ಬಿಲ್ವ ಪತ್ರೆ ಔಷಧಗಳ ಭಂಡಾರ ಇದು ಈ ಎಲ್ಲಾ ಕಾಯಿಲೆಗೂ ಮನೆಮದ್ದು ಹೀಗೆ ಬಳಸಿ ನೋಡಿ!

Written by Anand raj

Published on:

ಉತ್ತರ ಭಾರತದ ಮೂಲನಿವಾಸಿಯಾದ ಈ ಮರ ಸಾಮಾನ್ಯವಾಗಿ ಉಷ್ಣ ಪ್ರದೇಶಗಳಲ್ಲಿ ಬೆಟ್ಟಗುಡ್ಡಗಳಲ್ಲಿ ಮತ್ತು ಶಿವನ ದೇವಾಲಯಗಳ ಸಮೀಪ ಹೆಚ್ಚು ಕಾಣುವುದು. ಬಾಂಗ್ಲದೇಶ, ಬರ್ಮಾ, ಥಾಯ್ಲೆಂಡ್‌, ಶ್ರೀಲಂಕಾ ಮತ್ತು ಪಾಕಿಸ್ತಾಸಗಳಲ್ಲಿ ಬೆಳೆಯುವುದು. ಮಧ್ಯಮ ಗಾತ್ರ ಬೆಳೆಯುವ ವೃಕ್ಷ . ಬೇಸಿಗೆಯಲ್ಲಿ ಎಲೆಗಳು ಉದುರುತ್ತವೆ. ಮರದ ಕಾಂಡವು ದೂಸರ ಬಣ್ಣದಿದ್ದು ಮುಳ್ಳುಗಳಿಂದ ಕೂಡಿದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಬಿಲ್ವವು ಸಂಗ್ರಾಹಿಕ (ಹಿಡಿದಿಟ್ಟುಕೊಳ್ಳುವ ಕ್ರಿಯೆ) ದೀಪನ (ಹಸಿವನ್ನು ಹೆಚ್ಚಿಸುವ) ಮತ್ತು ಕಫವಾತಶಾಮಕ ಮಾಡುವ ಔಷಧಿಗಳಲ್ಲೇ ಸರ್ವಶ್ರೇಷ್ಠ ಔಷಧಿ ಬಿಲ್ವ ಎಂದು ಚರಕ ಸಂಹಿತೆಯಲ್ಲಿ ಉಲ್ಲೇಖವಿದೆ. ಆದ್ದರಿಂದ ಇದು ಜೀರ್ಣಕ್ರಿಯೆಗಳಿಗೆ ಸಂಬಂಧಿದ ರೋಗಗಳಲ್ಲಿ ಹೆಚ್ಚು ಬಳಕೆಯಲ್ಲಿದೆ.

ಬಿಲ್ವವು ಸಮಾನ್ಯವಾಗಿ ಲಘು,ರೂಕ್ಷ ಗುಣಗಳಿಂದ, ತಿಕ್ತ ರಸದಿಂದ ಕೂಡಿದ್ದು ಉಷ್ಣವೀರ್ಯ ಉಳ್ಳದ್ದು. ಜಠರಾಗ್ನಿಯನ್ನು ಮತ್ತು ಪಿತ್ತವನ್ನು ಹೆಚ್ಚು ಮಾಡುವುದು. ಕಫ ವಾತಹರವಾಗಿದೆ. ಆಹಾರವನ್ನು ಜೀರ್ಣಿಸುವಲ್ಲಿ ಪ್ರಮುಖ ಪಾತ್ರವಹಿಸುವುದು ಮತ್ತು ಬಲಕಾರಕವಾಗಿದೆ. ಬಿಲ್ವ ವೃಕ್ಷ ದ ಪ್ರತಿಯೊಂದು ಭಾಗವು ಔಷಧಿಯುಕ್ತವಾಗಿದೆ. ಮರದಲ್ಲಿನ ವಿವಿಧ ಭಾಗಗಳು ವಿವಿಧ ಔಷಧಿ ಗುಣ ಕರ್ಮಗಳನ್ನು ಹೊಂದಿರುವುದು ವಿಶೇಷ.

ದಶಮೂಲಾರಿಷ್ಟ ತಯಾರಿಕೆಯಲ್ಲಿ ಬಿಲ್ವದ ಬೇರನ್ನು ಉಪಯೋಗಿಸುವರು. ದಶಮೂಲಾರಿಷ್ಟವು ಉತ್ತಮ ವಾತಹರವಾಗಿದೆ. ನೋವುನಿವಾರಕ ಕಷಾಯಗಳಲ್ಲಿ ದಶಮೂಲ ಕ್ವಾಥವು ಅತ್ಯಂತ ಉಪಯೋಗವಾಗಿದೆ. ಬಾಣಂತಿಯರು ದಶಮೂಲಾರಿಷ್ಟವನ್ನು ಬಳಸುವುದರಿಂದ ಹೆರಿಗೆ ನಂತರದ ನೋವುಗಳು ನಿವಾರಣೆಯಾಗಿ ದೇಹ ಮತ್ತು ಗರ್ಭಾಶಯಕ್ಕೆ ಬಲ ಬರುವುದು.

ಧನ್ವಂತರಿ ಬಿಲ್ವ ಪತ್ರೆ–ಎಲೆಯ ತಾಜಾ ರಸವನ್ನು 10 ಎಂ.ಎಲ್‌ ಬೆಳೆಗ್ಗೆ ರಾತ್ರಿ ಕುಡಿಯುವುದರಿಂದ ಮಧುಮೇಹ ಹತೋಟಿಗೆ ಬರುವುದು. ಬಿಲ್ವದ ಹಣ್ಣಿನ ತಿರುಳನ್ನು ಬೆಲದ ಹಣ್ಣಿನ ತಿರುಳಿನಂತೆ ತಿನ್ನುವ ಅಭ್ಯಾಸ ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿದೆ. ಮಂಗರಸನ ಸೂಪಶಾಸ್ತ್ರದಲ್ಲಿ ಬಿಲ್ವದ ತಿರುಳಿನಿಂದ ಪಾನಕ ತಯಾರಿಸುವ ಕ್ರಮವನ್ನು ವಿವರಿಸಲಾಗಿದೆ. ತಿರುಳಿಗೆ ಬೆಲ್ಲ, ಎಲಕ್ಕಿ ಸೇರಿಸಿ ಪಾನಕ ಮಾಡಿ ಕುಡಿಯುವುದರಿಂದ ಬಾಯಾರಿಕೆ, ವಸಡುಗಳಲ್ಲಿ ರಕ್ತಸ್ರಾವ ಮತ್ತು ಬಾಯಿ ವಾಸನೆ ಬರುವುದು ನಿಲ್ಲುವುದು.

ಬಿಲ್ವ ಫಲದ ಅಂಶಗಳು-ಬಿಲ್ವ ಫಲದಲ್ಲಿ ಹೇರಳವಾದ ಪೋಷಕಾಂಶಗಳು ಇರುವುದರಿಂದ ಆಹಾರವಾಗಿಯೂ ಫಲ ಉಪಯುಕ್ತವಾಗಿದೆ. 100 ಗ್ರಾ ಹಣ್ಣಿನ ತಿರುಳಿನಲ್ಲಿ ತೇವಾಂಶ 62.2 ಗ್ರಾಂ, ಸಸಾರಜನಕ 1.8 ಗ್ರಾಂ, ಮೇದಸ್ಸು 0.39ಗ್ರಾಂ ಖನಿಜಪದಾರ್ಥ 1.7ಗ್ರಾಂ, ನಾರು 2.2 ಗ್ರಾಂ, ಶರ್ಕರ ಪಿಷ್ಟ 31.8 ಗ್ರಾಂ, ಸುಣ್ಣ 0.09 ಗ್ರಾಂ, ರಂಜಕ 0.05 ಗ್ರಾಂ, ಕಬ್ಬಿಣ 0.3 ಗ್ರಾಂ, ‘ಎ’ ಜೀವಸತ್ವ 186 ಐ.ಯು, ರೈಬೋಪ್ಲವಿನ್‌ 1.19ಮಿ.ಗ್ರಾಂ,ಥಯಾಮಿನ್‌ 0.13 ಮಿ.ಗ್ರಾಂ, ನಿಯಾಸಿನ್‌ 1.10 ಮಿ.ಗ್ರಾಂ, ನಿಕೋಟಿನ್‌ ಆಮ್ಲ 0.09 ಮಿ.ಗ್ರಾಂ, ಸಿ ಜೀವಸತ್ವ 15 ಮಿ.ಗ್ರಾಂ ಪೋಷಕಾಂಶಗಳಿರುತ್ತವೆ. 100 ಗ್ರಾಂ ಹಣ್ಣಿನ ತಿರುಳನ್ನು ತಿನ್ನುವುದರಿಂದ 129 ಕ್ಯಾಲೋರಿಗಳು ದೇಹಕ್ಕೆ ಸಿಗುತ್ತದೆ.

ಅತಿಸಾರ,ರಕ್ತಾತಿಸಾರ ಮತ್ತು ಆಮಶಂಕೆ ಭೇದಿಯಲ್ಲಿ ಬಿಲ್ವದ ಅಪಕ್ವ ಫಲವು ಹೆಚ್ಚು ಪರಿಣಾಮಕಾರಿಯಾಗಿದೆ. 12ಗ್ರಾಂ ಕಾಯಿಯ ತಿರುಳಿಗೆ 12ಗ್ರಾಂ ಬೆಲ್ಲ ಸೇರಿಸಿ ಸಿಹಿ ಮಜ್ಜಿಗೆಯೊಡನೆ ಕದಡಿ ಕುಡಿಯುವುದರಿಂದ ಭೇದಿ ನಿಲ್ಲುವುದು. ತಿರುಳನ್ನು ಒಣಗಿಸಿ ಪುಡಿ ಮಾಡಿಕೊಂಡು ಶೇಖರಿಸಿಕೊಂಡು ಉಪಯೋಗಿಸಬಹುದು.ಅಪಕ್ವ ಹಣ್ಣಿನ ತಿರುಳಿಗೆ ಶುಂಠಿ, ಜೀರಿಗೆ ಹಾಕಿ ಕಷಾಯ ಮಾಡಿ ದಿನಕ್ಕೆರಡು ಬಾರಿ ಉಪಯೋಗಿಸುವುದರಿಂದ ಮೂಲವ್ಯಾಧಿ ಗುಣವಾಗುವುದು.

ಹಣ್ಣಿನ ಉಪಯೋಗ–ಪಕ್ವ ಹಣ್ಣಿನ ತಿರುಳನ್ನು ತಿನ್ನುವುದರಿಂದ ಮಲಜಾರಿಸುವುದು. ತಿರುಳನ್ನು ನೀರಿನಲ್ಲಿ ಕದಡಿ ಹಾಲು ಮತ್ತು ಸಕ್ಕರೆ ಸೇರಿಸಿ ಕುಡಿಯುವುದರಿಂದ ಮೂತ್ರ ಸರಗವಾಗಿ ಹೋಗುವುದು. ಹಣ್ಣಿನ ತಿರುಳಿಗೆ ಹಾಲಿನ ಕೆನೆ ಸೇರಿಸಿ ತಿನ್ನುವುದರಿಂದ ಮೆದುಳು ಮತ್ತು ಹೃದಯ ಬಲಗೊಳ್ಳುತ್ತವೆ. ರಕ್ತ ಹಿನತೆ ಕಡಿಮೆಯಾಗುವುದು.

ಪಕ್ವ ಹಣ್ಣಿನ ತಿರುಳನ್ನು ತಲೆಗೆ ಹಚ್ಚಿ ಸ್ವಲ್ವ ಹೊತ್ತು ಬಿಟ್ಟು ಸ್ನಾನ ಮಾಡುವುದರಿಂದ ತಲೆ ಹೊಟ್ಟು ನಿವಾರಣೆಯಾಗುವುದು ಮತ್ತು ಕೂದಲು ಹೊಳಪನ್ನು ಹೊಂದುವವು. ಹಣ್ಣಿನ ಫೇಸ್‌ ಪ್ಯಾಕ್‌ ಮಾಡುವುದರಿಂದ ಮುಖದ ಚರ್ಮಕ್ಕೆ ಬಲ ಬರುವುದು

ತೊಗಟೆಯಲ್ಲಿದೆ ಆರೋಗ್ಯ–ಬೇರು ಮತ್ತು ತೊಗಟೆಯ ಕಷಾಯವನ್ನು ತಯಾರಿಸಿಕೊಂಡು ಕುಡಿಯುವುದರಿಂದ ಮನಸ್ಸಿನ ಉದ್ವೇಗ ಕಡಿಮೆಯಾಗುವುದಲ್ಲದೆ ಹೃದಯಕ್ಕೆ ಹಿತವೆನ್ನಿಸುವುದು.ಎಲೆಯನ್ನು ಅರೆದು ನೋವುವಿರುವ ಜಾಗಕ್ಕೆ ಕಟ್ಟಿದರೆ ನೋವು ಶಮನವಾಗುವುದು. ಎಲೆಯ ರಸಕ್ಕೆ ಕರಿಮೆಣಸು ಸೇರಿಸಿ ಕಮಾಲೆ ರೋಗದಲ್ಲಿ ಕೊಡುವರು.ಬಿಲ್ವ ಪತ್ರೆಯ ರಸವನ್ನು ಖಾಲಿ ಹೊಟ್ಟೆಗೆ ದಿನಕ್ಕೆರಡು ಬಾರಿ ಸೇವಿಸುವುದರಿಂದ ಬೊಜ್ಜು ಕಡಿಮೆಯಾಗುವುದು.

ಬಿಲ್ವ ಸಂಶೋಧನೆಗಳ ಕಿರುನೋಟ :ಬಿಲ್ವದ ಉತ್ತಮ ಔಷಧಿಗುಣಗಳನ್ನು ಅರಿತ ಆಧುನಿಕ ವೈಧ್ಯಕೀಯ ವಿಜ್ಞಾನ ಅದರ ಒಳಹೊಕ್ಕು ವಿಜ್ಞಾನದ ಅಳೆತೆಗೋಲಲ್ಲಿ ಔಷಧಿ ಕರ್ಮಗಳನ್ನು ವಿಸ್ತಾರವಾಗಿ ಅರಿತುಕೊಳ್ಳಲು ಬಿಲ್ವದ ಬಗ್ಗೆ ಪ್ರಯೋಗಿಕ ಸಂಶೋಧನೆಗಳನ್ನು ನಡೆಸಿದೆ. ಈ ಕೆಳಗಂಡ ವಿಚಾರಗಳು ಸಂಶೋಧನೆಗಳಿಂದ ದೃಢಪಟ್ಟಿವೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಬಿಲ್ವದ ಎಲೆ ಮತ್ತು ಹಣ್ಣಿನ ತಿರುಳು ಮತ್ತು ಬೀಜ ಯಕೃತ್ತನ್ನು ರಕ್ಷಿಸುತ್ತವೆ.ಎಲೆಗಳಲ್ಲಿ ರಕ್ತದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮತ್ತು ಹಣ್ಣಿನ ತಿರುಳಿನಲ್ಲಿ ಕೊಲೆಸ್ಟ್ರಾಲ್‌ ಕಡಿಮೆ ಮಾಡುವ ಗುಣವಿದೆ.ಎಲೆಗಳಲ್ಲಿ ನೋವು ನಿವಾರಕ, ನಂಜು ನಿವಾರಕ, ಮತ್ತು ಜ್ವರಹರ ಮತ್ತು ಕ್ಯಾನ್ಸರ್‌ ಗುಣಪಡಿಸುವ ಗುಣಗಳಿವೆ. ಎಲೆ ಹೈಪರ್‌ಥೈರಾಡಿಸಮ್‌ನಲ್ಲಿ ಪರಿಣಾಮಕಾರಿಯಾದ ಔಷಧಿಯಾಗಿದೆ.ಕ್ಯಾನ್ಸರ್‌ಗೆ ರೇಡಿಯೇಷನ್‌ನಿಂದ ಚಿಕಿತ್ಸೆ ನೀಡುವಾಗ ಹಲವಾರು ದುಷ್ಪಾರಿಣಾಗಳು ಉಂಟಾಗುತ್ತವೆ. ಇದರಿಂದ ಆರೋಗ್ಯವಂತ ಜೀವಕೋಶಗಳೂ ನಾಶವಾಗುತ್ತವೆ. ಬಿಲ್ವ ರೇಡಿಯೋ ಪ್ರೋಟೆಕ್ಟೀವ್‌ ಆಗಿ ಕೆಲಸ ಮಾಡುವುದು. ರೇಡಿಯೇಷನ್‌ ನಂತರದ ಅಡ್ಡಪರಿಣಾಮಗಳಿಗೆ ಬಿಲ್ವ ಆಶಾಕಿರಣವಾಗಿದೆ.ಬಿಲ್ವಪತ್ರೆಯಕಾಯಿ ಮತ್ತು ಅದರ ಬೀಜವನ್ನು ಬಳಸುವುದರಿಂದ ಹೊಟ್ಟೆಯಲ್ಲಿ ಅಲ್ಸರ್‌ ಗುಣವಾಗುತ್ತದೆ.ಶಿವನಿಗೆ ಇಷ್ಟವಾದ ಬಿಲ್ವ ಮಾನವ ಆರೋಗ್ಯ ರಕ್ಷಿಸುವ ಬಹು ಉಪಯೋಗಿ ವೃಕ್ಷ ವಾಗಿದೆ.

Related Post

Leave a Comment