ಈ ತಪ್ಪುಗಳನ್ನು ಮಾಡಲೇಬೇಡಿ!ನೀರು ಕುಡಿಯುವ ಸರಿಯಾದ ವಿಧಾನ ತಿಳಿದುಕೊಳ್ಳಿ!

Written by Anand raj

Published on:

ನಮ್ಮ ದೇಹಕ್ಕೆ ನೀರಿನಂಶ ಬಹಳ ಮುಖ್ಯ.ನಮ್ಮ ದೇಹದ ಮುಕ್ಕಾಲು ಭಾಗ ನೀರಿನಿಂದಲೇ ಕೂಡಿದೆ. ವೈದ್ಯರು ಕೂಡ ನಮಗೆ ಆಗಾಗ ಹೆಚ್ಚಾಗಿ ನೀರು ಕುಡಿಯುವಂತೆ ಸೂಚಿಸುತ್ತಾರೆ.ನಮ್ಮ ದೇಹದಲ್ಲಿ ನೀರಿನ ಅಂಶ ಹೆಚ್ಚಾಗಿದ್ದಷ್ಟು ಆಂತರಿಕವಾಗಿ ಎಲ್ಲಾ ಅಂಗಗಳು ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಜೊತೆಗೆ ದೇಹದಿಂದ ವಿಷಕಾರಿ ಅಂಶಗಳು ಸಹ ನಮ್ಮ ದೇಹದಿಂದ ಹೊರ ಬಂದು ನಮ್ಮನ್ನು ರೋಗ ಮುಕ್ತರನ್ನಾಗಿ ಮಾಡುತ್ತದೆ ಆದರೆ ಇಂದಿಗೂ ಕೂಡ ನಾವು ಸರಿಯಾಗಿ ನೀರು ಕುಡಿಯುವ ಅಭ್ಯಾಸವನ್ನು ಕಲಿತಿಲ್ಲ .

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ,ಸಾಲಬಾದೆ,ಸತಿ ಪತಿ ಕಲಹ,ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು,ವ್ಯಾಪಾರದಲ್ಲಿ ತೊಂದರೆ,ಕುಟುಂಬ ಕಷ್ಟ,ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ,ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

ಹೌದು,ಇದನ್ನೇ ನಾವು ನಮ್ಮ ಮುಂದಿನ ಪೀಳಿಗೆ ಅವರಿಗೂ ಕಲಿಸುತ್ತಿದ್ದೇವೆ.ನಾವು ನೀರು ಕುಡಿಯುವಾಗ ಮಾಡುವ ಕೆಲವು ಮುಖ್ಯ ತಪ್ಪುಗಳಿಂದ ನಮಗೆ ತೊಂದರೆ ತಪ್ಪಿದ್ದಲ್ಲ ಇದರಿಂದ ಯಾವುದೇ ಲಾಭ ನಮ್ಮ ಆರೋಗ್ಯಕ್ಕೂ ದೊರೆಯುವುದಿಲ್ಲ,ನಮ್ಮ ದೇಹವು ರೋಗ ಮುಕ್ತವಾಗುವುದಿಲ್ಲ.ಯಾವುದು ಆ ತಪ್ಪುಗಳು ಎಂದು ತಿಳಿಯೋಣ ಬನ್ನಿ!

ನಿಂತುಕೊಂಡು ನೀರು ಕುಡಿಯಬಾರದು ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ನಾವೇನಾದರೂ ತಿಂಡಿ ತಟ್ಟೆಯನ್ನು ಕೈಯಲ್ಲಿ ಹಿಡಿದು ಓಡಾಡಿಕೊಂಡು ಅಥವಾ ನಿಂತುಕೊಂಡು ಆಹಾರ ಸೇವನೆ ಮಾಡುತ್ತಿದ್ದರೆ ಮನೆಯಲ್ಲಿರುವ ದೊಡ್ಡವರು ಒಂದು ಕಡೆ ಕುಳಿತು ಆಹಾರ ಸೇವಿಸುವಂತೆ ಹೇಳುತ್ತಾರೆ.ಇದು ಕುಡಿಯುವ ನೀರಿಗೂ ಸಹ ಅನ್ವಯಿಸುತ್ತದೆ.ನಾವು ನಿಂತುಕೊಂಡು ನೀರು ಕುಡಿಯುವುದರಿಂದ ನೀರಿನಲ್ಲಿರುವ ಅನೇಕ ಪೌಷ್ಟಿಕ ಸತ್ವಗಳು ನೀರಿನ ಸಮೇತ ನೇರವಾಗಿ ನಮ್ಮ ಕೆಳಗಿನ ಹೊಟ್ಟೆಗೆ ಹೋಗಿ ತಲುಪುತ್ತದೆ ಆದ್ದರಿಂದ ನಿಂತುಕೊಂಡು ನೀರು ಕುಡಿಯುವುದು ನಮ್ಮ ಆರೋಗ್ಯಕ್ಕೆ ಬಹಳಷ್ಟು ತೊಂದರೆ ಉಂಟು ಮಾಡುವುದಲ್ಲದೆ ನಮ್ಮನ್ನು ಸಹ ಹಲವಾರು ಕಾಯಿಲೆಗಳಿಗೆ ಗುರಿ ಮಾಡಿ ನಮ್ಮ ದೇಹದ ಅಂಗಾಂಗಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡದೇ ಇರಲು ಪ್ರೇರೇಪಿಸುತ್ತದೆ.

ಹೆಚ್ಚು ನೀರು ಬಾಯಿಗೆ ತುಂಬಿಕೊಂಡು ವೇಗವಾಗಿ ನೀರು ಕುಡಿಯುವುದು ನೀರು ಕುಡಿಯುವಾಗ ನಾವು ಇದೊಂದು ತಪ್ಪನ್ನು ಮಾಡುತ್ತೇವೆ.ಆತುರದಲ್ಲಿ ಬೇರೆಲ್ಲೋ ನೋಡಿಕೊಂಡು ನೀರನ್ನು ಸರಸರನೆ ಹೆಚ್ಚಾಗಿ ಬಾಯಿಗೆ ತುಂಬಿಕೊಂಡು ಜೋರಾಗಿ ಒಮ್ಮೆಲೆ ಗುಟುಕಿಸಲು ಮುಂದಾಗುತ್ತೇವೆ ಇದರಿಂದ ನೀರಿನಲ್ಲಿರುವ ಕಲ್ಮಶಗಳು ನೇರವಾಗಿ ನಮ್ಮ ಮೂತ್ರಪಿಂಡ ಮತ್ತು ಮೂತ್ರನಾಳಗಳಲ್ಲಿ ಹೋಗಿ ಶೇಖರಣೆಯಾಗುತ್ತದೆ. ನೀರನ್ನು ಎಷ್ಟೇ ಬಾಯಾರಿಕೆ ಯಾಗಿದ್ದರೂ ಒಂದೆಡೆ ಕುಳಿತು ನಿಧಾನವಾಗಿ ಕುಡಿಯಬೇಕು. ಹೀಗೆ ಕುಡಿಯುವುದರಿಂದ ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆ ಬಲಗೊಂಡು ಮೆಟಬಾಲಿಸಂ ಪ್ರಕ್ರಿಯೆ ಸರಿಯಾಗಿ ನಡೆಯುತ್ತದೆ.

ಊಟಕ್ಕೆ ಮುಂಚೆ ಅಥವಾ ಊಟದ ಮಧ್ಯದಲ್ಲಿ ನೀರು ಕುಡಿಯುವುದು ಹಾಗೂ ಊಟದ ನಂತರ ತಕ್ಷಣ ನೀರು ಕುಡಿಯುವ ಅಭ್ಯಾಸ ಈ 3 ತಪ್ಪುಗಳು ನಮ್ಮ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ.ಊಟಕ್ಕೆ ಮುಂಚೆ ನೀರು ಕುಡಿದು ತಕ್ಷಣವೇ ಊಟಕ್ಕೆ ಕುಳಿತರೆ ಹೊಟ್ಟೆ ಹಸಿವಿಲ್ಲದೆ ಸರಿಯಾಗಿ ಊಟ ಮಾಡಲು ಆಗುವುದಿಲ್ಲ ಇದರಿಂದ ದೇಹದಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾಗುತ್ತದೆ.ಇನ್ನು ಕೆಲವರಿಗೆ ಊಟದ ಮಧ್ಯದಲ್ಲಿ ಹಾಗೂ ಊಟವಾದ ತಕ್ಷಣವೇ ನೀರು ಕುಡಿಯುವ ಅಭ್ಯಾಸವಿರುತ್ತದೆ ಇದರಿಂದ ಜೀರ್ಣಕ್ರಿಯೆಗೆ ಸಹಕಾರಿಯಾಗುವ ಆಮ್ಲಗಳು ತಡವಾಗುತ್ತದೆ.ಈ ಕಾರಣದಿಂದ ಜೀರ್ಣಕ್ರಿಯೆ ತುಂಬಾ ನಿಧಾನ ಗೊಂಡು ಮಲಬದ್ಧತೆ ಮತ್ತು ವಾಕರಿಕೆಗೆ ಕಾರಣವಾಗುತ್ತದೆ.

ಅತಿ ಹೆಚ್ಚು ನೀರು ಕುಡಿಯುವುದು ಕೂಡ ತಪ್ಪು ಕೆಲವರಿಗೆ ಪದೇ ಪದೇ ನೀರು ಕುಡಿಯುವ ಅಭ್ಯಾಸ ಇರುತ್ತದೆ. ನೀರನ್ನು ಹೆಚ್ಚು ಕುಡಿಯಬೇಕು ನಿಜ ಆದರೆ ಯಾವುದೂ ಕೂಡ ಅತಿಯಾಗಬಾರದು,ಹೆಚ್ಚಾಗಿ ನೀರು ಕುಡಿಯುವುದರಿಂದ ವ್ಯಕ್ತಿಗಳಲ್ಲಿ ವಾಟರ್ ಇನ್ ಟಾಕ್ಸಿಫಿಕೇಷನ್ ಸಮಸ್ಯೆ ಎದುರಾಗಿ ದೇಹದಲ್ಲಿ ಸೋಡಿಯಂ ಅಂಶ ಸಾಕಷ್ಟು ಕಡಿಮೆ ಪ್ರಮಾಣಕ್ಕೆ ಬಂದು ಮೆದುಳು ಹಾಗೂ ದೇಹದ ಇನ್ನಿತರ ಭಾಗಗಳಲ್ಲಿ ತೊಂದರೆ ಉಂಟಾಗಿ ಕೋಮಾ ಹಾಗೂ ಪಾರ್ಶ್ವವಾಯು ಸಮಸ್ಯೆ ಎದುರಾಗುತ್ತದೆ.

ಇನ್ನು ಒಬ್ಬ ವ್ಯಕ್ತಿ ಎಷ್ಟು ನೀರು ಕುಡಿಯಬೇಕು ಎಂಬುದಕ್ಕೆ ನಿರ್ದಿಷ್ಟ ಲೆಕ್ಕವಿಲ್ಲ.ನಿಮಗೆ ಬಾಯಾರಿಕೆಯಾದಾಗ ನೀರನ್ನು ಕುಡಿಯಿರಿ.ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಸನ್ ಅವರ ಪ್ರಕಾರ ದಿನಕ್ಕೆ 2.69 ಲೀಟರ್ ನೀರು ಕುಡಿಯಬೇಕು.ನಮಗೆ ಎಷ್ಟು ನೀರು ಬೇಕು ಎನ್ನುವುದು ನಮ್ಮ ಬಾಯಾರಿಕೆಯ ಮೇಲೆ ಅವಲಂಬಿಸಿರುತ್ತದೆ.ಹಾಗೂ ನಾವು ಸೇವಿಸುವ ಆಹಾರದಲ್ಲಿಯೂ ನೀರಿನ ಅಂಶವಿರುತ್ತದೆ ಇದಕ್ಕೆ ಅನುಗುಣವಾಗಿ ನೀರು ಕುಡಿಯಿರಿ ಅಗತ್ಯಕ್ಕಿಂತ ಹೆಚ್ಚಿನ ನೀರು ಆ ಆರೋಗ್ಯಕ್ಕೆ ಮಾರಕ.

ಹಣ್ಣುಗಳನ್ನು ಸೇವಿಸಿದ ನಂತರ ತಕ್ಷಣವೇ ನೀರು ಕುಡಿಯುವುದು:ಈ ರೀತಿಯಾಗಿ ಹಲವರು ಮಾಡುತ್ತಾರೆ,ಈ ತಪ್ಪು ಮಾಡಿದರೆ ನೀರಿನಿಂದ ಯಾವುದೇ ಲಾಭ ನಮ್ಮ ದೇಹಕ್ಕೆ ದೊರೆಯುವುದಿಲ್ಲ ಹಾಗೂ ಹಣ್ಣುಗಳಿಂದ ಕೂಡ ಯಾವುದೇ ಲಾಭ ನಮ್ಮ ದೇಹಕ್ಕೆ ಸಿಗುವುದಿಲ್ಲ.ಪೋಷಕಾಂಶಗಳ ಕೊರತೆಗೆ ಇದು ಕಾರಣವಾಗುತ್ತದೆ.ಇನ್ನು ಕೆಲವು ಹಣ್ಣುಗಳನ್ನು ಸೇವಿಸಿದ ತಕ್ಷಣ ನೀರನ್ನು ಕುಡಿದರೆ ಕಫದ ತೊಂದರೆ ಉಂಟಾಗುತ್ತದೆ.

ಉಗುರು ಬೆಚ್ಚನೆಯ ನೀರನ್ನು ಕುಡಿಯಿರಿ ದಿನಕ್ಕೆ ಎಷ್ಟು ಸಾಧ್ಯವೋ ಅಷ್ಟು ಉಗುರು ಬೆಚ್ಚನೆಯ ನೀರನ್ನು ಕುಡಿಯಿರಿ ಏಕೆಂದರೆ ತಣ್ಣನೆಯ ನೀರು ಕೆಲವು ಭಾಗಗಳಲ್ಲಿ ರಕ್ತ ಪರಿಚಲನೆಯನ್ನು ತಗ್ಗಿಸುತ್ತದೆ. ಇದು ಕೆಲವು ಆರೋಗ್ಯದ ತೊಂದರೆಗಳಿಗೆ ಕಾರಣವಾಗಬಹುದು.ನಿರ್ಜಲೀಕರಣದ ಸೂಚನೆಗಳನ್ನು ನಿರ್ಲಕ್ಷಿಸಬೇಡಿ ಒಂದು ವೇಳೆ ನೀರಿನ ಕೊರತೆಯಿಂದ ನಿರ್ಜಲೀಕರಣಕ್ಕೆ ಒಳಗಾದರೆ ದೇಹವು ಕೆಲವು ಸೂಚನೆಗಳನ್ನು ನೀಡುತ್ತದೆ ಉದಾಹರಣೆಗೆ ಒಣಗಿದ ತುಟಿಗಳು,ತುಟಿಯ ಹೊರ ಚರ್ಮ ಒಣಗಿ ಪ್ರತ್ಯೇಕವಾಗುವುದು,ಸುಸ್ತು ಇತ್ಯಾದಿ ನಿರ್ಜಲೀಕರಣದ ಸೂಚನೆಗಳಾಗಿದೆ ಇದನ್ನು ನಿರ್ಲಕ್ಷಿಸಬೇಡಿ ತಕ್ಷಣವೇ ನೀರು ಕುಡಿಯಿರಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ,ಸಾಲಬಾದೆ,ಸತಿ ಪತಿ ಕಲಹ,ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು,ವ್ಯಾಪಾರದಲ್ಲಿ ತೊಂದರೆ,ಕುಟುಂಬ ಕಷ್ಟ,ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ,ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

ಧನ್ಯವಾದಗಳು.

Related Post

Leave a Comment