ತಲೆ ನೋವು ಅಂತ ಪದೇ ಪದೇ ಬಾಲ್ಬ್ ಹಚ್ಚಿದರೆ ತೊಂದರೆ ಆಗುತ್ತೆ ಹುಷಾರ್!

Health & Fitness

ತಲೆನೋವು ತುಂಬಾ ಸಾಮಾನ್ಯ ಸಮಸ್ಯೆ.ಎಲ್ಲಾ ವಯಸ್ಸಿನ ಜನರಲ್ಲಿ ತಲೆ ನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇನ್ನು ತಲೆನೋವು ಬಂದಕೂಡಲೇ ಸ್ವಲ್ಪ ಬಾಬ್ ಹಚ್ಚಿಕೊಂಡರೆ ಸಾಕು ತಲೆ ನೋವು ಕಡಿಮೆ ಆಗುತ್ತದೆ ಅಂತ ಹೇಳುತ್ತಾರೆ. ಅದರೆ ತಲೆ ನೋವಿಗೆ ಬಾಬ್ ಹಚ್ಚುವ ಮೊದಲು ಯೋಚನೆ ಮಾಡಿ. ಒತ್ತಡ ಜೀವನ ಶೈಲಿಯಿಂದ ಇವತ್ತಿನ ದಿನಗಳಲ್ಲಿ ಎಲ್ಲರಲ್ಲೂ ತಲೆ ನೋವಿನ ಸಮಸ್ಸೆ ಕಾಣಿಸಿಕೊಳ್ಳುತ್ತದೆ. ನಿದ್ದೆ ಸರಿಯಾಗಿ ಆಗದೆ ಇದ್ದರೆ ಅಥವಾ ಒತ್ತಡ ಜಾಸ್ತಿಯಾದರೆ ತಲೆನೋವಿನ ಸಮಸ್ಯೆ ಬರುತ್ತದೆ.ಈ ಸಮಯದಲ್ಲಿ ಯೋಚನೆ ಮಾಡದೇ ಬಾಬ್ ಹಚ್ಚಿಕೊಳ್ಳುತ್ತರೇ. ಆದರೆ ತಲೆನೋವಿಗೆ ಬಾಬ್ ಹಚ್ಚಿ ಕೊಳ್ಳುವುದರಿಂದ ಅಡ್ಡ ಪರಿಣಾಮವಿದೆ.

ಈ ಬಾಲ್ಬ್ ಗಳನ್ನು ಹಚ್ಚಿದ ತಕ್ಷಣ ಜೂಮ್ ಅನಿಸುತ್ತದೆ. ಸ್ವಲ್ಪಮಟ್ಟಿಗೆ ಉರಿ ಉಂಟಾಗುತ್ತದೆ.ಆದ್ದರಿಂದ ನೀವು ನೋವುತ್ತಿರುವ ಭಾಗವನ್ನು ವರೆತುಪಡಿಸಿ ಬೇರೆ ಎಲ್ಲಾದರೂ ಅದನ್ನು ಹಚ್ಚಿದರೆ ಕಣ್ಣುಗಳಲ್ಲಿ ನೀರು ಬರುತ್ತದೆ.ಅಷ್ಟೇ ಅಲ್ಲದೆ ಬಾಲ್ಬ್ ವಾಸನೆ ಇನ್ನಷ್ಟು ತಲೆನೋವನ್ನು ಹೆಚ್ಚು ಮಾಡುವ ಸಾಧ್ಯತೆ ಇದೆ.ಇನ್ನು ತಲೆ ನೋವು ಬಂದಾಗ ಬಾಲ್ಬ್ ಹಚ್ಚುತ್ತಾ ಹೋದರೆ ದಿನ ಕಳೆದಂತೆ ದೇಹ ಊದಿಕೊಳ್ಳುತ್ತದೆ ಮತ್ತು ಮುಲಾಮ್ ಇಲ್ಲದೆ ತಲೆ ನೋವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.

ಬಾಲ್ಬ್ ಹಚ್ಚಿದ ಭಾಗದಲ್ಲಿ ಕಪ್ಪು ಆಗುತ್ತದೆ.ಆದ್ದರಿಂದ ತಲೆ ನೋವು ಬಂದಾಗ ಬಾಲ್ಬ್ ಅನ್ನು ಬಳಕೆ ಮಾಡಬೇಡಿ.ಇನ್ನು ಈ ಬಾಲ್ಬ್ ಗಳಿಗೆ ಅನೇಕ ಬೇಡದ ಕೆಮಿಕಲ್ ಗಳನ್ನು ಬಳಕೆ ಮಾಡಿ ಇರುತ್ತಾರೆ.ಅದರೆ ತಲೆ ನೋವು ಬಂದಾಗ ನೀರು ಕುಡಿಯಿರಿ. ಏಕೆಂದರೆ ದೇಹದಲ್ಲಿ ನೀರು ಕಡಿಮೆಯಾದರೆ ತಲೆನೋವು ಬರುತ್ತದೆ. ಆದ್ದರಿಂದ ಸಾಕಷ್ಟು ಪ್ರಮಾಣದಲ್ಲಿ ತಲೆನೋವು ಬಂದಾಗ ನೀರು ಕುಡಿಯಿರಿ.

ತಲೆ ನೋವು ಬಂದಾಗ ನಿಮ್ಮ ಹಣೆಯ ಮೇಲೆ ಐಸ್ ಪ್ಯಾಕ್ ನಂತಹ ಕೋಲ್ಡ್ ಕಾಂಪ್ರೊಸರ್ ಅನ್ನು ಇಡುವುದರಿಂದ ತಲೆನೋವು ಕಡಿಮೆಯಾಗುತ್ತದೆ.ಐಸ್ ಪ್ಯಾಕ್ ರಕ್ತ ನಾಳಗಳನ್ನು ಕುಗ್ಗಿಸುತ್ತದೆ.ಒತ್ತಡ ಹಾಗೂ ಸೈನಸ್ ನಿಂದ ಉಂಟಾಗುವ ತಲೆ ನೋವುಗಳಿಗೆ ಇದು ಒಂದು ಉತ್ತಮ ಪರಿಹಾರವೆಂದು ಹೇಳಬಹುದು.

ತಲೆ ನೋವು ಬಂದಾಗ ಬಿಸಿ ನೀರಿನ ಶಾಖವನ್ನು ತೆಗೆದುಕೊಳ್ಳಿ.ಇನ್ನು ನಿಂಬೆ ಹಣ್ಣಿನ ರಸದ ಬೆಚ್ಚನೆ ನೀರನ್ನು ಕುಡಿಯುವುದರಿಂದ ತಲೆನೋವಿನ ತೀವ್ರತೆಯನ್ನು ಇದು ಕಡಿಮೆ ಮಾಡುತ್ತದೆ.

Leave a Reply

Your email address will not be published. Required fields are marked *