ಕಾ ಮ ಕಸ್ತೂರಿ ಬೀಜದಿಂದ ಎಷ್ಟೆಲ್ಲ ಆರೋಗ್ಯ ಲಾಭವಿದೆ ಗೊತ್ತಾ!

Featured-Article
ತುಳಸಿ ಗಿಡದ ಜಾತಿಗೆ ಸೇರಿರುವ ಕಾ ಮಕಸ್ತೂರಿ ಬಗ್ಗೆ ಬಹಳಷ್ಟು ಮಂದಿಗೆ ತಿಳಿದಿಲ್ಲ.ತುಳಸಿಯಂತೆ ಆಕಾರವುಳ್ಳ ಈ ಗಿಡವು ಬಹುತೇಕ ಎಲ್ಲ ಊರುಗಳಲ್ಲಿ ಬೆಳೆಯುತ್ತಾರೆ.ಇದರ ಬೀಜಗಳನ್ನು ಅಡುಗೆಯಲ್ಲೂ ಉಪಯೋಗಿಸುತ್ತಾರೆ.

ಕಾ ಮ ಕಸ್ತೂರಿ ಬೀಜಗಳ ಅರೋಗ್ಯ ಪ್ರಯೋಜನಗಳು

1 ಟೀ ಚಮಚ ಕಾ ಮಕಸ್ತೂರಿಯನ್ನು ನೀರಿನಲ್ಲಿ ನೆನೆಸಿದಾಗ ಅದು ನೆನೆದು ಲೋಳೆ ರಸದಂತೆ ಅಂಟು ಅಂಟಾಗಿ ಉಬ್ಬಿರುತ್ತವೆ ಅದಕ್ಕೆ ಕಲ್ಲುಸಕ್ಕರೆಪುಡಿ ಯನ್ನು ಸೇವಿಸಿದರೆ ಬಹಳ ಉಪಯೋಗವಾಗುತ್ತದೆ.

ಕಾ ಮಕಸ್ತೂರಿಯ ಹಸಿ ಎಲೆಗಳ ರಸವನ್ನು ಶೋಧಿಸಿ ಜೇನುತುಪ್ಪದಲ್ಲಿ ನೆಕ್ಕಿದರೆ ಗಂಟಲು ನೋವು ಗುಣಮುಖವಾಗುತ್ತದೆ.

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಾ ಮಕಸ್ತೂರಿ ಬೀಜ ನೆನೆಸಿದ ನೀರು ಕುಡಿಯುವುದರಿಂದ ಅದ್ಭುತ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಕಾ ಮ ಕಸ್ತೂರಿಗೆ ಸಬ್ಜಾ , ಬೇಸಿಲ್ ಸೀಡ್ ಎಂಬ ಹೆಸರು ಇದೆ.ಸಂಸ್ಕೃತದಲ್ಲಿ ಇದಕ್ಕೆ ಕಂಠಿಜರ ಅಥವಾ ಪರಿಣಾಸವೆಂದು ಹೆಸರು .

ಕಾ ಮ ಕಸ್ತೂರಿ ಬೀಜವು ಎಂತಹ ಕಠಿಣ ಮನಸ್ಕರನ್ನು ಬದಲಾಯಿಸುವ ವಿಶಿಷ್ಟ ಸುಗಂಧ ವುಳ್ಳ ಗಿಡವಿದು.ಈ ಬೀಜ ಬಣ್ಣದಲ್ಲಿ ಕಪ್ಪಾಗಿರುತ್ತದೆ.ಇದನ್ನು ಸಿಹಿ ತುಳಸಿ ಸಸಿಗಳಿಂದ ಸಂಗ್ರಹಿಸಲಾಗುತ್ತದೆ. ಬೀಜಗಳನ್ನು ನೀರಿನಲ್ಲಿ ನೆನೆಸಿ ನಂತರ ತೆಗೆದುಕೊಳ್ಳಬೇಕು.

ಅಮೆರಿಕದ ಸಾಂಬಾರ್ ಪದಾರ್ಥಗಳ ವ್ಯಾಪಾರ ಸಂಘಟನೆ ನೀಡಿರುವ ವರದಿ ಪ್ರಕಾರ ಕಾ ಮ ಕಸ್ತೂರಿಯಲ್ಲಿ ಶೇ 6.1 ರಷ್ಟು ತೇವಾಂಶ , ಶೇ 11.9 ರಷ್ಟು ಪ್ರೋಟೀನ್ , ಶೇ 3.6 ರಷ್ಟು ಕೊಬ್ಬು , ಶೇ 20.5 ರಷ್ಟು ನಾರು , ಶೇ 41.2 ರಷ್ಟು ಕಾರ್ಬೋಹೈಡ್ರೇಟ್ ,ಶೇ 16.7 ರಷ್ಟು ಬೂದಿ ಅಂಶಗಳಿವೆ.

ಒಂದು ಟೀ ಚಮಚ ಕಾ ಮ ಕಸ್ತೂರಿ ಬೀಜಗಳನ್ನು ಒಂದು ಬಟ್ಟಲು ನೀರಿನಲ್ಲಿ ನೆನೆ ಹಾಕುವುದು ಮತ್ತು ಬೆಳಿಗ್ಗೆ ಈ ಬೀಜಗಳು ಲೋಳೆಸರ ದಂತೆ ಅಂಟುಅಂಟಾಗಿ ಉಬ್ಬಿರುತ್ತದೆ.ಇದರಲ್ಲಿ ಸ್ವಲ್ಪ ಕಲ್ಲು ಸಕ್ಕರೆ ಪುಡಿಯನ್ನು ಸೇರಿಸಿ ಸೇವಿಸುವುದು ಶರೀರಕ್ಕೆ ಬಹಳಷ್ಟು ತಂಪನ್ನು ನೀಡುತ್ತದೆ. ಪ್ಲೇಮಾನಯ್ಡ್ ಅಂಶವನ್ನು ಇದು ಒಳಗೊಂಡಿದ್ದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಪ್ರತಿನಿತ್ಯ ಕಾ ಮ ಕಸ್ತೂರಿ ಎಲೆಗಳ ರಸವನ್ನು ದೇಹಕ್ಕೆ ಹಚ್ಚಿಕೊಂಡರೆ ದುರ್ಗಂಧ ನಿವಾರಣೆಯಾಗುತ್ತದೆ.ಗಂಟಲು ಬೇನೆಗೆ ಕಾ ಮಕಸ್ತೂರಿ ಹತ್ತಿ ಎಲೆಗಳ ರಸವನ್ನು ಹಿಂಡಿ ಬಟ್ಟೆಯಲ್ಲಿ ಶೋಧಿಸಿ ಜೇನುತುಪ್ಪದಲ್ಲಿ ಬೆರೆಸಿ ತಿನ್ನಬಹುದು.ಮೂಗಿನಿಂದ ನೀರು ಸೋರುವುದು , ಶೀತ ಮತ್ತು ಜ್ವರಕ್ಕೆ ಕಾ ಮಕಸ್ತೂರಿ ಎಲೆಗಳ ಕಷಾಯ ಮಾಡಿ ಕಾಲು ಚಮಚ ಕಷಾಯಕ್ಕೆ ಸ್ವಲ್ಪ ಜೇನು ಸೇರಿಸಿ ಕುಡಿಯುವುದರಿಂದ ಶೀತ ದೂರವಾಗುತ್ತದೆ.

ಇನ್ನು ಬೇಸಿಗೆಯಲ್ಲಿ ತಂಪಾದ ಶರಬತ್ತು ಮಾಡಿಕೊಂಡು ಕುಡಿಯುವುದರಿಂದ ಬಾಯಾರಿಕೆಯೂ ಕಡಿಮೆಯಾಗುತ್ತದೆ.ಇನ್ನು ರಕ್ತ ಬೇದಿಗೆ ಒಂದು ಟೀ ಚಮಚ ಕಸ್ತೂರಿ ಬೀಜವನ್ನು ಒಂದು ಬಟ್ಟಲು ತಣ್ಣೀರಿಗೆ ಬೆರೆಸಿ ನುಣ್ಣಗೆ ರುಬ್ಬಿ ಶೋಧಿಸಿ ಸೇವಿಸುವುದರಿಂದ ಕಡಿಮೆಯಾಗುತ್ತದೆ.

ಅಜೀರ್ಣ ಮತ್ತು ಹೊಟ್ಟೆಯ ಬಾಧೆಗೆ ಕಾಮಕಸ್ತೂರಿ ಗಿಡದ ಹೂವುಗಳನ್ನು ಸೇವಿಸುವುದರಿಂದ ಇದು ನಿಮ್ಮ ಜೀರ್ಣ ಕ್ರಿಯೆಗೆ ಅನುವು ಮಾಡಿಕೊಡುತ್ತದೆ.

ಧನ್ಯವಾದಗಳು.

Leave a Reply

Your email address will not be published. Required fields are marked *