ಗ್ಯಾಸ್ಟ್ರಿಕ್ ಹೊಟ್ಟೆ ನೋವು ಹೊಟ್ಟೆ ಊರಿಗೆ ಮನೆ ಮದ್ದು!

Featured-Article

ಕೆಲವರಿಗೆ ಗ್ಯಾಸ್ಟ್ರಿಕ್ ಆದಾಗ ವಾಂತಿ ಆಗುತ್ತೆ ಜೊತೆಗೆ ಹೊಟ್ಟೆ ಉರಿಯುತ್ತೆ , ಹೊಟ್ಟೆ ನೋವು ಸಹ ಆಗುತ್ತೆ.
ಆದ್ದರಿಂದ ಇಂದಿನ ನಮ್ಮ ಲೇಖನದಲ್ಲಿ ಹೊಟ್ಟೆ ನೋವು , ಹೊಟ್ಟೆ ಉರಿ , ವಾಂತಿ ಹಾಗೂ ಗ್ಯಾಸ್ಟ್ರಿಕ್ ಪ್ರಾಬ್ಲಂಗೆ ಮನೆಮದ್ದು ನ್ನು ತಿಳಿಸಲಿದ್ದೇವೆ.ಈ ಕಷಾಯವನ್ನು ಮಾಡಲು ಕೆಲವೇ ಕೆಲವು ಮನೆಯಲ್ಲಿ ಸಿಗುವಂತ ಪದಾರ್ಥಗಳು ಇದ್ದರೆ ಸಾಕು..

ಬೇಕಾಗುವ ಸಾಮಾಗ್ರಿಗಳು :ಈ ಕಷಾಯವನ್ನು ಮಾಡಲು ಒಂದು ಟೇಬಲ್ ಸ್ಪೂನ್ ಜೀರಿಗೆ , ಅರ್ಧ ಟೇಬಲ್ ಸ್ಪೂನ್ ಸೋಂಪು , ಅರ್ಧ ಪುಲಾವ್ ಎಲೆ , 8 ರಿಂದ 10 ಕಾಳು ಮೆಣಸು .

ಮಾಡುವ ವಿಧಾನ :ಮೊದಲಿಗೆ ಒಂದು ಪ್ಯಾನ್ ಗೆ ಒಂದು ಟೇಬಲ್ ಸ್ಪೂನ್ ಜೀರಿಗೆ , ಅರ್ಧ ಟೇಬಲ್ ಸ್ಪೂನ್ ಸೋಂಪು , ಅರ್ಧ ಪುಲಾವ್ ಎಲೆ , 8 ರಿಂದ 10 ಕಾಳು ಮೆಣಸು ಇವೆಲ್ಲವನ್ನು ಹಾಕಿ ಹುರಿದುಕೊಂಡು
ಸ್ವಲ್ಪ ಆರಿದ ನಂತರ ಕುಟಾಣಿಯಲ್ಲಿ ಹಾಕಿ ಕುಟ್ಟಿ ಪುಡಿ ಮಾಡಿಕೊಳ್ಳಿ.

ನಂತರ ಒಂದು ಪಾತ್ರೆಯಲ್ಲಿ ಒಂದು ಗ್ಲಾಸ್ ನಷ್ಟು ನೀರನ್ನು ಹಾಕಿ ಈ ಕುಟ್ಟಿ ಪುಡಿ ಮಾಡಿಕೊಂಡಿರುವ ಪುಡಿಯನ್ನು ಹಾಕಿ 5 ರಿಂದ 10 ನಿಮಿಷ ಚೆನ್ನಾಗಿ ಕುದಿಸಬೇಕು.ಸ್ವಲ್ಪ ಆರಿದ ನಂತರ ಸ್ವಲ್ಪ ಸ್ವಲ್ಪವೇ ತೆಗೆದುಕೊಳ್ಳುವುದು ಉತ್ತಮ.

ಧನ್ಯವಾದಗಳು.

Leave a Reply

Your email address will not be published. Required fields are marked *