ದಿನಾ ಬೆಳಿಗ್ಗೆ ಎದ್ದ ತಕ್ಷಣ ಸಪೋಟ ಹಣ್ಣು ತಿಂದರೆ ನಿಮ್ಮ ದೇಹ ಏನಾಗುತ್ತದೆ ಗೊತ್ತಾ!

Written by Anand raj

Published on:

ಹಣ್ಣುಗಳನ್ನು ಇಷ್ಟ ಪಡದೆ ಯಾರಿದ್ದಾರೆ ಹೇಳಿ?ರುಚಿ ರುಚಿಯಾದ ಹಣ್ಣುಗಳನ್ನು ಸವಿದು ತಿನ್ನುವುದೇ ಒಂದು ತರಹದ ಖುಷಿ .ಹಣ್ಣುಗಳೆಂದ ಕೂಡಲೇ ತಕ್ಷಣ ಮೂಸಂಬಿ ,ಕಿತ್ತಲೆ ,ಕಲ್ಲಂಗಡಿ ,ಅನಾನಸ್ ,ಬಾಳೆಹಣ್ಣು ,ಸಪೋಟ ,ಸೀಬೆ ,ಆಪಲ್ ,ಮಾವಿನ ಹಣ್ಣು ,ದಾಳಿಂಬೆ ಹೀಗೆ ನಾನಾ ನಮೂನೆಯ ಹಣ್ಣುಗಳ ಚಿತ್ರಣ ನಮ್ಮ ಕಣ್ಣ ಮುಂದೆ ಹಾದು ಹೋಗುತ್ತದೆ.ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡಿ ಆರೋಗ್ಯವನ್ನು ವೃದ್ಧಿಸುವಲ್ಲಿ ಸಹಕರಿಸುವ ಹಣ್ಣುಗಳ ಪೈಕಿ ಸಪೋಟವೂ ಒಂದು .ಚಿಕ್ಕು ,ಸ್ಪಾಡಿಲ್ಲ ಫ್ರೂಟ್ ,ನೋಸ್ ಬೆರ್ರಿ ,ಸಪೋದಿಲ್ಲಾ ಪ್ಲಂ ಎಂದು ಕರೆಯಲ್ಪಡುವ ಕಂದು ಬಣ್ಣದ ಈ ಹಣ್ಣು ಸಪೋಟೇಸಿ ಸಸ್ಯ ವರ್ಗಕ್ಕೆ ಸೇರಿದ್ದು.

ದೇಹಕ್ಕೆ ಅಗತ್ಯವಿರುವಂತಹ ವಿಟಮಿನ್,ನಾರಿನಾಂಶ ,ಪೋಷಕಾಂಶ ,ಕ್ಯಾಲ್ಸಿಯಂ ,ರಂಜಕ,ಕಬ್ಬಿಣ ಅಂಶಗಳು ಸಪೋಟದಿಂದ ದೊರೆಯುತ್ತದೆ.ಇದರಲ್ಲಿ ರುಚಿಯಾದ ತಿರುಳು ಸುಲಭವಾಗಿ ಜೀರ್ಣವಾಗುವುದು ಮಾತ್ರವಲ್ಲದೆ ಸಪೋಟದಲ್ಲಿರುವ ಅಧಿಕ ಪ್ರಮಾಣದ ಗ್ಲೂಕೋಸ್ ಅಂಶ ದೇಹಕ್ಕೆ ಚೈತನ್ಯ ನೀಡುತ್ತದೆ.

ವಿಟಮಿನ್ ಎ ಇದರಲ್ಲಿ ಅಧಿಕವಾಗಿದ್ದು ,ದೃಷ್ಟಿ ದೋಷಕ್ಕೆ ಇದು ರಾಮಬಾಣ.ಕಣ್ಣುಗಳಿಗೆ ಅಗತ್ಯವಿರುವಂತಹ ಪೋಷಕಾಂಶಗಳು ಇದರಲ್ಲಿರುವುದರಿಂದ ಕಣ್ಣುಗಳ ಆರೋಗ್ಯಕ್ಕೂ ಇದು ಉತ್ತಮವಾಗಿದೆ.

ಚಿಕ್ಕುವಿನಲ್ಲಿರುವ ಕ್ಯಾಲ್ಸಿಯಂ ,ಗಂಧಕ ,ಕಬ್ಬಿಣ ,ಮುಂತಾದ ಖನಿಜಾಂಶಗಳು ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು.ಇದರಿಂದ ಮೂಳೆಗಳು ಉತ್ತಮ ಬಲವನ್ನು ಪಡೆಯುತ್ತದೆ .ಸಪೋಟದಲ್ಲಿ ಅಡಕವಾಗಿರುವ ನಾರಿನಾಂಶ ಮಲಬದ್ಧತೆಯನ್ನು ನೀಗಿಸುವಲ್ಲಿ ಸಹಕಾರಿ.ಮೂತ್ರಪಿಂಡದಲ್ಲಿ ಕಲ್ಲುಗಳಾಗಿದ್ದರೆ ಸಪೋಟ ಹಣ್ಣಿನ ಬೀಜಗಳನ್ನು ಪುಡಿ ಮಾಡಿ,ಒಂದು ಲೋಟ ನೀರಿನೊಂದಿಗೆ ಬೆರೆಸಿ ಕುಡಿದರೆ ಆಯಿತು.ಪ್ರತಿ ದಿನ ಇದರ ಸೇವನೆಯಿಂದ ಮೂತ್ರ ಹೆಚ್ಚಾಗುವುದು ಮತ್ತು ಕಲ್ಲು ಕರಗಿ ವಿಸರ್ಜಿಸಲು ನೆರವಾಗುತ್ತದೆ.
ಇದು ದೊಡ್ಡ ಕರುಳಿನ ಒಳ ಚರ್ಮವನ್ನು ಕಾಪಾಡುತ್ತದೆ.

ಸೋಂಕುಗಳು ಬಾರದಂತೆ ತಡೆಯುವ ಶಕ್ತಿ ಇದಕ್ಕಿದೆ .ಅನ್ನನಾಳದ ಕರಳು, ಜಠರದ ಉರಿಯೂತವನ್ನು ತಡೆಗಟ್ಟುವ ಚಿಕ್ಕು ಜೀರ್ಣಾಂಗದ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ.ಇದರಲ್ಲಿ ಸೆಡೆಟಿನ್ ಅಂಶ ಹೇರಳವಾಗಿದ್ದು,ಒತ್ತಡವನ್ನು ಕಡಿಮೆ ಮಾಡಿ ನರಗಳನ್ನು ಶಾಂತಗೊಳಿಸುತ್ತದೆ.

ನಿದ್ರಾಹೀನತೆ ,ಆತಂಕ,ಖಿನ್ನತೆಯಿಂದ ಬಳಲುತ್ತಿರುವವರು ಸಪೋಟ ತಿಂದರೆ ಒಳ್ಳೆಯದು.
ಸಪೋಟ ದಲ್ಲಿರುವ ವಿಟಮಿನ್ ಸಿ ಅತ್ಯುತ್ತಮ ಆಂಟಿ ಆಕ್ಸಿಡೆಂಟ್ ಆಗಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಇದರಿಂದ ಹಲವು ಸೋಂಕುಗಳಿಂದ ದೇಹ ರಕ್ಷಣೆ ಪಡೆಯುತ್ತದೆ.ಸಪೋಟದ ಬೀಜಗಳನ್ನು ಚೆನ್ನಾಗಿ ಅರೆದು ಪೇಸ್ಟ್ ಮಾಡಿ ಹರಳೆಣ್ಣೆಯ ಜೊತೆ ಮಿಕ್ಸ್ ಮಾಡಿಕೊಂಡು ನೆತ್ತಿಯ ಮೇಲೆ ಹಚ್ಚಿ ಒಂದು ರಾತ್ರಿ ಕಳೆದು ಮಾರನೆ ದಿನ ತೊಳೆಯಬೇಕು.ಇದರಿಂದ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ ಮತ್ತು ಕೂದಲು ಮೃದುವಾಗುತ್ತದೆ.

ಸಪೋಟದಲ್ಲಿರುವ ಕಾರ್ಬೋಹೈಡ್ರೇಟ್ಸ್ ಮತ್ತು ಪೋಷಕಾಂಶಗಳು ಗರ್ಭಿಣಿಯರಿಗೆ ತುಂಬಾ ಒಳ್ಳೆಯದು ಇದರಿಂದ ವಾಕರಿಕೆ , ತಲೆ ತಿರುಗುವುದು , ಸುಸ್ತು ಕಡಿಮೆಯಾಗುತ್ತದೆ.ಈ ಎಲ್ಲ ಕಾರಣಗಳಿಂದ ಬಾಯಿಗೆ ರುಚಿಯಾಗಿರುವ ಸಪೋಟ ಆರೋಗ್ಯಕ್ಕೂ ಒಳ್ಳೆಯದು .

ಧನ್ಯವಾದಗಳು.

Related Post

Leave a Comment