ಈ ತಪ್ಪುಗಳನ್ನು ಮಾಡಿದಾಗ 6 ರೀತಿಯ ಏಟು ಕೊಟ್ಟು ಮನೆಯಿಂದ ದೂರಾಗ್ತಾಳೆ ಲಕ್ಷ್ಮಿ ಮಾತೇ!

Written by Anand raj

Published on:

ಈ ಕಲಿಯುಗದ ಜೀವಾಳ ಮಾತ್ರ ಹಣವೇ ಹಣವಿಲ್ಲದ ಮನುಷ್ಯ ಹೆಣಕ್ಕಿಂತ ಕಡೆ ಎನ್ನುವ ಮಾತು ಫ್ರೂವ್ ಆಗುತ್ತಲೇ ಬಂದಿದೆ ಅದರ ಅನುಭವ ನಿಮಗೂ ಕೂಡ ಆಗಿರುತ್ತದೆ ಒಂದಲ್ಲ ಒಂದು ಸನ್ನಿವೇಶದಲ್ಲಿ ದುಡ್ಡೇ ಮುಖ್ಯ ದುಡ್ಡೇ ಮುಖ್ಯ ಈ ಜೀವನದಲ್ಲಿ ಅಂತ ಅನಿಸಿರುತ್ತದೆ ಹಲವರಿಗೆ ಅಷ್ಟರಮಟ್ಟಿಗೆ ಕಲಿಯುಗದ ರಕ್ಷಾಕವಚ ಈ ದುಡ್ಡು ಇಂತಹ ದುಡ್ಡು ಯಾಕೆ ಎಲ್ಲರ ಬಳಿ ಇರುವುದಿಲ್ಲ ದುಡ್ಡು ಉಳಿಯುವುದಿಲ್ಲ ಕೆಲವೇ ಕೆಲವು ಜನರಲ್ಲಿ ಮಾತ್ರ ಹೇಗೆ ದುಡ್ಡು ಸಂಪಾದಿಸುತ್ತಾರೆ ಇನ್ನೂ ಕೆಲವರಿಗೆ ಸಂಪಾದನೆ ಮಾಡಿದರು ಕೂಡ ಸೇವ್ ಆಗುವುದಿಲ್ಲ ಯಾಕೆ ಪ್ರತಿ ತಿಂಗಳ ಕೊನೆಯಲ್ಲಿ ತೊತಾಗವುದು ಯಾಕೆ ಈ ಪ್ರಶ್ನೆ ಬಹುತೇಕರನ್ನು ಕಾಡಿರುತ್ತದೆ.ಈ ಪ್ರಶ್ನೆಗೆ ಉತ್ತರ ಲಕ್ಷ್ಮೀದೇವಿಯ ಕೋಪ ನಮಗೆ ಗೊತ್ತು ಗೊತ್ತಿಲ್ಲದೆಯೋ ಎರಡು ಮಹಾ ಎಡವಟ್ಟುಗಳನ್ನು ಮಾಡಿಬಿಟ್ಟಿರುತ್ತೇವೆ ನಾವು ಏನು ಹಣಕಾಸಿನ ಅಪರಾಧಗಳು ಇಂತಹ ತಪ್ಪುಗಳನ್ನು ಮಾಡಿದಾಗ ಸರಿ ಮಾಡಿಕೊಳ್ಳುವುದು ಹೇಗೆ ನಾವು ದುಡ್ಡು ಕಾಸು ಸಂಪಾದನೆ ಮಾಡಬಹುದು ಎಲ್ಲವನ್ನೂ ಕೂಡ ನೋಡೋಣ ಈ ಲೇಖನದ ಮೂಲಕ ತಿಳಿಯೋಣ.

ಯಾವುದೇ ಗಳಿಗೆ ಇರಲಿ ಲಕ್ಷ್ಮಿದೇವಿಯನ್ನು ನಿರ್ಲಕ್ಷ್ಯ ಮಾಡಬೇಡಿ, ಅವಮಾನ ಮಾಡಿದಿರಿ ಅಂತ ಅಂದುಕೊಳ್ಳಿ ಗೊತ್ತಿಲ್ಲದೆ ಬರೋಬ್ಬರಿ ಆರು ಏಟುಗಳು ಬೀಳುತ್ತವೆ ಜನಜೀವನದಲ್ಲಿ ಸಾಕ್ಷಾತ್ ಶ್ರೀಮನ್ನಾರಾಯಣನು ಕೂಡ ಇದರಿಂದ ಹೊರತಾಗಿಲ್ಲ ವೆಂಕಟೇಶ್ವರ ಸ್ವಾಮಿ ಚರಿತೆ ಇದಕ್ಕೆ ಉತ್ತಮ ಉದಾಹರಣೆ ನಿಮಗೆ ಗೊತ್ತಿದೆ.ಭೃಗು ಮುನಿ ಪ್ರಕರಣದಲ್ಲಿ ವಕ್ಷ ಸ್ಥಳವನ್ನು ಒದ್ದ ಮಹರ್ಷಿ ಕಾಲು ಹಿಡಿದಿದ್ದಕ್ಕೆ ಶ್ರೀಹರಿ ಮತ್ತು ವೈಕುಂಠ ಎರಡನ್ನು ಬಿಟ್ಟು ಹೊರಟು ಬಿಟ್ಟಳು ಮಾತೆ ಮಹಾಲಕ್ಷ್ಮಿ ಇದರ ನೇರ ಪರಿಣಾಮವೇ ಲೋಕ ನಾಯಕನಾದರೂ ಕೂಡ ಶ್ರೀಮನ್ನಾರಾಯಣ ಆದರೂ ಕೂಡ ಆರು ವಿಧದ ಸಂಕಷ್ಟವನ್ನು ಎದುರಿಸಬೇಕಾಗಿತ್ತು ವೈಕುಂಠ ತೊರೆದ ಲಕ್ಷ್ಮಿದೇವಿಯನ್ನು ಹುಡುಕುತ್ತಾ ಭೂಲೋಕಕ್ಕೆ ಬಂದ ಭಗವಂತ ಮೊದಲ ಸಮಸ್ಯೆ ಇಲ್ಲಿಂದಲೇ ಶುರುವಾಯಿತು. ಯಾವ ಯಾವ ಸಮಸ್ಯೆಗಳನ್ನು ಎದುರಿಸಬೇಕಾಯಿತು.

1, ದೇವರ ಪದವಿಯನ್ನು ಕಳೆದುಕೊಂಡು ಒಬ್ಬ ಸಾಮಾನ್ಯ ಶ್ರೀನಿವಾಸನಾಗಿ ಧರೆಗೆ ಇಳಿಯಬೇಕಾಯಿತು.2, ಮನೋಮೋಹಕ ವೈಕುಂಠದಿಂದ ದೂರವಾಗಿ ಗೊತ್ತು ಗುರಿ ಇಲ್ಲದೆ ಅಲೆದಾಡಿ ಏನು ಇಲ್ಲದೆ ಹುತ್ತದಲ್ಲಿ ಅಶ್ರೇಯಾ ಪಡೆಯಬೇಕಾಯಿತು.3,ಊಟ ವಿಲ್ಲದೆ ಇರಬೇಕಾಯಿತು. ಹೊಟ್ಟೆ ತುಂಬಿಸಿದ್ದು ಹಸುವಿನ ರೂಪದಲ್ಲಿ ಇದ್ದ ಬ್ರಹ್ಮ ಮತ್ತು ಶಿವನೇ ಆದರೂ ಕೂಡ ಇದಕ್ಕೆ ಕಾರಣ ಆಗಿದ್ದು ಮತ್ತೊಮ್ಮೆ ಲಕ್ಷ್ಮಿ ದೇವಿ.4, ಪೆಟ್ಟು ಬಿದ್ದು ಉಳೀಯುವುದಕ್ಕೂ ಸ್ಥಳ ಇಲ್ಲದೆ ತನ್ನದೇ ಸ್ಥಳದಲ್ಲಿ ವರಾಹದಲ್ಲಿ ಜಾಗ ಕೇಳಬೇಕಾಯಿತು. ನಂತರ ಪದ್ಮಾವತಿ ಗೆಳತಿಯರು ಕಾಡಲ್ಲಿ ಕಲ್ಲಲ್ಲಿ ಒಡೆದರು ಸ್ವಾಮಿಗೆ . ನಂತರ ಮದುವೆ ಸಮಯದಲ್ಲಿ ಹಣ ಇಲ್ಲದೆ ಕುಬೇರ ಹತ್ತಿರ ಸಾಲ ಕೇಳಬೇಕಾಯಿತು. ಮುಖ್ಯವಾಗಿ ಮದುವೆಗೆ ಒಪ್ಪಿಗೆ ಕೊಟ್ಟಿದ್ದೆ ಲಕ್ಷ್ಮಿ ಮಾತೇ.

ಇನ್ನು ನಾವು ಗೊತ್ತು ಗೊತ್ತಿಲ್ಲದೆಯೋ ಮಾಡುವ ಕೆಲವು ತಪ್ಪುಗಳಿಂದ ಲಕ್ಷ್ಮಿ ಮಾತೆ ಕೋಪಿಸಿಕೊಳ್ಳುತ್ತಾಳೆ. ಯಾವುದೇ ಸಮಯದಲ್ಲಿ ಲಕ್ಷ್ಮೀದೇವಿಯನ್ನು ನಿರ್ಲಕ್ಷ ಮಾಡಬಾರದು. ಒಂದು ವೇಳೆ ಮಾಡಿದರೆ ಬರೋಬ್ಬರಿ 6 ಏಟುಗಳು ಬೀಳುತ್ತವೆ ಜೀವನದಲ್ಲಿ. ಸಾಕ್ಷಾತ್ ಶ್ರೀಮನ್ ನಾರಾಯಣ ಕೂಡ ಅನುಭವಿಸಿದ್ದಾರೇ.

1, ಉದ್ಯೋಗವನ್ನು ಕಳೆದುಕೊಂಡು ಅಲೆದಾಡಬೇಕಾಗುತ್ತದೆ.2, ಇರುವುದಕ್ಕೂ ಜಾಗ ಇಲ್ಲದೆ ಎಲ್ಲಿ ಬೇಕೋ ಅಲ್ಲಿ ಇರಬೇಕಾಗುತ್ತದೆ.3, ಯಾಚನೆ ಸಾಲ ಮಾಡುವಂತಹ ಸ್ಥಿತಿಗತಿಗಳು ಬರುವುದು.4, ಅನ್ಯರಿಂದ ಅವಮಾನ ಆಗುವುದು.5, ಮಾನಸಿಕ ಅಥವಾ ದೈಹಿಕ ಹಲ್ಲೆ.6, ಅನ್ನ ಆಹಾರ ಸಿಗದೇ ಇರುವುದು.ಇದು ಪ್ರತಿಯೊಬ್ಬರು ಅನುಭವಿಸುವ 6 ರೀತಿಯ ಏಟುಗಳು. ಲಕ್ಷ್ಮೀದೇವಿಗೆ ಕೋಪ ಬರುವ ರೀತಿ ಯಾವುದೇ ಕಾರಣಕ್ಕೂ ನಡೆದುಕೊಳ್ಳಬಾರದು. ಮಾತೆಗೆ ಮುನಿಸು ತರಿಸುವ ಎರಡು ವಿಷಯಗಳು.

1, ಹಣದ ಬಗ್ಗೆ ಇರುವ ನಿರ್ಲಕ್ಷ-ಹಣದ ಬಗ್ಗೆ ನಿರ್ಲಕ್ಷ ತೋರುವವರಿಗೆ ತುಂಬಾನೇ ತೊಂದರೆ ಉಂಟಾಗುತ್ತದೆ.ಯಾವಾಗಲು ದುಡ್ಡಿಗೆ ಗೌರವವನ್ನು ಕೊಡಬೇಕು.ಅನಾವಶ್ಯಕ ಖರ್ಚು ಮಾಡುವುದು ಕೂಡ ಲಕ್ಷ್ಮಿ ದೇವಿಗೆ ಕೋಪ ತರಿಸುತ್ತದೆ.2, ಹೆಂಡತಿಯನ್ನು ಅವಮಾನಿಸುವುದು ಕೂಡ ಲಕ್ಷ್ಮಿ ದೇವಿಗೆ ಕೋಪ ತರಿಸುತ್ತದೆ.ಒಂದು ಲೆಕ್ಕದಲ್ಲಿ ಮಹಾ ಲಕ್ಷ್ಮಿ ಎಂದರೆ ಹೆಂಡತಿ ಮಕ್ಕಳು. ಅವರನ್ನು ಯಾರು ಅವಮಾನ ಮಾಡುತ್ತಾರೋ ಅವರನ್ನು ಬೆನ್ನಿಗೆರಿಸಿಕೊಳ್ಳುವುದು ಪಕ್ಕ.ಆ ದಾರಿದ್ರ್ಯ ಯಾವುದೇ ರೂಪದಲ್ಲಿ ಬರಬಹುದು. ಮಾಡುವ ಕೆಲಸದಲ್ಲಿ ಆಸಕ್ತಿ ಇಲ್ಲದಿರುವುದು ಕೂಡ ದಾರಿದ್ರ್ಯ. ಇನ್ನು ಕೆಲವರಿಗೆ ಮನೆಯಲ್ಲಿ ಹೆಣ್ಣು ಮಗು ಆದರೆ ಏನು ಅಸಮಾಧಾನ. ಮಹಾಲಕ್ಷ್ಮಿ ಮನೆಗೆ ಬಂದಳು ಎನ್ನುವ ಸಮಾಧಾನ ಇರುವುದಿಲ್ಲವೋ ಅಲ್ಲಿಯವರೆಗೂ ಅವರ ಜೀವನದಲ್ಲಿ ತೊಂದರೆ ಇರುತ್ತದೆ. ಈ ಎರಡು ವಿಚಾರವನ್ನು ಮೊದಲು ನೀವು ನೆನಪಿನಲ್ಲಿ ಇಟ್ಟುಕೊಳ್ಳಿ. ಇಲ್ಲವಾದರೆ ಶ್ರೀಮನ್ ನಾರಾಯಣನಿಗೆ ಅದ ತೊಂದರೆ ನಿಮಗೂ ಕೂಡ ಆಗುತ್ತದೆ.

Related Post

Leave a Comment