ಡಾಕ್ಟರ್ ಗಳನ್ನೇ ಬೆಚ್ಚಿಬೀಳಿಸುವ ಸೀಕ್ರೆಟ್ ಗಂಡಸರು ಹೆಚ್ಚಾಗಿ ಬೆಳ್ಳುಳ್ಳಿ ತಿಂದರೆ ತಪ್ಪದೇ ನೋಡಿ

ಬೆಳ್ಳುಳ್ಳಿಯನ್ನು ಮನೆಮದ್ದಾಗಿ ಹಿಂದಿನ ಕಾಲದಿಂದಲೂ ಬಳಸುತ್ತಿದ್ದರು. ಸಾಮಾನ್ಯ ಶೀತವಾದರೆ ಅದನ್ನು ಹೋಗಲಾಡಿಸುವುದಕ್ಕೆ ಬೆಳ್ಳುಳ್ಳಿಯನ್ನು ಬಳಸುತ್ತಿದ್ದರು. ಇನ್ನು ತ್ವಚೆಯಲ್ಲಿ ಹುಲ್ಲುಕಡ್ಡಿ ಆದರೆ ಬೆಳ್ಳುಳ್ಳಿ ರಸ ಹಚ್ಚಿದರೆ ಅದು ಮಾಯವಾಗುತ್ತದೆ. ಯಾರು ಪ್ರತಿದಿನ ಬೆಳ್ಳುಳ್ಳಿ ಎಸಳನ್ನು ಸೇವಿಸುತ್ತಾರೋ ಅವರು ಬೊಜ್ಜಿನ ಸಮಸ್ಯೆಯಿಂದ ಪಾರಾಗುತ್ತಾರೆ. ಇನ್ನು ಈ ಬೆಳ್ಳುಳ್ಳಿ ದೇಹವನ್ನು ಸೇರಿದರೆ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಬೆಳ್ಳುಳ್ಳಿಯನ್ನು ದಿನನಿತ್ಯ ಆಹಾರಗಳಲ್ಲಿ ಬಳಸುವುದರಿಂದ ಅದರ ರುಚಿ ಹೆಚ್ಚಾಗುವುದು ಮಾತ್ರವಲ್ಲ ಇದರ ಸೇವನೆಯಿಂದ ನಿಮ್ಮ ದೇಹಕ್ಕೆ ತುಂಬಾ ರೀತಿಯ ಆರೋಗ್ಯಕರ ಪ್ರಯೋಜನಗಳು ಸಿಗುತ್ತವೆ. ಬೆಳ್ಳುಳ್ಳಿ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಪ್ರತಿದಿನ ಒಂದು ಬೆಳ್ಳುಳ್ಳಿ ಸಣ್ಣ ಎಸಳನ್ನು ತಿನ್ನುವುದರಿಂದ ಪಚನಕ್ರಿಯೆ ಚೆನ್ನಾಗಿ ನಡೆದು ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ.ಇದ್ದರಿಂದ ಹಸಿವು ಹೆಚ್ಚಾಗುತ್ತದೆ.ಹಸಿವು ಕಡಿಮೆ ಆದಾಗ ಆಜೀರ್ಣ ಸಮಸ್ಸೆ ಇರುವವರು ಬೆಳ್ಳುಳ್ಳಿ ತಿಂದರೆ ಸಮಸ್ಯೆ ನಿವಾರಣೆಯಾಗುತ್ತದೆ.

ಹೃದಯದ ಸ್ವಸ್ತಾವನ್ನು ಹೆಚ್ಚಿಸುತ್ತದೆ. ಬೆಳ್ಳುಳ್ಳಿಯನ್ನು ತಿನ್ನುವುದರಿಂದ ರಕ್ತ ಸಂಚಾರ ಸರಾಗವಾಗಿ ನಡೆದು ಇದರಿಂದ ಹೃದಯದ ಆರೋಗ್ಯ ಹೆಚ್ಚಾಗುತ್ತದೆ. ಕೂದಲು ಮತ್ತು ಚರ್ಮದ ಆರೋಗ್ಯಕ್ಕೆ ಬೆಳ್ಳುಳ್ಳಿಯನ್ನು ಬಳಸಲಾಗುತ್ತದೆ. ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಇದರಲ್ಲಿರುವ ಪೋಷಕಾಂಶಗಳು ಕೂದಲನ್ನು ಆಂತರಿಕವಾಗಿ ಪೋಷಿಸುತ್ತದೆ. ಇನ್ನು ಹುಳಕಡ್ಡಿ ಅಂತಹ ಚರ್ಮ ಸಮಸ್ಸೆಗಳು ಇದ್ದಾರೆ ಬೆಳ್ಳುಳ್ಳಿ ರಸವನ್ನು ಹಚ್ಚಿದರೆ ಅದು ಕಡಿಮೆ ಆಗುತ್ತದೆ.

ಕ್ಯಾನ್ಸರ್ ವಿರುದ್ಧ ಈ ಬೆಳ್ಳುಳ್ಳಿ ಹೋರಾಡುತ್ತದೆ. ಬೆಳ್ಳುಳ್ಳಿಯಲ್ಲಿರುವ ಫ್ಲೋನೋಯಿಡ್ಸ್ ಎಂಬ ಅಂಶ DNA ಗೆ ಹಾನಿಯಾಗದಂತೆ ಕಾಪಾಡುತ್ತದೆ. ಇದರಿಂದ ಕ್ಯಾನ್ಸರ್ ಕಣಗಳು ಉಂಟಾಗುವುದನ್ನು ತಡೆಗಟ್ಟಬಹುದು. ಮಾನಸಿಕ ಒತ್ತಡವನ್ನು ನಿವಾರಣೆ ಮಾಡುತ್ತದೆ.ಮಾನಸಿಕ ಒತ್ತಡದಿಂದಗಿ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ಕಡಿಮೆ ಆದರೆ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಬೆಳ್ಳುಳ್ಳಿಯಲ್ಲಿ ಆಂಟಿಆಕ್ಸಿಡೆಂಟ್ ಅಂಶ ಹೆಚ್ಚಾಗಿರುತ್ತದೆ.ಇದು ದೇಹದಲ್ಲಿರುವ ಬೇಡವಾದಂತಹ ರಸಾಯನಿಕಗಳನ್ನು ಹೊರ ಹಾಕುವಂತೆ ಮಾಡುತ್ತದೆ.ಇದರಿಂದ ಮಾನಸಿಕ ಒತ್ತಡ ಕಡಿಮೆ ಆಗುತ್ತದೆ.ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿ ಇಡುತ್ತದೆ.

ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ತಮ್ಮ ಆಹಾರದಲ್ಲಿ ಬೆಳ್ಳುಳ್ಳಿ ಬಳಸುವುದರಿಂದ ತುಂಬಾ ಒಳ್ಳೆಯದಾಗುತ್ತದೆ.ಇನ್ನು ದಿನ ಬೆಳಗ್ಗೆ ಎರಡು ಎಸಳು ಹಸಿ ಬೆಳ್ಳುಳ್ಳಿ ತಿನ್ನುವುದರಿಂದ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿ ಇಡಬಹುದು. ಅಷ್ಟೇ ಅಲ್ಲದೆ ತುಂಬಾ ತೂಕ ಇರುವ ವ್ಯಕ್ತಿಗಳು ಮತ್ತು ಮೈ ತೂಕ ಹೆಚ್ಚಾಗಿ ಇರಬಾರದು ಹೊಟ್ಟೆ ಬೊಜ್ಜು ಇರಬಾರದು ಅಂತ ಅಂದುಕೊಂಡಿದ್ದಾರೆ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ 2 ಎಸಳು ಬೆಳ್ಳುಳ್ಳಿಯನ್ನು ತಿನ್ನುವುದನ್ನೂ ರೂಢಿ ಮಾಡಿಕೊಳ್ಳಿ. ದಿನ ಅರ್ಧ ಗಂಟೆ ವ್ಯಾಯಾಮ ಮತ್ತು ಎರಡು ಎಸಳು ಬೆಳ್ಳುಳ್ಳಿ ತಿಂದು ನೋಡಿ ನಿಮ್ಮ ಸೊಂಟದ ಗಾತ್ರ ಖಂಡಿತ ಕಡಿಮೆಯಾಗುತ್ತದೆ.

ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಶಕ್ತಿ ಬೆಳ್ಳುಳ್ಳಿಗೆ ಇದೆ. ಬೆಳ್ಳುಳ್ಳಿ ಎಸಳನ್ನು ಬಾಯಲ್ಲಿ ಇಟ್ಟುಕೊಳ್ಳುವುದರಿಂದ ಸಂಕ್ರಮಿಕ ರೋಗಗಳಾದ ಜ್ವರ ಮತ್ತು ಉಸಿರಾಟದ ತೊಂದರೆಯಿಂದ ಮುಕ್ತಿ ಪಡೆಯಬಹುದು. ಬೆಳ್ಳುಳ್ಳಿಯಲ್ಲಿರುವ ಅಲೈಸಿನ್ ಎಂಬ ಪೋಷಕಾಂಶ ರಕ್ತದಲ್ಲಿ ಟ್ರೈಗ್ಲಿಸರೈಡ್ ಪ್ರಮಾಣವನ್ನು ನಿಯಂತ್ರಣದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ.

ರಕ್ತವನ್ನು ಶುದ್ಧೀಕರಿಸಲು ಈ ಬೆಳ್ಳುಳ್ಳಿ ಸಹಾಯ ಮಾಡುತ್ತದೆ. ಬೆಳ್ಳುಳ್ಳಿ ತಿನ್ನುವುದರಿಂದ ಅದರಲ್ಲಿರುವ ಆಂಟಿಆಕ್ಸಿಡೆಂಟ್ ಗಳು ದೇಹದಲ್ಲಿರುವ ಬೇಡವಾದ ರಾಸಾಯನಿಕಗಳನ್ನು ಹೊರಹಾಕಿ ರಕ್ತವನ್ನು ಶುದ್ಧೀಕರಿಸುತ್ತದೆ. ಇನ್ನು ಬೆಳ್ಳುಳ್ಳಿಯಲ್ಲಿ ಇರುವ ಯಝೋನ್ ಎಂಬ ರಾಸಾಯನಿಕ ದೇಹದೊಳಗೆ ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟುತ್ತದೆ. ಇದರಿಂದ ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಬೆಳ್ಳುಳ್ಳಿಯನ್ನು ಬೇಯಿಸಿ ತಿನ್ನುವುದಕ್ಕಿಂತ ಹಸಿಯಾಗಿ ತಿಂದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೆಳ್ಳುಳ್ಳಿಯನ್ನು ಬೇಯಿಸುವುದರಿಂದ ಅದರಲ್ಲಿರುವ ಅಲೈಸಿನ್ ಪ್ರಭಾವ ಕಡಿಮೆಯಾಗುತ್ತದೆ.ಈ ಬೆಳ್ಳುಳಿಯನ್ನು ಮನೆಮದ್ದಾಗಿ ಬಳಸಿಕೊಳ್ಳಬಹುದು.ನೆಗಡಿ ಜ್ವರವನ್ನು ಹೋಗಲಾಡಿಸುವುದಕ್ಕೆ ಹಿರಿಯರು ಮನೆಮದ್ದಾಗಿ ಇದನ್ನು ಬಳಸುತ್ತಿದ್ದರು.ಸಣ್ಣ ಪುಟ್ಟ ಶೀತ,ಕೆಮ್ಮು,ಜ್ವರ ಬಂದರೆ ಇಂಗ್ಲಿಷ್ ಮಾತ್ರೆಗಳನ್ನು ಬಳಸುವುದಕ್ಕಿಂತ ಮನೆಯಲ್ಲಿ ಸಿಗುವ ವಸ್ತುಗಳನ್ನು ಬಳಸಿಕೊಂಡು ಸಮಾನ್ಯವಾಗಿ ಬರುವ ಜ್ವರಗಳನ್ನು ಹೋಗಲಾಡಿಸಿಕೊಳ್ಳಬಹುದು.

Leave a Reply

Your email address will not be published.

Previous Story

ಹಿಮೋಗ್ಲೋಬಿನ್ ಕಡಿಮೆ ಆಗಿದ್ದರೆ ಈ ಆಹಾರವನ್ನು ಸೇವಿಸಿ!

Next Story

ನಟಿ ಸಿಂಧೂ ಮೆನನ್ ಈಗ ಎಲ್ಲಿದ್ದಾರೆ ಏನು ಮಾಡ್ತಿದ್ದಾರೆ ಗೊತ್ತಾ

Latest from Featured-Article

ನಿಮ್ಮ ಬೆಡ್ ರೂಮ್ ನಲ್ಲಿ ಒಂದು ತುಂಡು ನಿಂಬೆ ಹಣ್ಣು ಇಟ್ಟುಕೊಂಡು ಮಲಗಿದರೆ ಏನಾಗುತ್ತೆ ಗೊತ್ತಾ?

ನಿಂಬೆಹಣ್ಣು ಹಲವಾರು ಲಾಭಗಳನ್ನು ನೀಡುವುದು ಹಾಗೂ ಹಲವು ಪ್ರಯೋಜನಗಳನ್ನು ಹೊಂದಿದೆ. ಮಲಗುವಂತಹ ಬೆಡ್ ರೂಮಿನಲ್ಲಿ ಒಂದು ತುಂಡು ನಿಂಬೆಹಣ್ಣು ಇಟ್ಟು ಮಲಗಿದರೆ

ಸುಲಭದಲ್ಲಿ ಶುಗರ್ ಲೆವೆಲ್ ಕಂಟ್ರೋಲ್ ಮಾಡ್ಬೇಕಾ?ಅಡುಗೆ ಮನೆಯಲ್ಲಿದೆ ಡಯಾಬಿಟಿಸ್ ಮನೆಮದ್ದು

ಇತ್ತೀಚಿನ ದಿನಗಳಲ್ಲಿ ಚಿಕ್ಕವರಿಂದ ಹಿಡಿದು ದೊಡ್ಡವರವರೆಗು ಡಯಾಬಿಟಿಸ್ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ.ಮನೆಮದ್ದುಗಳನ್ನು ಬಳಸಿ ಬ್ಲಡ್ ಶುಗರ್ ಲೆವೆಲ್ ಅನ್ನು ಕಂಟ್ರೋಲ್ ಮಾಡಿಕೊಳ್ಳಬಹುದು.

ನಿಲ್ಲಿಸದೆ 4 ದಿವಸ ಆಮ್ಲ ಕಾಯಿಯ ಜ್ಯೂಸ್ ಕುಡಿದರೆ ನಡೆಯುವ ಅದ್ಭುತಗಳನ್ನ ನೋಡಿ

ಆಮ್ಲ ಕಾಗಿ ದೇಹದ ಆರೋಗ್ಯಕ್ಕೆ ಉತ್ತಮ ಔಷಧಿಯಾಗಿ ಸಹಾಯ ಮಾಡುತ್ತದೆ. ಕೆಲವರು ಇದನ್ನು ಉಪ್ಪಿನಕಾಯಿ ಹಾಕಿಕೊಂಡು ತಿನ್ನುತ್ತಾರೆ ಹಾಗೂ ಇನ್ನು ಕೆಲವರು

ಹೃದಯಾಘಾತಕ್ಕೂ ಮೊದಲೇ ನಿಮ್ಮ ಶರೀರವು ನೀಡುವ 6 ಮುನ್ಸೂಚನೆಗಳು!

ಹೃದಯಾಘಾತ ಮತ್ತು ಪಾರ್ಶ್ವವಾಯು ವಿಶ್ವದಾದ್ಯಂತ ಸಾವುಗಳಿಗೆ ಪ್ರಮುಖ ಕಾರಣವಾಗಿದೆ. ಹೃದಯಕ್ಕೆ ರಕ್ತ ಪೂರೈಕೆಯಲ್ಲಿ ತೊಂದರೆ ಉಂಟಾದರೆ ಹೃದಯಾಘಾತ ಸಂಭವಿಸುತ್ತದೆ. ವ್ಯಕ್ತಿಗಳಿಗೆ ಹೃದಯಘಾತ