ಶುಂಠಿಯ ನಿಮಗೆ ಗೋತ್ತಿಲ್ಲದ ಆರೋಗ್ಯ ರಹಸ್ಯಗಳು!

Featured-Article

ಹಸಿಶುಂಠಿ-ಆರೋಗ್ಯಕರವಾದ ಸಾಂಬಾರು ಪದಾರ್ಥವಾಗಿದ್ದು ,ಪ್ರತಿ ಮನೆಯಲ್ಲಿಯೂ ಹಲವಾರು ವಿಧದಲ್ಲಿ ಇದರ ಬಳಕೆಯಾಗುತ್ತದೆ.ಅಡುಗೆಗೆ ಉಪಯೋಗಿಸುವ ಹೊರತಾಗಿ ಸಾಮಾನ್ಯ ಕೆಮ್ಮು , ಶೀತ , ಗಂಟಲು ನೋವು ಮೊದಲಾದ ತೊಂದರೆಗಳು ಶಮನಕ್ಕೂ ಉಪಯೋಗಿಸುತ್ತೇವೆ.

ಟೀ ಕಷಾಯಗಳಲ್ಲಿ ಬೆರೆಸಿ ಕುಡಿಯುತ್ತೇವೆ.-ಇನ್ನು ಪ್ರಯಾಣದ ವೇಳೆಯಲ್ಲಿ ಎದುರಾಗುವ ವಾಕರಿಕೆ , ವಾಂತಿ , ತಲೆನೋವು , ಕಟ್ಟಿದ್ದ ಮೂಗು ಮೊದಲಾದ ತೊಂದರೆಗಳಿಗೂ ಶುಂಠಿಯ ಬಳಿ ಉತ್ತರವಿದೆ.ತೂಕ ಇಳಿಸಲು ಇದು ನೆರವಾಗುತ್ತದೆ ಹಾಗೂ ಹೆಚ್ಚು ಕಾಲ ಹಸಿ ವಾಗದಂತೆ ನೋಡಿಕೊಳ್ಳುವ ಮೂಲಕ ಅನಗತ್ಯವಾಗಿ ತಿನ್ನುವುದರಿಂದ ತಪ್ಪಿಸುತ್ತದೆ.

ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ ,ಹೊಟ್ಟೆ ಉರಿ , ಎದೆ ಉರಿ ಮೊದಲಾದ ಹಲವು ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳಿಗೆ ಪರಿಹಾರ ನೀಡುತ್ತದೆ. ಇನ್ನು ಶುಂಠಿಯಲ್ಲಿರುವ ಪೋಷಕಾಂಶಗಳು ಆಮ್ಲೀಯವಾಗಿದ್ದು , ಆಮ್ಲೀಯತೆ ಒಗ್ಗದ ವ್ಯಕ್ತಿಗಳಿಗೆ ಇದು ಒಳ್ಳೆಯದಲ್ಲ. ಅಷ್ಟೇ ಅಲ್ಲದೆ ಶುಂಠಿ ಉಷ್ಣ ಗುಣವನ್ನು ಕೂಡ ಹೊಂದಿದೆ. ಇದು ವಾಸ್ತವವಾಗಿ ಪ್ರತಿ ವ್ಯಕ್ತಿಗೆ ಕೆಲವು ಪೋಷಕಾಂಶಗಳು ಅಲರ್ಜಿಕಾರಕ ವಾಗಿದ್ದು ಇವುಗಳನ್ನು ಅರಿಯದೆ ಸೇವಿಸುವ ಮೂಲಕ ಔಷಧೀಯೇ ವಿಷವಾಗಿ ಬಿಡಬಹುದು.

ಇನ್ನು ಶುಂಠಿ ಯಾರ ಆರೋಗ್ಯಕ್ಕೆ ಒಳ್ಳೆಯದಲ್ಲ ?ಕಡಿಮೆ ತೂಕ ಹೊಂದಿರುವವರು ಶುಂಠಿಯ ಸೇವನೆ ಮಾಡಬಾರದು.ಶುಂಠಿ ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯಕಾರಿ.ಇದರ ಸೇವನೆಯಿಂದ ಹಸಿವು ಕಡಿಮೆಯಾಗುತ್ತದೆ.ಈ ಮೂಲಕ ತೂಕ ಇಳಿಸಲು ಸಾಧ್ಯವಾಗುತ್ತದೆಆದ್ದರಿಂದ ಈಗಾಗಲೇ ಸಾಮಾನ್ಯ ತೂಕಕ್ಕಿಂತ ಕಡಿಮೆ ತೂಕ ಇರುವ ವ್ಯಕ್ತಿಗಳು ಶುಂಠಿಯನ್ನು ಪ್ರತಿದಿನ ಸೇವಿಸಬಾರದು.ಇನ್ನು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಶುಂಠಿ ಒಂದು ಉತ್ತಮವಾದ ಆಯ್ಕೆ ಎಂದೇ ಹೇಳಬಹುದು.

— ಗರ್ಭಿಣಿ ಮಹಿಳೆಯರು ಶುಂಠಿಯ ಸೇವನೆ ಮಾಡಬಾರದು.ಗರ್ಭಿಣಿ ಮಹಿಳೆಯರು ಮೊದಲ 3 ತಿಂಗಳು ಬೆಳಗ್ಗೆ ಕಾಡುವ ಸುಸ್ತು , ವಾಂತಿ ನಿವಾರಣೆಗೆ ನಿಯಮಿತವಾಗಿ ಚಿಕ್ಕ ತುಂಡು ಶುಂಠಿ ಸೇವನೆ ಮಾಡಬಹುದು ಆದರೆ ಕೊನೆಯ 3 ತಿಂಗಳು ಅಪ್ಪಿತಪ್ಪಿಯೂ ಶುಂಠಿಯ ಸೇವನೆ ಮಾಡುವುದು ಒಳ್ಳೆಯದಲ್ಲಇದರಿಂದ ಅವಧಿ ತುಂಬುವ ಮುನ್ನವೇ ಮಗುವಿನ ಜನನ ವಾಗಬಹುದು ಆದ್ದರಿಂದ ಗರ್ಭಿಣಿ ಮಹಿಳೆಯರು ಶುಂಠಿಯ ಸೇವನೆ ಮಾಡದೆ ಇದ್ದರೆ ಉತ್ತಮ.

— ರಕ್ತಕ್ಕೆ ಸಂಬಂಧಿಸಿದ ಸಮಸ್ಯೆ ಇದ್ದವರು ಶುಂಠಿಯನ್ನು ಸೇವಿಸಬಾರದು.ಶುಂಠಿ ರಕ್ತಸಂಚಾರವನ್ನು ಹೆಚ್ಚಿಸುತ್ತದೆ.ಹಿಮೊಫಿಲಿಯಾ ಸಮಸ್ಯೆ ಇರುವವರಿಗೆ ಶುಂಠಿ ಒಳ್ಳೆಯದಲ್ಲ ,ಈ ಸಮಸ್ಯೆ ಇರುವವರಿಗೆ ಚಿಕ್ಕ ಗಾಯವಾದರೂರಕ್ತ ಹರಿಯುವುದು ನಿಲ್ಲುವುದಿಲ್ಲ ಆದ್ದರಿಂದ ಈ ಸಮಸ್ಯೆಯಿಂದ ಬಳಲುತ್ತಿರುವವರು ಶುಂಠಿಯನ್ನು ಸೇವಿಸದೆ ಇದ್ದರೆ ಉತ್ತಮ

ಈ ಕಾಯಿಲೆಗಳಿಗೆ ಔಷಧಿ ತೆಗೆದುಕೊಳ್ಳುತ್ತಿದ್ದರೆ ಅಂಥವರ ಶುಂಠಿಯನ್ನು ಸೇವಿಸಬಾರದು’..ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವವರು.ಅಧಿಕ ರಕ್ತದ ಒತ್ತಡದ ಸಮಸ್ಯೆ ಇರುವವರಿಗೆ ಶುಂಠಿ ಒಳ್ಳೆಯದಲ್ಲ.ಶುಂಠಿ ರಕ್ತವನ್ನು ತೆಳ್ಳಗಾಗಿಸುವ ಕೆಲಸವನ್ನು ಮಾಡುತ್ತದೆಅಂತೆಯೇ ಅಧಿಕ ರಕ್ತದ ಒತ್ತಡಕ್ಕೆ ನೀಡುವ ಔಷಧಿಗಳು ಕೂಡ ರಕ್ತವನ್ನು ತೆಳ್ಳಗಾಗಿಸುವ ಕಾರ್ಯವನ್ನು ಮಾಡುತ್ತದೆ. ಇವೆರಡರ ಸೇವನೆ ಮಾಡಿದರೆ ಡಬಲ್ ಡೋಸ್ ಆಗಿ ತೊಂದರೆ ಉಂಟಾಗಬಹುದು.

-ಎಸಿಡಿಟಿ ಸಮಸ್ಯೆ ಇರುವವರು ಶುಂಠಿ ಚಹಾದ ಸೇವನೆಯನ್ನು ಮಾಡಬಾರದು.ಖಾಲಿ ಹೊಟ್ಟೆಗೆ ಶುಂಠಿ ಚಹಾವನ್ನು ಸೇವನೆ ಮಾಡಿದರೆ ಅಸಿಡಿಟಿ ಸಮಸ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇರುತ್ತದೆ.– ಮಧುಮೇಹಿಗಳು ಕೂಡ ಶುಂಠಿ ಸೇವನೆ ಮಾಡಬಾರದು ಯಾಕೆಂದರೆ ಡಯಾಬಿಟಿಸ್ ಔಷಧಿಗಳ ಜೊತೆಗೆ ಶುಂಠಿಯ ಸೇವನೆ ಮಾಡಿದರೆ ಇದು ದೇಹಕ್ಕೆ ಸೇರಿ ದೇಹದಲ್ಲಿ ಸಕ್ಕರೆ ಮಟ್ಟವನ್ನು ವಿಪರೀತವಾಗಿ ಕಡಿಮೆ ಮಾಡುತ್ತದೆ.ಇನ್ನು ಶುಂಠಿಯನ್ನು ಈ ಸಮಸ್ಯೆಗಳಿರುವವರು ಸೇವಿಸಲೇಬಾರದು ಅಂದರೆ ಇದರ ಅರ್ಥ ಪ್ರತಿದಿನ ಚಹಾದಲ್ಲಿ ಅಥವಾ ಹಾಗೆ ಹಸಿಯಾಗಿ ಸೇವಿಸುವುದು ಮಾಡಬೇಡಿ .

— ಅಡುಗೆಗೆ ನಿಯಮಿತವಾಗಿ ಈ ಬಳಸಬಹುದು ಯಾಕೆಂದರೆ ಕೆಲವು ಅಡುಗೆಗೆ ಶುಂಠಿಯ ಬಳಕೆ ತುಂಬಾನೇ ಮುಖ್ಯ.ಇನ್ನು ಕೆಲವು ಮುಖ್ಯ ಆರೋಗ್ಯ ಸಮಸ್ಯೆಗಳನ್ನು ಸರಿಪಡಿಸಲು ಶುಂಠಿ ತುಂಬಾನೇ ಉಪಯೋಗಕಾರಿ. ಅದರಲ್ಲೂ ಮುಖ್ಯವಾಗಿ ದೇಹದ ತೂಕ ಹೆಚ್ಚಿರುವವರು ಶುಂಠಿಯ ಸೇವನೆ ಮಾಡಿದರೆ ದೇಹದ ತೂಕವನ್ನು ಇಳಿಸಿಕೊಳ್ಳಬಹುದು.ಸಂಧಿಗಳ ನೋವಿನ ಸಮಸ್ಯೆ ಇರುವವರು ಕೂಡ ಶುಂಠಿಯ ಸೇವನೆ ಮಾಡುವುದು ಒಳ್ಳೆಯದು.ಶುಂಠಿಯಲ್ಲಿ ಹಲವು ಬಗೆಯ ಪೋಷಕಾಂಶಗಳಿದ್ದು , ಇದುರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಹಲವು ಬಗೆಯ ರೋಗಗಳನ್ನು ಬರದಂತೆ ತಡೆಯುತ್ತದೆ.

ಮೈಗ್ರೇನ್ ತಲೆನೋವಿಗೆ ತಲೆನೋವಿಗೆ ಅತ್ಯುಗ್ರ ರೂಪವಾದ ಮೈಗ್ರೇನ್ ತಲೆನೋವನ್ನು ಕಡಿಮೆ ಮಾಡಲು ಶುಂಠಿ ಉತ್ತಮವಾಗಿದೆ.ಮಲಬದ್ಧತೆ ಅಜೀರ್ಣಕ್ಕೆ ಮಲಬದ್ಧತೆ , ಅಜೀರ್ಣ , ಆಮ್ಲೀಯತೆ ಮೊದಲಾದ ತೊಂದರೆಗಳ ನಿವಾರಣೆಗೆ ಶುಂಠಿಯ ರಸ ಅತ್ಯುತ್ತಮವಾಗಿದೆ.ಧನ್ಯವಾದಗಳು.

Leave a Reply

Your email address will not be published. Required fields are marked *