be published. Required fields are marked *