ಈ 9 ವಸ್ತುಗಳನ್ನು ಮೊದಲು ಮನೆಯಿಂದ ಎಸೆಯಿರಿ.ಇಲ್ಲ ಅಂದ್ರೆ ಏನಾಗುತ್ತೆ ಗೊತ್ತಾ?

Featured-Article

ಮನೆಯಲ್ಲಿ ಈ 9 ವಸ್ತುಗಳನ್ನು ಇಟ್ಟಿದ್ದರೆ ಮನೆಯಲ್ಲಿ ತುಂಬಾ ಕಷ್ಟವನ್ನು ಅನುಭವಿಸುತ್ತೀರಿ.ತುಂಬಾ ನಷ್ಟವನ್ನು ಅನುಭವಿಸುತ್ತಿದ್ದಾರೆ ಅದಕ್ಕೆ ಮುಖ್ಯ ಕಾರಣ ವಾಸ್ತು ದೋಷ ಎಂದು ಜ್ಯೋತಿಷ್ಯರು ಹೇಳುತ್ತಾರೆ.ಜೀವನದ ಹೆಚ್ಚಿನ ಸಮಯವನ್ನು ಕಳೆಯುವುದು ಮನೆಯಲ್ಲಿ. ಮನೆಯ ನಾಲ್ಕು ಗೋಡೆಗಳಲ್ಲಿ ಇರುವ ಶಕ್ತಿಯೇ ನಿಮ್ಮ ಅದೃಷ್ಟ ಮತ್ತು ದುರದೃಷ್ಟಕ್ಕೆ ಕಾರಣ.ಕೆಲವು ವಸ್ತುಗಳು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿದರೆ ಇನ್ನು ಕೆಲವು ಬಡತನ ಮತ್ತು ದುಃಖವನ್ನು ತರುತ್ತವೆ. ಈ ವಸ್ತುಗಳು ನಿಮ್ಮ ಮನೆಯಲ್ಲಿ ಇದ್ದರೆ ಮೊದಲು ಆ ವಸ್ತುಗಳನ್ನು ಮನೆಯಿಂದ ಹೊರಗೆ ಬಿಸಾಡಿ.

1,ನಿಮ್ಮ ಪರ್ಸ್ ಹರಿದು ಹೋಗಿದ್ದಾರೆ ತಕ್ಷಣವೇ ಎಸೆಯಿರಿ.ನೀವು ಹಣ ಇಡುವ ಸ್ಥಳ ಕೂಡ ಒಳ್ಳೆಯ ಸ್ಥಿತಿಯಲ್ಲಿ ಇರಬೇಕು.ತುಂಕು ಹಿಡಿದಿರಬಾರದು ಮತ್ತು ಮುರಿದು ಹೋಗಿರಬಾರದು. ಬಿರುವಿನಲ್ಲಿ ಒಂದು ಲಕ್ಷ್ಮಿ ಫೋಟೋ ಮತ್ತು ಅರಳಿ ಮರದ ಎಲೆ ಮೇಲೆ ಬೆಳ್ಳಿ ನಾಣ್ಯ ಇಟ್ಟರೆ ತುಂಬಾ ಒಳ್ಳೆಯದು.2, ಹಳೆಯ ಎಲೆಕ್ಟ್ರಾನಿಕ್ಸ್ ಉಪಕಾರಣಗಳು,ಹಳೆಯ ಮೊಬೈಲ್ ಅಥವಾ ಯಾವುದೇ ಉಪಯೋಗಿಸದ ಹಳೆಯ ಎಲೆಕ್ಟ್ರಾನಿಕ್ಸ್ ವಸ್ತುಗಳು ಇದ್ದಾರೆ ಮೊದಲು ಎಸೆಯಿರಿ.ಯಾಕೆಂದರೆ ರಾಹು ಗ್ರಹದ ಕ್ರೂದವನ್ನು ಆಕರ್ಷಿಸುತ್ತದೆ.ಇದರಿಂದ ನಿಮಗೆ ಬಹಳಷ್ಟು ಕೆಡುಕು ಉಂಟಾಗುತ್ತದೆ.

3,ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಹರಿದ ಬಟ್ಟೆಗಳು ಇದ್ದೆ ಇರುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ ಹರಿದ ಬಟ್ಟೆಗಳು ಅಥವಾ ಬಂಡಲುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಇಲ್ಲವಾದರೆ ಯಾರಿಗಾದರೂ ದಾನ ಮಾಡಿ. ಯಾಕೇಂದರೆ ವೃತ್ತಿ ಜೀವನದಲ್ಲಿ ತೊಂದರೆಯನ್ನು ಉಂಟು ಮಾಡುತ್ತದೆ.4, ಸಾಮಾನ್ಯವಾಗಿ ಮನೆಯಲ್ಲಿ ಜೇಡಗಳು ಬಲೆಯನ್ನು ಕಟ್ಟುತ್ತವೆ.ಜೇಡದ ಬಲೆಗಳು ನಿಮ್ಮ ಏಳಿಗೆಯನ್ನು ಹತೋಟಿಯಲ್ಲಿ ಇಡುತ್ತದೆ. ಮನೆಯ ಶಾಂತಿಯನ್ನು ಕದಡುತ್ತದೆ. ಆದಷ್ಟು ಮನೆಯನ್ನು ಶುಚಿಯಾಗಿ ಇಡೀ. ಮುಖ್ಯವಾಗಿ ಜೇಡ ಕಟ್ಟಿದ ಬಲೆಯನ್ನು ಮಂಗಳವಾರ ಮತ್ತು ಶುಕ್ರವಾರ ತೆಗೆಯಬಾರದು.

5, ಕಪಾಟು ಮತ್ತು ಹಾಲಾಮರು ಸದಾ ಮುಚ್ಚಿರಬೇಕು.ಕಪಾಟು ಓಪನ್ ಆದರೆ ಲಕ್ಷ್ಮಿ ಮನೆಗೆ ಬರುವುದಿಲ್ಲ.ಆದಷ್ಟು ಕಪಾಟು ಮತ್ತು ಬಿರುಗಳನ್ನು ಮುಚ್ಚಿರಿ.6, ಹೊಡೆದು ಹೋದ ದೇವರ ಫೋಟೋಗಳು ಹಾಗೂ ಮುರಿದುಹೋದ ವಿಗ್ರಹಗಳು ಅಶುಭ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಅವುಗಳನ್ನು ಮನೆಯಿಂದ ಎಸೆಯಿರಿ.7, ಯಾವಾಗಲೂ ಮನೆಯ ಟೆರೆಸ್ ಅನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ.ಬೇಡದ ವಸ್ತುಗಳನ್ನು ಅಲ್ಲಿ ಇಟ್ಟು ಕಸದ ತೊಟ್ಟಿಯಂತೆ ಮಾಡಬೇಡಿ. ಮನೆಯ ಮಾಳಿಗೆ ಯಾವಾಗಲೂ ಶುಭ್ರವಾಗಿರಬೇಕು.

8,ಸಾಮಾನ್ಯವಾಗಿ ಎಲ್ಲರಿಗೂ ಗೋಡೆಯ ಮೇಲೆ ಸುಂದರ ಫೋಟೋಗಳನ್ನು ಹಾಕುವ ಅಭ್ಯಾಸವಿರುತ್ತದೆ.ತಾಜ್ ಮಹಲ್,ನಟರಾಜ,ಮಹಾಭಾರತ, ಮುಳುಗುತ್ತಿರುವ ಹಡಗು, ಜಲಪಾತದ ಫೋಟೋಗಳನ್ನು ಹಾಕಬೇಡಿ. ಯಾಕೆಂದರೆ ಅವುಗಳು ದುರಾದೃಷ್ಟವನ್ನು ಆಕರ್ಷಿಸುತ್ತವೆ.9,ಮುರಿದ ಕುರ್ಚಿ,ಟೇಬಲ್,ಬೆಡ್ ಗಳು ಮನೆಯಲ್ಲಿ ಇದ್ದರೆ ಅದನ್ನು ಮೊದಲು ಹೊರಗೆ ಎಸೆಯಿರಿ. ಯಾಕೆಂದರೆ ಮನೆಯಲ್ಲಿರುವ ಋಣಾತ್ಮಕ ಶಕ್ತಿಯನ್ನು ಒಲಿಸುತ್ತದೆ ಇದರಿಂದ ಹಣಕಾಸಿನ ತೊಂದರೆ ಉಂಟಾಗುತ್ತದೆ.ಮುಖ್ಯವಾಗಿ ಲಕ್ಷ್ಮಿಯು ಸದಾ ಸ್ವಚ್ಛವಾಗಿ ಇರುವ ಸ್ಥಳದಲ್ಲಿ ಇರುತ್ತಾಳೆ. ಆದ್ದರಿಂದ ನೀವು ಮನೆಯನ್ನು ಸದಾ ಶುಭ್ರವಾಗಿ ಸ್ವಚ್ಛವಾಗಿ ಇಟ್ಟುಕೊಳ್ಳಿ.ಲಕ್ಷ್ಮಿ ತಾನಾಗೆ ನಿಮ್ಮ ಮನೆಗೆ ಒಲಿಯುತ್ತಾಳೆ.

Leave a Reply

Your email address will not be published. Required fields are marked *