ಗಂಡಸರು ಈ 4 ವಿಷಯಗಳನ್ನು ಯಾರೊಂದಿಗೆ ಹಂಚಿಕೊಳ್ಳಬಾರದಂತೆ ಯಾಕೆ ನೋಡಿ

Written by Anand raj

Published on:

ಚಾಣಕ್ಯ ಅವರು ತಮ್ಮ ಚಾಣಕ್ಯ ನೀತಿ ಪುಸ್ತಕದಲ್ಲಿ ಜೀವನದಲ್ಲಿ ಅನುಸರಿಸಬೇಕಾದ ಮೌಲ್ಯಗಳನ್ನು ಹೇಳಿದ್ದಾರೆ. ಅವರು ತಮ್ಮ ಪುಸ್ತಕದಲ್ಲಿ ಪುರುಷರು ತಮ್ಮ ಜೀವನದಲ್ಲಿ ಕೆಲವು ಅಂಶಗಳನ್ನು ಪಾಲಿಸಬೇಕು. ಪುರುಷರು ತಮ್ಮ ಜೀವನದಲ್ಲಿ ಕೆಲವು ವಿಷಯಗಳನ್ನು ಯಾರ ಬಳಿಯೂ ಹೇಳಿಕೊಳ್ಳಬಾರದು ಎಂದು ಚಾಣಕ್ಯ ಅವರು ಹೇಳಿದ್ದಾರೆ. ಅದು ಯಾವ ವಿಷಯ ಎಂದು ಈ ಲೇಖನದಲ್ಲಿ ನೋಡೋಣ.ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844

ಮೌರ್ಯರ ಕಾಲದಲ್ಲಿ ಆಚಾರ್ಯ ಚಾಣಕ್ಯ ಅವರು ಅನೇಕ ವೇದಗಳನ್ನು ಅಧ್ಯಯನ ಮಾಡಿದ್ದಾರೆ. ಅವರು ತಮ್ಮ ಜ್ಞಾನದಿಂದ ಒಬ್ಬ ಸಾಮಾನ್ಯ ಬಾಲಕ ಚಂದ್ರಗುಪ್ತನನ್ನು ಮೌರ್ಯ ಸಾಮ್ರಾಜ್ಯದ ಅಧಿಪತಿಯನ್ನಾಗಿ ಮಾಡಿದರು. ಅವರು ಅನೇಕ ಸಿದ್ಧಾಂತಗಳನ್ನು ಮಂಡಿಸಿದ್ದಾರೆ, ಅವರು ಮಂಡಿಸಿದ ಪ್ರತಿಯೊಂದು ಸಿದ್ಧಾಂತವು ಇಂದಿಗೂ ಪ್ರತಿಯೊಬ್ಬರ ಜೀವನದಲ್ಲಿ ಅಳವಡಿಕೆ ಆಗುತ್ತದೆ.ಚಾಣಕ್ಯ ನೀತಿಯನ್ನು ಅಧ್ಯಯನ ಮಾಡಿ ಅದರಂತೆ ಜೀವನ ನಡೆಸಿದರೆ ಸುಖ ಸಂತೋಷ ಲಭ್ಯವಾಗುತ್ತದೆ ಎಂದು ಹೇಳುತ್ತಾರೆ. ಚಾಣಕ್ಯ ಅವರು ಪುರುಷರ ಬಗ್ಗೆ ಒಂದು ಸಿದ್ಧಾಂತವನ್ನು ಹೇಳಿದ್ದಾರೆ ಅರ್ಥ ನಾಶ ಮನಸ್ತಾಪಂ,ಗ್ರಹಿನ್ಯಾಶ್ಚರಿತಾನಿ ಚ,ನಿಚಂ ವಾಕ್ಯಂ ಚಾಪಮಾನಂ, ಮತಿಮಾತ್ರ ಪ್ರಕಾಶಯೇತ. ಚಾಣಕ್ಯರು ಈ ಸಿದ್ಧಾಂತದಲ್ಲಿ ಪುರುಷರು 4 ವಿಷಯಗಳ ಬಗ್ಗೆ ಯಾರಿಗೂ ಹೇಳಬಾರದು ಎಂದು ಹೇಳಿದ್ದಾರೆ. ಯಾವುದೆ ವ್ಯಕ್ತಿ ತನಗೆ ಆದ ದುಡ್ಡಿನ ನಷ್ಟದ ಬಗ್ಗೆ ಯಾರಲ್ಲಿಯೂ ಹೇಳಬಾರದು‌.

ಮನುಷ್ಯ ಅಂದ ಮೇಲೆ ದುಡ್ಡು ಒಮ್ಮೆ ಬರುತ್ತದೆ ಒಮ್ಮೆ ಹೋಗುತ್ತದೆ. ಯಾವುದೆ ವ್ಯಕ್ತಿ ತನಗಾದ ಆರ್ಥಿಕ ನಷ್ಟದ ಬಗ್ಗೆ ಯಾರ ಬಳಿಯೂ ಹೇಳಬಾರದು. ಇವತ್ತಿನ ಕಾಲದಲ್ಲಿ ದುಡ್ಡಿದ್ದವನೆ ದೊಡ್ಡಪ್ಪ, ದುಡ್ಡಿನ ಸಹಾಯ ಬೇಕಾದವರಿಗೆ ಸಮಾಜ ಸಹಾಯ ಮಾಡುವುದಿಲ್ಲ ಏಕೆಂದರೆ ಯಾರ ಬಳಿ ದುಡ್ಡು ಇರುವುದಿಲ್ಲವೊ ಅವರಿಗೆ ಸಹಾಯ ಮಾಡಲು ಜನ ಹೆದರುತ್ತಾರೆ. ಅವನು ತಾವು ಕೊಟ್ಟ ದುಡ್ಡನ್ನು ವಾಪಸ್ ಕೊಡುತ್ತಾನೆ ಎಂಬುದರ ಬಗ್ಗೆ ಗ್ಯಾರಂಟಿ ಇರುವುದಿಲ್ಲ.ಪುರುಷರು ತಮಗಿರುವ ದುಃಖದ ಬಗ್ಗೆ ಯಾರ ಬಳಿಯೂ ಹೇಳಿಕೊಳ್ಳಬಾರದು. ಜನರು ನಿಮ್ಮ ದುಃಖದ ಬಗ್ಗೆ ಚರ್ಚೆ ಮಾಡುತ್ತಾರೆ, ಗಾಸಿಪ್ ಮಾಡುತ್ತಾರೆ.ಜನರಿಗೆ ಚರ್ಚೆ ಮಾಡಲು ಒಂದು ವಿಷಯ ಬೇಕಾಗಿರುತ್ತದೆ.ನೀವು ಅವರ ಬಳಿ ಏನಾದರೂ ದುಃಖವನ್ನು ಹೇಳಿಕೊಂಡರೆ ಅದರ ಬಗ್ಗೆ ತಮಾಷೆ ಮಾಡುತ್ತಾರೆ ಆದರೆ ಸದಾ ನಿಮ್ಮ ಒಳಿತನ್ನೆ ಬಯಸುವವರ ಬಳಿ ನೀವು ನಿಮ್ಮ ದುಃಖವನ್ನು ಹೇಳಿಕೊಂಡರೆ ಅವರು ಯೋಗ್ಯವಾದ ಮಾರ್ಗವನ್ನು ತೋರಿಸಬಹುದು. ಪುರುಷನು ತನ್ನ ಪತ್ನಿಯ ನಡತೆಯ ಬಗ್ಗೆ ಚಾರಿತ್ರ್ಯದ ಬಗ್ಗೆ ಯಾರ ಬಳಿಯೂ ಹೇಳಬಾರದು.

ಜನರಿಗೆ ಚರ್ಚೆ ಮಾಡಲು ಒಂದು ವಿಷಯ ಬೇಕಾಗಿರುತ್ತದೆ, ನೀವು ಅವರ ಬಳಿ ನಿಮ್ಮ ಪತ್ನಿಯ ಬಗ್ಗೆ ಹೇಳಿಕೊಂಡರೆ ಅವರು ಮತ್ತೊಬ್ಬರ ಬಳಿ ಹೇಳುತ್ತಾರೆ ಮತ್ತೊಬ್ಬರು ಇನ್ನೊಬ್ಬರ ಬಳಿ ಹೇಳುತ್ತಾರೆ ಹೀಗೆ ಒಬ್ಬರಿಂದ ಒಬ್ಬರಿಗೆ ವಿಷಯ ಕೆಟ್ಟದಾಗಿ ಬಿಂಬಿಸುತ್ತಾ ಹೋಗುತ್ತದೆ ಇದು ನಿಮಗೆ ಹಾನಿಕಾರಕವಾಗುತ್ತದೆ, ನಿಮ್ಮ ಜೀವನ ಹಾಳಾಗುವ ಸಂಭವ ಇರುತ್ತದೆ ಆದ್ದರಿಂದ ನಿಮ್ಮ ಪತ್ನಿ ಬಗ್ಗೆಯಾಗಲಿ, ಕುಟುಂಬದವರ ಬಗ್ಗೆಯಾಗಲಿ ಯಾರ ಬಳಿಯೂ ಹೇಳಿಕೊಳ್ಳಬಾರದು.ಮೂರ್ಖ ಮನುಷ್ಯ ನಿಮಗೆ ಅಪಮಾನ ಮಾಡಿದರೆ ಅದರ ಬಗ್ಗೆಯೂ ಯಾರ ಹತ್ತಿರವೂ ಹೇಳಿಕೊಳ್ಳಬಾರದು ಏಕೆಂದರೆ ಜನರಿಗೆ ಇದು ಚೇಷ್ಟೆಯ ವಿಷಯವಾಗುತ್ತದೆ ಇದರಿಂದ ನಿಮ್ಮ ಪ್ರತಿಷ್ಠೆ ಕಡಿಮೆಯಾಗುತ್ತದೆ, ನಿಮಗೆ ಗೌರವ ಕೊಡುವುದು ಕಡಿಮೆಯಾಗುತ್ತದೆ. ಪ್ರತಿಯೊಬ್ಬ ಮನುಷ್ಯನಿಗೂ ಆತ್ಮಸಮ್ಮಾನ ಬಹಳ ಮುಖ್ಯವಾಗಿರುತ್ತದೆ ಆದ್ದರಿಂದ ಪುರುಷನು ಈ ನಾಲ್ಕು ವಿಷಯಗಳನ್ನು ಯಾರ ಬಳಿಯೂ ಹಂಚಿಕೊಳ್ಳಬಾರದು. ಚಾಣಕ್ಯರವರ ಮಾತನ್ನು ಪಾಲಿಸಿದರೆ ಜೀವನದಲ್ಲಿ ಸಂತೋಷವಾಗಿರಬಹುದು ಏಕೆಂದರೆ ಅವರು ತಮ್ಮ ಪುಸ್ತಕದಲ್ಲಿ ಹೇಳಿರುವ ವಿಷಯಗಳು ಇಂದಿಗೂ ಅನುಸರಿಸುವಂತಹವುಗಳಾಗಿವೆ.

Related Post

Leave a Comment