ಕಾಮಿಡ್ ಕಿಂಗ್ ವಿವೇಕ್ ಜೀವನ ಹೇಗಿತ್ತು ಗೋತ್ತಾ? ಓದಿ

Written by Anand raj

Published on:

ಸಾ ವು ಎಂಬುವುದು ಎಲ್ಲರ ಬದುಕಿನಲ್ಲಿ ಅಡಗಿ ಕುಳಿತುಕೊಂಡಿರುತ್ತದೆ. ತಮಿಳು ಹಾಸ್ಯ ನಟ ವಿವೇಕ್ ಏಪ್ರಿಲ್ 17ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 59 ವರ್ಷದ ವಯಸ್ಸಿನ ವಿವೇಕ್ ಅವರ ಸಾವು ಇಡೀ ಭಾರತೀಯ ಚಿತ್ರರಂಗವನ್ನು ಹತಾಶೆಗೆ ತಳ್ಳಿದೆ.ವಿವೇಕ್ ಅವರು ನಟ ಮಾತ್ರವಲ್ಲದೆ ಸಕ್ರಿಯ ಮಾನವತವಾದಿ ಮತ್ತು ಕಾಳಜಿವುಳ್ಳ ಪರಿಸರವಾದಿ ಆಗಿದ್ದರು.ತಮಿಳು ಚಿತ್ರರಂಗದಲ್ಲಿ ಹಾಸ್ಯಗಾರನಾಗಿ, ನಾಯಕನಟನಾಗಿ ಗುರುತಿಸಿಕೊಳ್ಳುವುದು ಅಷ್ಟು ಸುಲಭವಲ್ಲ.dfh

ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠಂ:ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್: ಶ್ರೀ ಶ್ರೀನಿವಾಸ್ ರಾಘವನ್ ಮಹರ್ಷಿ ಇದರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಕಾಳಹಸ್ತೇಶ್ವರ ಹಾಗೂ ಭದ್ರಕಾಳಿ ಆರಾಧಕರು ಇವರು ನಿಮ್ಮ ಎಲ್ಲಾ ಸಮಸ್ಯೆಗಳನ್ನು ಅರಿತು ನಿಮ್ಮ ಸರ್ವ ಸಮಸ್ಯೆಗಳಿಗೂ ಕೊಳ್ಳೇಗಾಲದ ಅಷ್ಟಾಂಗ ದಿಗ್ಬಂದನ ಪೂಜೆಗಳು ಮತ್ತು ಸರ್ವ ದಿಕ್ಪಲನಾ ಪೂಜೆಗಳು ಹಾಗೂ ಪ್ರಾಚೀನ ತಾಳೆಗರಿಯ ಮೂಲಕವೂ ಕೂಡ ನಿಮ್ಮ ಸಮಸ್ಯೆಯನ್ನು ವಿಶ್ಲೇಷಿಸಿ ಪರಿಹಾರವನ್ನು ತಿಳಿಸಿಕೊಡುತ್ತಾರೆ.ನಿಮ್ಮ ನಂಬಿಕೆಗೆ ಇಲ್ಲಿ ಸರಿಯಾದ ಮಾರ್ಗ ಮತ್ತು ಪರಿಹಾರ ದೊರಕುತ್ತದೆ ಈ ಕೆಳಗೆ ಕಾಣುತ್ತಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿ ನಿಮ್ಮ ಸಮಸ್ಯೆ ಹಾಗೂ ನಿಮ್ಮ ನೋವನ್ನು ಹಂಚಿಕೊಳ್ಳಿ 9513668855

ವಿವೇಕ್ ಅವರು ಮೂಲತಃ ತಮಿಳುನಾಡಿನ ತೆಂಕಾಸಿ ಜಿಲ್ಲೆಯವರು.1961 ನವೆಂಬರ್ 19 ರಂದು ಅಗೈ ಹಾಗೂ ಮನೈ ಎಂಬ ದಂಪತಿ ಮಗನಾಗಿ ವಿವೇಕ್ ಅವರು ಸಾಧಾರಣ ಕುಟುಂಬದಲ್ಲಿ ಜನಿಸಿದರು. ಮದುರೈ ಅಮೆರಿಕನ್ ಕಾಲೇಜಿನಲ್ಲಿ ತಮ್ಮ ಪದವಿ ವ್ಯಾಸಂಗವನ್ನು ಪೂರೈಸುತ್ತಾರೆ.ವಿವೇಕ್ ಮೊದಲು ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದರು. ಅವರ ಮೊದಲ ನಟನ ಕೆರಿಯರ್ ಆರಂಭವಾಗಿದ್ದು ಮದ್ರಾಸ್ ನ ಹಾನರ್ ಕ್ಲಬ್ ನಲ್ಲಿ. ಬಿಡುವಿನ ಸಮಯದಲ್ಲಿ ಹಾನರ್ ಕ್ಲಬ್ ಗೆ ಹೋಗುತ್ತಿದ್ದ ವಿವೇಕ್ ಅಲ್ಲಿ ನಡೆಯುತ್ತಿದ್ದ ಸ್ಟ್ಯಾಂಡಪ್ ಹಾಸ್ಯಗಳನ್ನು ಗಮನಿಸುತ್ತಿದ್ದರು.

ನಂತರ ಅಲ್ಲಿ ವಿವೇಕ್ ಅವರು ಭಾಗವಹಿಸಲು ಶುರುಮಾಡಿದರು.ವೀಕೆಂಡ್ ಸಮಯದಲ್ಲಿ ಮಧುರೈ ಯಿಂದ ಚೆನ್ನೈಗೆ ಬಂದು ಈ ಹಾನರ್ ಕ್ಲಬ್ ನಲ್ಲಿ ಭಾಗವಹಿಸುತ್ತಿದ್ದರು. ಹಾನರ್ ಕ್ಲಬ್ ಫೌಂಡರ್ ಪಿಆರ್ ಗೋವಿಂದರಾಜ್ ಅವರು ವಿವೇಕ್ ಅವರನ್ನು ಮೊಟ್ಟಮೊದಲು ತಮಿಳಿನ ಖ್ಯಾತ ನಿರ್ದೇಶಕರು ಆದ ಬಾಲಚಂದ್ರ ಅವರಿಗೆ ಪರಿಚಯಿಸುತ್ತಾರೆ.1983-1984 ಸಮಯದಲ್ಲಿ ಬಾಲಚಂದ್ರ ಅವರು ವಿವೇಕ್ ಅವರನ್ನು ತಮ್ಮ ಹಿನ್ನಲೆ ಕೆಲಸಕ್ಕೆ ನೇಮಕ ಮಾಡಿಕೊಳ್ಳುತ್ತಾರೆ.ವಿವೇಕ್ ಅವರು ಬಾಲಚಂದ್ರ ಅವರಿಗೆ ಒಂದೆ ರಾತ್ರಿ 16 ಪಾತ್ರದಾರರಿಗೆ ಸೂಕ್ತವದ ಸ್ಟ್ರಿಪ್ಟ್ ಬರೆದುಕೊಡುತ್ತಾರೆ.

ವಿವೇಕ್ ಅವರ ಕೆಲಸದ ವೈಖರಿಯನ್ನು ಗಮನಿಸಿದ ಬಾಲಚಂದ್ರ ಅವರು ತಮ್ಮ ಮನಿವೆಲ್ಲ ವಿಡೆಮ್ ಚಿತ್ರದಲ್ಲಿ ಮೊಟ್ಟ ಮೊದಲು ಸಣ್ಣ ಪಾತ್ರ ಕೊಡಲು ನಿರ್ಧಾರ ಮಾಡುತ್ತಾರೆ.ಈ ಸಿನಿಮಾದಲ್ಲಿ ನಟಿ ಸೋದರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.ನಂತರ ಇವರು ದೊಡ್ಡ ದೊಡ್ಡ ನಿರ್ದೇಶಕರ ಜೊತೆ ಕೆಲಸವನ್ನು ಮಾಡುತ್ತಾರೆ.90 ದಶಕದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೊತೆ ನಟಿಸುತ್ತಾರೆ. ನಿಜವಾದ ಯಶಸ್ಸಿಗಾಗಿ ಅವರು 1996 ರವರೆಗೂ ಕಾಯಬೇಕಾಗಿತ್ತು. ವಿವೇಕ್ ಅವರು ತಮ್ಮ ವಿಭಿನ್ನವಾದ ನಟನೆಯಿಂದ ಅಭಿಮಾನ ಗಳಿಸುವಲ್ಲಿ ಯಶಸ್ವಿಯಾದರು.1998 ರಲ್ಲಿ ಮಣಿರತ್ನಂ ಅವರ ಮೂರು ಚಿತ್ರಗಳಲ್ಲಿ ನಟಿಸಿದರು.ಕ್ರಮವಾಗಿ ಫಿಲ್ಮ್ ಫೇರ್ ಮತ್ತು ತಮಿಳು ನಾಡಿನ 5 ಸ್ಟೇಟ್ ಅವಾರ್ಡ್ ಪಡೆದರು.

2005 ರಲ್ಲಿ ಮತ್ತೊಂದು ಸಿನಿಮಾದಲ್ಲಿ ತೆರೆಕಂಡು. ಅದರಲ್ಲಿ ಹಾಸ್ಯ ನಟನ ಪಾತ್ರ ಎಲ್ಲರಿಗೂ ತುಂಬಾ ಇಷ್ಟವಾಯಿತು. ಈ ಸಿನಿಮಾಕ್ಕೆ ಫಿಲ್ಮ್ ಫೇರ್ ಅವರ್ಡ್ ಪಡೆದುಕೊಂಡರು.ಶಿವಾಜಿ ಚಿತ್ರದಲ್ಲಿ ಹಾಸ್ಯ ನಟ ಪಾತ್ರಕ್ಕೆ ಬೆಸ್ಟ್ ಕಾಮಿಡಿಯನ್ ಅವಾರ್ಡ್ ಸಿಕ್ಕಿತು.ವಿವೇಕ್ ಸಿನಿಮಾ ಲೋಕದ ಸಾಧನೆಗಾಗಿ ಗೌರವ ಡಾಕ್ಟರೇಟ್ ಮತ್ತು ಭಾರತ ಸರ್ಕಾರದಿಂದ ಪದ್ಮಶ್ರೀ ಪುರಸ್ಕಾರಗಳು ಸಿಕ್ಕಿದೆ.220ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ್ದಾರೆ.ಅಷ್ಟೇ ಅಲ್ಲದೆ ಸಾಮಾಜಿಕ ಚಟುವಟಿಕೆಯಲ್ಲೂ ಭಾಗವಯಿಸುತ್ತಿದ್ದರು. ವಿವೇಕ್ ಅವರಿಗೆ ಮೂರು ಮಕ್ಕಳು.

2016 ರಲ್ಲಿ ಚೆನ್ನೈ ಸೀಟಿನಲ್ಲಿ ಡೆಂಗ್ಯೂ ಜ್ವರ ವ್ಯಾಪಕವಾಗಿತ್ತು. ಇದರ ಅರಿವನ್ನು ಮೂಡಿಸುವಲ್ಲಿ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದರು.2016 ರಲ್ಲಿ ವಿವೇಕ್ ಅವರ ಮಗ ಡೆಂಗ್ಯೂ ಜ್ವರದಿಂದ ಪ್ರಾಣವನ್ನು ಬಿಟ್ಟರು.ತಮ್ಮ ಮಗನ ಹೆಸರಿನಲ್ಲಿ ಸಾಯಿ ಪ್ರಸನ್ನ ಎನ್ನುವ ಟ್ರಸ್ಟ್ ಸ್ಥಾಪಿಸಿ ಅದರಲ್ಲಿ ಗ್ರೀನ್ ಕಲಾಂ ಎನ್ನುವ ಯೋಜನೆ ರೂಪಿಸಿ ಗಿಡ ನೆಡುವುದಕ್ಕೆ ಶುರುಮಾಡಿದರು.ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಮಗನನ್ನು ಕಾಣ್ಣುತ್ತಿರುವ ವಿವೇಕ್ ನಿಜವಾಗಿಯೂ ಗ್ರೇಟ್. ಏಪ್ರಿಲ್ 16ರಂದು ವಿಪರೀತ ಎದೆನೋವು ಕಾಣಿಸಿಕೊಂಡಿದ್ದು ಸಂಜೆಯ ವೇಳೆ ಚನ್ನೈ ಹಾಸ್ಪಿಟಲ್ ಗೆ ಸಾಗಿಸಲಾಗಿತ್ತು ಆದರೆ ಏಪ್ರಿಲ್ 17ರಂದು ಉಸಿರಾಡಲು ತೊಂದರೆಯಾಗಿ ಸಾ ವನ್ನಪ್ಪಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ.

ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠಂ:ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್: ಶ್ರೀ ಶ್ರೀನಿವಾಸ್ ರಾಘವನ್ ಮಹರ್ಷಿ ಇದರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಕಾಳಹಸ್ತೇಶ್ವರ ಹಾಗೂ ಭದ್ರಕಾಳಿ ಆರಾಧಕರು ಇವರು ನಿಮ್ಮ ಎಲ್ಲಾ ಸಮಸ್ಯೆಗಳನ್ನು ಅರಿತು ನಿಮ್ಮ ಸರ್ವ ಸಮಸ್ಯೆಗಳಿಗೂ ಕೊಳ್ಳೇಗಾಲದ ಅಷ್ಟಾಂಗ ದಿಗ್ಬಂದನ ಪೂಜೆಗಳು ಮತ್ತು ಸರ್ವ ದಿಕ್ಪಲನಾ ಪೂಜೆಗಳು ಹಾಗೂ ಪ್ರಾಚೀನ ತಾಳೆಗರಿಯ ಮೂಲಕವೂ ಕೂಡ ನಿಮ್ಮ ಸಮಸ್ಯೆಯನ್ನು ವಿಶ್ಲೇಷಿಸಿ ಪರಿಹಾರವನ್ನು ತಿಳಿಸಿಕೊಡುತ್ತಾರೆ.ನಿಮ್ಮ ನಂಬಿಕೆಗೆ ಇಲ್ಲಿ ಸರಿಯಾದ ಮಾರ್ಗ ಮತ್ತು ಪರಿಹಾರ ದೊರಕುತ್ತದೆ ಈ ಕೆಳಗೆ ಕಾಣುತ್ತಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿ ನಿಮ್ಮ ಸಮಸ್ಯೆ ಹಾಗೂ ನಿಮ್ಮ ನೋವನ್ನು ಹಂಚಿಕೊಳ್ಳಿ 9513668855

Related Post

Leave a Comment