ಹಿಂದೂ ಧರ್ಮದಲ್ಲಿ ಮಹಿಳೆಯರನ್ನು ತಾಯಿ ಲಕ್ಷ್ಮೀದೇವಿಗೆ ಹೋಲಿಸಲಾಗುತ್ತದೆ. ಇವರನ್ನು ದೇವಿಯ ರೀತಿ ಪೂಜೆ ಕೂಡ ಮಾಡಲಾಗುತ್ತದೆ. ಹಾಗಾಗಿ ಮನೆಯಲ್ಲಿ ಇರುವ ಸ್ತ್ರೀಯರನ್ನು ಸಾಕ್ಷಾತ್ ತಾಯಿ ಲಕ್ಷ್ಮೀದೇವಿಯಾ ರೂಪ ಎಂದು ತಿಳಿಯಲಾಗಿದೆ. ಯಾರ ಮನೆಯಲ್ಲಿ ಮಹಿಳೆಯರಿಗೆ ಗೌರವ ಕೊಡುವುದಿಲ್ಲವೋ ಅಂತಹ ಮನೆಯಲ್ಲಿ ತಾಯಿ ಲಕ್ಷ್ಮೀದೇವಿ ಪ್ರವೇಶ ಮಾಡುವುದಿಲ್ಲ. ಇಂತಹ ಮನೆಯಲ್ಲಿರುವ ಪುರುಷರು ಯಾವತ್ತಿಗೂ ಧನ ಸಂಪತ್ತಿನ ಹಾನಿಯನ್ನು ಕಾಣುತ್ತಾರೆ.ಯಾವುದೇ ಕಾರಣಕ್ಕೂ ಮಹಿಳೆಯರಿಗೆ ಅವಮಾನವನ್ನು ಮಾಡಬೇಡಿ. ಗ್ರಂಥಗಳಲ್ಲಿ ಸ್ತ್ರೀಯರಿಗೆ ಕೆಲವು ನಿಯಮಗಳನ್ನು ಕೂಡ ತಿಳಿಸಿದ್ದಾರೆ. ಕೆಲವು ಸ್ತ್ರೀಯರು ತಮ್ಮ ತಪ್ಪುಗಳ ಕಾರಣದಿಂದ ತಮ್ಮ ಗೌರವವನ್ನು ಕಳೆದುಕೊಳ್ಳುತ್ತಾರೆ.ಹಾಗಾಗಿ ಮಹಿಳೆಯರು ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಕೂಡ ತುಂಬಾ ಇಂಪೋಟೆಂಟ್ ಆಗಿದೆ.ಇನ್ನು ಮದುವೆಯಾದ ಮಹಿಳೆಯರು ಮರೆತರು ಸಹ ಈ ಕೆಲವು ವಸ್ತುಗಳನ್ನು ಮರೆತರು ಸಹ ಬೇರೆಯವರಿಗೆ ಕೊಡಬಾರದು.
1, ಮದುವೆಯಾದ ಮಹಿಳೆಯರು ಮಾಂಗಲ್ಯ ಸೂತ್ರಕ್ಕೆ ಬಹಳನೇ ಮಹತ್ವ ಇರುತ್ತದೆ.ತಮ್ಮ ಮಾಂಗಲ್ಯವನ್ನು ಬೇರೆಯವರಿಗೆ ಬಳಸಲು ಕೊಡಬಾರದು.ಒಂದು ವೇಳೆ ಈ ರೀತಿ ಮಾಡಿದರೆ ಗಂಡನ ಜೊತೆ ತೊಂದರೆಗಳು ಎದುರು ಆಗುತ್ತದೆ.
2, ಇನ್ನು ಮದುವೆಯಾದ ಮಹಿಳೆಯರಿಗೆ ಹಣೆಯ ಮೇಲೆ ಇರುವ ಕುಂಕುಮ ವಿಶೇಷವಾದ ಗುರುತು ಆಗಿದೆ.ಹಾಗಾಗಿ ಮದುವೆ ಅದ ಮಹಿಳೆಯರು ಕುಂಕುಮಕ್ಕೆ ಗೌರವ ಕೊಡಬೇಕು.ಅದರೆ ಹಲವಾರು ಭಾರಿ ಮಹಿಳೆಯರು ಕೆಲವು ತಪ್ಪುಗಳನ್ನು ಮಾಡುತ್ತಾರೆ. ಮಹಿಳೆಯಾರು ಸ್ನಾನ ಮಾಡಿದ ನಂತರ ಸೇರಗನ್ನು ತಲೆಯ ಮೇಲೆ ಹಾಕಿಕೊಂಡು ಕುಂಕುಮವನ್ನು ಹಚ್ಚಿಕೊಳ್ಳಬೇಕು.ಯಾವುದೇ ಕಾರಣಕ್ಕೂ ನೀವು ಬಳಸುವ ಕುಂಕುಮವನ್ನು ಬೇರೆಯವರಿಗೆ ಕೊಡಬಾರದು ಮತ್ತು ಬೇರೆಯವರು ಬಳಸಿದ ಕುಂಕುಮವನ್ನು ಹಚ್ಚಿಕೊಳ್ಳಬಾರದು.
3,ಮದುವೆ ಅದ ಮಹಿಳೆಯರು ತಮ್ಮ ಕಾಡಿಗೆಯನ್ನು ಬೇರೆಯವರಿಗೆ ಕೊಡಬಾರದು.ಈ ರೀತಿ ಮಾಡುವುದರಿಂದ ಗಂಡನ ಪ್ರೀತಿ ನಿಮ್ಮ ಮೇಲೆ ಕಡಿಮೆ ಆಗುತ್ತದೆ.
4, ಇನ್ನು ಮದುವೆ ಅದ ಮಹಿಳೆಯರು ಕೈಯಲ್ಲಿ ತೊಟ್ಟುಕೊಂಡ ಬಳೆಗಳನ್ನು ಬೇರೆಯವರಿಗೆ ಕೊಡಬಾರದು.
5, ಮದುವೆಯಾದ ಮಹಿಳೆಯರು ತಮ್ಮ ಹಣೆಯ ಮೇಲೆ ಇರುವ ಬಿಂದಿಯನ್ನು ಬೇರೆ ಮಹಿಳೆಯರಿಗೆ ಕೊಡಬಾರದು.ಈ ರೀತಿ ಮಾಡಿದರೆ ಗಂಡನ ಜೀವನಕ್ಕೆ ಸಂಕಟ ಬರುತ್ತದೆ.ಇಬ್ಬರ ಸಂಬಂಧದಲ್ಲಿ ಬಿರುಕು ಕೂಡ ಮೂಡುತ್ತಾದೇ.ಅಷ್ಟೇ ಅಲ್ಲದೆ ಕಾಲು ಉಂಗುರವನ್ನು ಕೂಡ ಯಾರಿಗೂ ಕೂಡ ಕೊಡಬಾರದು.ಈ ರೀತಿ ಮಾಡಿದರೆ ನಿಮ್ಮ ಸೌಭಾಗ್ಯ ದೂರ ಆಗಬಹುದು.