ವಿಟಮಿನ್ ಕೆ ಕೊರತೆಯಾದರೆ ನಮ್ಮ ದೇಹದಲ್ಲಿ ಎಂತಹ ತೊಂದರೆಗಳಾಗುತ್ತವೆ ಗೊತ್ತಾ!

Featured-Article

ನಮ್ಮ ಆರೋಗ್ಯ ಅತ್ಯುತ್ತಮವಾಗಿ ಇರಬೇಕು ಎಂದರೆ ದೇಹಕ್ಕೆ ಅಗತ್ಯವಾದ ಜೀವಸತ್ವಗಳು, ಖನಿಜಗಳು, ವಿಟಮಿನ್‍ಗಳು ಸಮೃದ್ಧವಾಗಿ ಇರಬೇಕು. ಅಗತ್ಯವಾದ ಪೋಷಕಾಂಶಗಳಲ್ಲಿ ಯಾವುದೇ ಒಂದು ಅಂಶವು ಕಡಿಮೆಯಾದರೂ ಆರೋಗ್ಯದಲ್ಲಿ ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ. ನಮ್ಮ ಆರೋಗ್ಯ ಉತ್ತಮವಾಗಿರಬೇಕು ಎಂದರೆ ವಿಟಮಿನ್ ಕೆ ಅತ್ಯಗತ್ಯ. ಏಕೆಂದರೆ ಇದು ಮೂಳೆ, ಹೃದಯ, ಮೆದುಳು ಮತ್ತು ರಕ್ತದ ಆರೋಗ್ಯ ಉತ್ತಮವಾಗಿಡಲು ಸಹಾಯಮಾಡುವುದು. ಒಂದು ಅರ್ತದಲ್ಲಿ ದೇಹದ ಪ್ರಮುಖ ಅಂಗಾಂಗಗಳ ರಕ್ಷಣೆ ಹಾಗೂ ಕಾರ್ಯಗಳನ್ನು ಉತ್ತಮಗೊಳಿಸುವ ಶಕ್ತಿಯನ್ನು ಹೊಂದಿರುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ,ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ದೇಹದಲ್ಲಿ ವಿಟಮಿನ್ ಕೆ ಕಡಿಮೆಯಾದಾಗ ನಮ್ಮ ಆರೋಗ್ಯದಲ್ಲಿ ಕೆಲವು ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ ಎಂದು ತಜ್ಞರು ಅಭಿಪ್ರಾಯಿಸುತ್ತಾರೆ. ಹಾಗಾದರೆ ಆ ಚಿಹ್ನೆಗಳು ಯಾವವು? ಎನ್ನುವುದನ್ನು ತಿಳಿಯುವ ಕುತೂಹಲ ನಿಮಗೆ ಇದ್ದರೆ ಮುಂದಿನ ವಿವರಣೆಯನ್ನು ಪರಿಶೀಲಿಸಿ.

​ವಿಟಮಿನ್ ಕೆ ಏಕೆ ಅತ್ಯಗತ್ಯ–ವಿಟಮಿನ್ ಕೆ ಯಲ್ಲಿ ಎರಡು ಬಗೆಯಿದೆ. ಒಂದು ವಿಟಮಿನ್ ಕೆ1(ಫಿಲೋಕ್ವಿನೋನ್), ಇನ್ನೊಂದು ವಿಟಮಿನ್ ಕೆ2(ಮೆನಾಕ್ವಿನೋನ್). ಇದು ಸಾಮಾನ್ಯವಾಗಿ ಕರುಳಿನಲ್ಲಿ ಉತ್ಪತ್ತಿಯಾಗುತ್ತದೆ. ಹೆಪ್ಪುಗಟ್ಟುವಿಕೆ ಮತ್ತು ರಕ್ತಸ್ರಾವವನ್ನು ನಿಲ್ಲಿಸಲು ನಮ್ಮ ದೇಹಕ್ಕೆ ಈ ಎರಡು ಬಗೆಯ ವಿಟಮಿನ್ ಕೆ ಅತ್ಯಗತ್ಯವಾಗಿರುತ್ತದೆ. ವಯಸ್ಕರಲ್ಲಿ ವಿಟಮಿನ್ ಕೆಯ ಕೊರತೆ ಅಪರೂಪ ಎನ್ನಬಹುದು. ಆದರೆ ನವಜಾತ ಶಿಶುಗಳಲ್ಲಿ ಈ ವಿಟಮಿನ್ ಕೊರತೆ ಆದರೆ ಅದು ಅಪಾಯವನ್ನು ತಂದೊಡ್ಡುವುದು. ವಿಟಮಿನ್ ಕೆ ಕೊರತೆಯಿಂದ ದೇಹದಲ್ಲಿ ಬೆಳವಣಿಗೆ ಹಾಗೂ ಹೀರಿಕೊಳ್ಳುವ ಸಮಸ್ಯೆ ಉಂಟಾಗುವುದು.

​ಅತಿಯಾದ ರಕ್ತಸ್ರಾವ ಆಗುವುದು:ದೇಹದಲ್ಲಿ ವಿಟಮಿನ್ ಕೆ ಕೊರತೆ ಉಂಟಾದಾಗ ಹೆಪ್ಪುಗಟ್ಟುವಿಕೆಯ ಕ್ರಿಯೆಯಲ್ಲಿ ತೊಂದರೆ ಉಂಟಾಗುವುದು. ಇದು ಅಧಿಕ ರಕ್ತಸ್ರಾವಕ್ಕೆ ಕಾರಣವಾಗುವುದು. ತೀವ್ರವಾಗಿ ಗಾಯಗೊಂಡಾಗ ರಕ್ತ ಸ್ರಾವದ ನಿಯಂತ್ರಣ ಕಷ್ಟವಾಗುವುದು. ಅದು ಮಾರಣಾಂತಿಕ ಅಪಾಯವನ್ನು ಹೆಚ್ಚಿಸುತ್ತದೆ. ಮಹಿಳೆಯರಾಗಿದ್ದರೆ ಮುಟ್ಟಿನ ಸಮಯದಲ್ಲಿ ಅಧಿಕ ರಕ್ತ ಸ್ರಾವವನ್ನು ಅನುಭವಿಸುವರು. ಕೆಲವರಿಗೆ ಆಗಾಗ ಮೂಗಿನಲ್ಲಿ ರಕ್ತ ಸ್ರಾವ ಅನುಭವಿಸುತ್ತಾರೆ. ಅದು ಸಹ ವಿಟಮಿನ್ ಕೆ ಕಡಿಮೆಯಾಗಿರುವುದರ ಸೂಚನೆ ಎಂದು ಹೇಳಲಾಗುವುದು.

​ಮೂಳೆಯ ಬಲ ಕಡಿಮೆಯಾಗುವುದು:ವಿಟಮಿನ್ ಕೆ ಮೂಳೆಯ ಆರೋಗ್ಯವನ್ನು ಕಾಪಾಡುತ್ತದೆ. ವಿಟಮಿನ್ ಕೆ ಕೊರತೆಯಾದಾಗ ಮೂಳೆಯಲ್ಲಿ ಬಲ ಕಡಿಮೆಯಾಗುವುದು. ಜೊತೆಗೆ ಮೂಳೆ ಮೃದುವಾಗುತ್ತವೆ. ಕೆಲವು ಅಧ್ಯಯನಗಳ ಪ್ರಕಾರ ವಿಟಮಿನ್ ಕೆ ಕೊರತೆಯನ್ನು ಅನುಭವಿಸುತ್ತಿರುವವರು ವಿಟಮಿನ್ ಕೆ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರ ಮೂಲಕ ಕೊರತೆಯನ್ನು ನೀಗಿಸಬಹುದು ಎಂದು ಹೇಳಲಾಗುವುದು. ವಿಟಮಿನ್ ಕೆ ಕೊರತೆ ಉಂಟಾದಾಗ ಕೀಲು ಮತ್ತು ಮೂಳೆಯಲ್ಲಿ ನೋವು ಕಾಣಿಸಿಕೊಳ್ಳುತ್ತವೆ ಎಂದು ಹೇಳಲಾಗುವುದು.

​ರಕ್ತ ಹೆಪ್ಪುಗಟ್ಟಂತೆ ಕಾಣಿಸಿಕೊಳ್ಳುವುದು:ವಿಟಮಿನ್ ಕೆ ಕೊರತೆ ಇರುವ ವ್ಯಕ್ತಿಗಳಿಗೆ ಯಾವುದಾದರೂ ಒಂದು ಸಣ್ಣ ವಸ್ತು ತಗುಲಿದರೆ ಆ ಜಾಗದಲ್ಲಿ ರಕ್ತ ಹೆಪ್ಪುಗಟ್ಟಿದಂತೆ ಕಪ್ಪು ಬಣ್ಣವು ಚರ್ಮದ ಮೇಲ್ಭಾಗದಲ್ಲಿ ತೋರುವುದು. ಸಣ್ಣದಾಗಿದ್ದ ಗಾಯವು ದೊಡ್ಡದಾಗಿ ತೋರುವುದು. ದೇಹದ ಕೆಲವು ಭಾಗಗಳಲ್ಲಿ ಮತ್ತು ಉಗುರುಗಳ ಕೆಳ ಭಾಗದಲ್ಲಿ ಸಣ್ಣ ಕಪ್ಪು ರಕ್ತ ಹೆಪ್ಪುಗಟ್ಟಿದಂತೆ ತೋರುವುದು. ಇಂತಹ ಸಮಸ್ಯೆ ಇದ್ದವರು ವಿಟಮಿನ್ ಕೆ ಹೆಚ್ಚಿಸುವಂತಹ ಆಹಾರ ಪದಾರ್ಥಗಳನ್ನು ಹೇರಳವಾಗಿ ಸೇವಿಸಬೇಕು.

​ಜಠರದಲ್ಲಿ ಸಮಸ್ಯೆ:ವಿಟಮಿನ್ ಕೆ ಕೊರತೆ ಇರುವ ಆಹಾರ ಸೇವನೆಯಿಂದ ಜಠರದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ವಿಟಮಿನ್ ಕೆಯ ಕೊರತೆಯಿಂದಾಗಿ ಜಠರದಲ್ಲಿ ರಕ್ತಸ್ರಾವ ಮತ್ತು ರಕ್ತ ಸ್ರಾವದ ಅಪಾಯವನ್ನು ಹೆಚ್ಚಿಸುವುದು. ಮೂತ್ರ ಮತ್ತು ಮಲದಲ್ಲಿಯೂ ರಕ್ತ ಸ್ರಾವ ಕಾಣಿಸಿಕೊಳ್ಳುತ್ತದೆ. ಅಪರೂಪದ ಸಂದರ್ಭದಲ್ಲಿ ದೇಹದೊಳಗಿನ ಲೋಳೆಪೊರೆಯಲ್ಲಿ ರಕ್ತಸ್ರಾವ ಉಂಟಾಗುವುದು. ಅಂತಹ ಸಮಯದಲ್ಲಿ ವೈದ್ಯರಲ್ಲಿ ಸಲಹೆ ಪಡೆದು ವಿಟಮಿನ್ ಕೆ ಹೆಚ್ಚಿಸುವ ಔಷಧಿ ಅಥವಾ ಆಹಾರದ ಸಲಹೆಯನ್ನು ಪಡೆದುಕೊಳ್ಳುವುದು ಉತ್ತಮ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ,ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

​ಒಸಡುಗಳಲ್ಲಿ ರಕ್ತಸ್ರಾವ:ಒಸಡಿನಲ್ಲಿ ಕಾಣಿಸಿಕೊಳ್ಳುವ ರಕ್ತ ಸ್ರಾವವು ಹಲ್ಲಿನ ಸಮಸ್ಯೆ ಮತ್ತು ವಿಟಮಿನ್ ಕೆ ಕೊರತೆಯ ಲಕ್ಷಣವಾಗಿರುತ್ತದೆ ಎಂದು ಹೇಳಲಾಗುವುದು. ಆಸ್ಟಿಯೋಕಾಲ್ಸಿನ್ ಎಂಬ ಪ್ರೋಟಿನ್ ಅನ್ನು ಸಕ್ರಿಯಗೊಳಿಸಲು ವಿಟಮಿನ್ ಕೆ2 ಬೇಕಾಗುವುದು. ಈ ಪ್ರೋಟೀನ್ ಕ್ಯಾಲ್ಸಿಯಮ್ ಮತ್ತು ಖನಿಜಗಳನ್ನು ಹಲ್ಲುಗಳಿಗೆ ಒಯ್ಯುತ್ತದೆ. ಇದರ ಕೊರತೆ ಇದ್ದಾಗ ಈ ಎಲ್ಲಾ ಕಾರ್ಯಗಳನ್ನು ತಡೆಯುವುದು. ಜೊತೆಗೆ ಹಲ್ಲುಗಳನ್ನು ದುರ್ಬಲಗೊಳಿಸುವುದು. ಜೊತೆಗೆ ಹಲ್ಲುಗಳ ನಷ್ಟ ಮತ್ತು ಒಸಡುಗಳಲ್ಲಿ ಅತಿಯಾದ ರಕ್ತ ಸ್ರಾವವನ್ನು ಉಂಟುಮಾಡುವುದು.

Leave a Reply

Your email address will not be published. Required fields are marked *