ಮಹಾಶಿವರಾತ್ರಿ ಅಪ್ಪಿತಪ್ಪಿಯು ರಾತ್ರಿ 9 ಗಂಟೆ ಒಳಗಾಗಿ ಶಿವನಿಗೆ ಈ 3 ವಸ್ತುಗಳಿಂದ ಪೂಜೆ ತಪ್ಪಿಯೂ ಮಾಡಬೇಡಿ!

Featured-Article

ಮಹಾಶಿವರಾತ್ರಿ ಹಿಂದೂ ಧರ್ಮದಲ್ಲಿ ಎಲ್ಲಾ ದೇವರಿಗಿಂತ ಭಗವಂತ ಶಿವ ಬೇಗ ಸಂತೋಷಗೊಳ್ಳುತ್ತಾನೆ. ಹಾಗೆ ಬೆಡಿದ್ದನ್ನೆಲ್ಲ ಭಕ್ತರಿಗೆ ನೀಡುತ್ತಾನೆ.ಶಿವರಾತ್ರಿ ದಿನ ಶಿವನನ್ನು ಶ್ರದ್ದಾ ಭಕ್ತಿಯಿಂದ ಆರಾಧನೆ ಮಾಡಿದರೆ ಶಿವ ಒಲಿಯುವುದರಲ್ಲಿ ಎರಡು ಮಾತಿಲ್ಲ.ಶಿವರಾತ್ರಿ ಎಂದರೆ ಉಪವಾಸ ಜಾಗರಣೆ ಅಭಿಷೇಕ ಜಪ ತಪ ಎಲ್ಲಾವು ಕೂಡ ಇರಲಿದೆ.ಶಿವನಿಗೆ ಪ್ರಿಯವಾದ ವಸ್ತುವನ್ನು ಅರ್ಪಿಸಿ ಪೂಜಾ ವ್ರತ ಮಾಡಿದರೆ ಬೇಡಿದ್ದನ್ನು ಶಿವ ಭಕ್ತರಿಗೆ ನೀಡುತ್ತಾನೆ.ಅದರೆ ಕೆಲವು ವಸ್ತುಗಳನ್ನು ತಪ್ಪಿಯೂ ಶಿವನಿಗೆ ನೀಡಬಾರದು.ಇದು ಶಿವನ ಕೋಪಕ್ಕೆ ಕಾರಣ ಆಗಲಿದೆ.

ಕೇದಗೆಯ ಹೂವು :ಶಿವನಿಗೆ ತುಂಬೆ, ಧಾತುರಾ, ಅಪರಾಜಿತಾ, ನಾಗ ಕೇಸರಿ, ಮುಂತಾದ ಹೂವುಗಳನ್ನು ಅರ್ಪಿಸಲಾಗುತ್ತದೆ. ಮಹಾಶಿವನಿಗೆ ಬಿಳಿ ಬಣ್ಣದ ಹೂವುಗಳು ಬಹಳ ಪ್ರಿಯ ಎನ್ನುತ್ತಾರೆ. ಆದರೂ ಕೇದಗೆ ಹೂವನ್ನು ಶಿವನ ಆರಾಧನೆಯಲ್ಲಿ ಅರ್ಪಿಸಬಾರದು. ದಂತಕಥೆಯ ಪ್ರಕಾರ, ಬ್ರಹ್ಮ ಹೇಳಿನ ಸುಳ್ಳಿನಲ್ಲಿ ಕೇದಗೆ ಹೂವು  ಬ್ರಹ್ಮ ದೇವನ್ನನು  ಬೆಂಬಲಿಸಿತ್ತಂತೆ. ಈ ಕಾರಣದಿಂದ ಶಿವ ಕೇದಗೆ ಹೂವನ್ನು ಶಪಿಸುತ್ತಾನೆ. ಈ ಕಾರಣಕ್ಕಾಗಿ, ಶಿವನ ಆರಾಧನೆಯಲ್ಲಿ ಕೇದಗೆ ಹೂವು  ಬಳಸುವುದನ್ನು ನಿಷೇಧಿಸಲಾಗಿದೆ.

ಶಿವ ಪೂಜೆಯಲ್ಲಿ ಎಳ್ಳು ಬಳಕೆ ಬೇಡ :ಶಿವನ ಆರಾಧನೆಯಲ್ಲಿ ಎಳ್ಳು ಬಳಸುವುದಿಲ್ಲ. ಇದಕ್ಕೆ ಕಾರಣವೆಂದರೆ ಎಳ್ಳು,  ವಿಷ್ಣುವಿನ ಕಲ್ಮಷದಿಂದ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ಹಾಗಾಗಿ, ವಿಷ್ಣುವಿನ ಪೂಜೆಯ ಸಂದರ್ಭದಲ್ಲಿ ಎಳ್ಳು ಸಮರ್ಪಿಸಲಾಗುತ್ತದೆ. ಶಿವನ ಪೂಜೆಗೆ ಅಲ್ಲ. 

ತುಳಸಿಯನ್ನು ಬಳಸಬೇಡಿ :ತುಳಸಿಯನ್ನು ಶಿವಲಿಂಗ ಅಥವಾ ಶಿವನ ಆರಾಧನೆಯ ಸಮಯದಲ್ಲಿ ಎಂದಿಗೂ ಬಳಸಬಾರದು. ಇದಕ್ಕೆ ಕಾರಣ ತುಳಸಿಗಿರುವ ಶಾಪ. ತುಳಸಿ ಜಲಂದರ್ ಎಂಬ ಅಸುರನ ಪತ್ನಿ ವೃಂದಳ ಅಂಶ. ತುಳಸಿಯನ್ನು ವಿಷ್ಣು ತನ್ನ ಹೆಂಡತಿಯಾಗಿ ಸ್ವೀಕರಿಸುತ್ತಾನೆ. ಆದ್ದರಿಂದ, ಶಿವನ ಆರಾಧನೆಯಲ್ಲಿ ತುಳಸಿಯನ್ನು ಬಳಸಲಾಗುವುದಿಲ್ಲ.

ಶಂಖದಿಂದ ನೀರನ್ನು ಅರ್ಪಿಸಬೇಡಿ :ಶಿವನನ್ನು ಆರಾಧಿಸುವಾಗ, ಶಿವಲಿಂಗಕ್ಕೆ ಶಂಖದಿಂದ ನೀರನ್ನು ಎಂದಿಗೂ ಅರ್ಪಿಸಬಾರದು. ಪುರಾಣಗಳ ಪ್ರಕಾರ, ಶಿವನು ಶಂಖಚೂಡ್ ಎಂಬ ರಾಕ್ಷಸನನ್ನುಕೊಲ್ಲುತ್ತಾನೆ. ಶಂಖ, ಶಂಖಚೂಡನ ಅಂಶ ಎನ್ನಲಾಗಿದೆ. ಆದ್ದರಿಂದ, ಶಿವನ ಆರಾಧನೆಯಲ್ಲಿ ಶಂಖದಿಂದ ನೀರನ್ನು ಅರ್ಪಿಸುವುದಿಲ್ಲ.

ಎಳನೀರಿನ ಅಭಿಷೇಕ ಬೇಡ :ಶಿವರಾತ್ರಿ ದಿನದಂದು  ಶಿವಲಿಂಗದ ಮೇಲೆ ಎಳನೀರು ಅರ್ಪಿಸಬಾರದು.  ಶಿವ ವಿಗ್ರಹದ ಮೇಲೆ ತೆಂಗಿನಕಾಯಿ ಅರ್ಪಿಸಬಹುದು ಆದರೆ ಎಳನೀರು ಅಲ್ಲ. ಈ ವಿಷಯಗಳನ್ನು ಸಹ ನೆನಪಿನಲ್ಲಿಡಿ:ಶಿವನಿಗೆ ಬಿಲ್ವ ಪತ್ರೆ ಎಂದರೆ ಬಹಳ ಪ್ರಿಯ. ಆದರೆ ಬಿಲ್ವಪತ್ರೆ ಸಮರ್ಪಿಸುವಾಗ, ಮುರಿದಿರುವ ಪತ್ರೆಯನ್ನು ಅರ್ಪಿಸಬೇಡಿ. ಬಿಲ್ವಪತ್ರೆಯ ನಯವಾದ ಭಾಗ ಶಿವಲಿಂಗವನ್ನು ಸ್ಪರ್ಶಿಸಬೇಕು.ನೀಲ್ ಕಮಲ್ ಶಿವನ ನೆಚ್ಚಿನ ಹೂ ಎಂದು ಪರಿಗಣಿಸಲಾಗಿದೆ. ಬಾಡಿ ಹೋದ ಹೂವುಗಳನ್ನು ಶಿವನಿಗೆ ಅರ್ಪಿಸಬೇಡಿ. 

ಶಿವ ಆರಾಧನೆಯ ಸಮಯದಲ್ಲಿ, ಅಕ್ಕಿ ಅರ್ಪಿಸುವಾಗ, ಒಂದು ಅಕ್ಕಿ ಕೂಡ ಮುರಿಯದಂತೆ ನೋಡಿಕೊಳ್ಳಿ. ಮುರಿದ ಅಕ್ಕಿ ಅಪೂರ್ಣ ಮತ್ತು ಅಶುದ್ಧ ಎಂದು ನಂಬಲಾಗುತ್ತದೆ. ಅರಿಶಿನ ಮತ್ತು ಕುಂಕುಮ ತ್ಪತ್ತಿಯ ಸಂಕೇತವಾಗಿದೆ. ಅವುಗಳು  ವಿಷ್ಣುವಿಗೆ ಸಂಬಂಧಿಸಿವೆ. ಶಿವನ ಆರಾಧನೆಯಲ್ಲಿ ಬಳಸಲಾಗುವುದಿಲ್ಲ.ಶಿವನ ಆರಾಧನೆಯ ಸಮಯದಲ್ಲಿ ಕಪ್ಪು ಬಟ್ಟೆ ಧರಿಸಬೇಡಿ.

Leave a Reply

Your email address will not be published. Required fields are marked *