ಪಿತೃಪಕ್ಷದ ಈ ದಿನಗಳಲ್ಲಿ ಎಚ್ಚರ ಎಚ್ಚರ… ಈ ಮೂರು ತಪ್ಪು ಮಾಡಿದರೆ ತೊಂದರೆಗಳು ಆಗುತ್ತದೆ.

Written by Anand raj

Published on:

ಪಿತೃಪಕ್ಷ ಸೆಪ್ಟೆಂಬರ್ 20 ರಿಂದ ಆರಂಭವಾಗಿದ್ದು ಅಕ್ಟೋಬರ್ 6 ರವರೆಗೆ ಪಿತೃಪಕ್ಷದ ದಿನ ಇರಲಿದೆ. ಭಾದ್ರಪದ ಮಾಸದ ಪೌರ್ಣಮಿಗೆ ಪ್ರಾರಂಭವಾಗಿ ಅಶ್ವಯುಜ ಮಾಸದ ಅಮಾವಾಸ್ಯೆಯವರೆಗೆ ಪಿತೃಪಕ್ಷ ಮುಗಿಯಲಿದೆ. ಈ ಪಿತೃಪಕ್ಷ ಸಮಯದಲ್ಲಿ ಕೆಲವೊಬ್ಬರು ಮಾಡುವಂತಹ ತಪ್ಪುಗಳಿಂದ ಸಾಕಷ್ಟು ಸಮಸ್ಯೆಗಳನ್ನು ಮತ್ತು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಪಿತೃಪಕ್ಷ ದಿನಗಳಲ್ಲಿ ಈ ತಪ್ಪುಗಳನ್ನು ಮಾಡಬಾರದು. ಈ ತಪ್ಪುಗಳನ್ನು ಮಾಡಿದರೆ ನಿಮಗೆ ತೊಂದರೆಗಳು ಆಗುತ್ತದೆ.

ಇಂತಹ ಸಮಯದಲ್ಲಿ ಹಿಂದುಗಳು ಪೂರ್ವಜರ ಆತ್ಮಶಾಂತಿಗೋಸ್ಕರ ದರ್ಪಣ ಪಿಂಡ ಪ್ರಧಾನ ಮತ್ತು ಶ್ರಾದ್ಧಗಳಂತಹ ಆಚರಣೆಗಳನ್ನು ನೆರವೇರಿಸುತ್ತಾರೆ. ಪಿತೃಪಕ್ಷದಲ್ಲಿ ಈ ಕಾರ್ಯಗಳನ್ನು ಮಾಡುವುದರಿಂದ ಪೂರ್ವಜರು ಸಂತೃಪ್ತರಾಗಿ ಅವರ ಆಶೀರ್ವಾದವನ್ನು ಪಡೆಯಬಹುದಾಗಿದೆ. ಇದರ ಜೊತೆಗೆ ಯಶಸ್ಸು, ಸಂತೋಷ, ಸಮೃದ್ಧಿಯನ್ನು ಕೂಡ ಪಡೆಯಬಹುದು.ಈ ಸಮಯದಲ್ಲಿ ಈ ರೀತಿಯ ಕೆಲಸಗಳನ್ನು ಮಾಡುವುದರಿಂದ ಮತ್ತು ಈ ದಿನಗಳಲ್ಲಿ ಶಾಸ್ತ್ರಗಳ ಪ್ರಕಾರ ಪಿತೃಪಕ್ಷದಲ್ಲಿ ಈ ತಪ್ಪುಗಳನ್ನು ಮಾಡಬಾರದು.

1, ಪಿತೃಪಕ್ಷ ಸಮಯದಲ್ಲಿ ಮಾಂಸಾಹಾರ ಸೇವನೆ ಮಾಡಬಾರದು. 16 ದಿನಗಳಲ್ಲಿ ಮಾಂಸಾಹಾರ ಮತ್ತು ಮಧ್ಯಪನ ಸೇವನೆಯನ್ನು ಮಾಡಬಾರದು. ಈ ರೀತಿ ಮಾಡಿದರೆ ಪೂರ್ವಜರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಈ ರೀತಿ ಮಾಡಿದವರಿಗೆ ಸಮಸ್ಯೆಗಳು ಹೆಚ್ಚಾಗಿ ಉಂಟಾಗುತ್ತವೆ. ಆದ್ದರಿಂದ ಈ ಸಮಯದಲ್ಲಿ ಸಸ್ಯಾಹಾರ ಸೇವನೆ ಮಾಡುವುದು ಉತ್ತಮ.2, ಕೂದಲನ್ನು ಕತ್ತರಿಸಬಾರದು.ಮನೆಯಲ್ಲಿ ಶ್ರಾದ್ಧ ಮಾಡುವ ವ್ಯಕ್ತಿಯು ಪಿತೃಪಕ್ಷದ ಹದಿನಾರು ದಿನಗಳ ಕಾಲ ಕೂದಲುಗಳನ್ನು ಕತ್ತರಿಸುವುದು ಹಾಗೂ ಉಗುರುಗಳನ್ನು ತೆಗೆಯುವುದು ಮಾಡುವಂತಿಲ್ಲ.

3, ಇನ್ನು ಪ್ರಾಣಿಗಳಿಗೆ ಆಹಾರವನ್ನು ನೀಡಬೇಕು. ಪಿತೃಪಕ್ಷ ಸಂದರ್ಭದಲ್ಲಿ ನಿಮ್ಮ ಮನೆಗೆ ಪ್ರಾಣಿಗಳು ಪಕ್ಷಿಗಳು ಬಂದರೆ ಅವುಗಳಿಗೆ ಏನು ಆಹಾರ ನೀಡದೆ ಕಳಿಸಬೇಡಿ. ಪೂರ್ವಜರು ಅವುಗಳ ರೂಪದಲ್ಲಿ ಮನೆಯ ಬಾಗಿಲಿಗೆ ಬರುತ್ತಾರೆ. ಆದ್ದರಿಂದ ಈ ಸಂದರ್ಭದಲ್ಲಿ ಮನೆ ಬಾಗಿಲಿಗೆ ಯಾವುದಾದರೂ ಪ್ರಾಣಿ ಅಥವಾ ಪಕ್ಷಿ ಬಂದರೆ ಆಹಾರವನ್ನು ನೀಡುವುದು ತುಂಬಾನೆ ಒಳ್ಳೆಯದು.

4,ಇನ್ನು ಬಾಳೆಯ ಎಲೆಯಲ್ಲಿ ಊಟಬ್ರಾಹ್ಮಣರನ್ನು ಕರೆಸಿ ಬಾಳೆ ಎಲೆಯ ಊಟದ ವ್ಯವಸ್ಥೆಯನ್ನು ಮಾಡಿದರೆ. ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಶುಭ ಸಮಾರಂಭಗಳನ್ನು ಈ ಸಂದರ್ಭದಲ್ಲಿ ಮಾಡುವುದು ಒಳ್ಳೆಯದಲ್ಲ. ಹೊಸ ಕೆಲಸಕಾರ್ಯಗಳನ್ನು ಶುರು ಮಾಡುವುದಕ್ಕೆ ಇದು ಅಷ್ಟೊಂದು ಒಳ್ಳೆಯ ಸಮಯವಲ್ಲ. ಆದ್ದರಿಂದ ಈ ಪಿತೃಪಕ್ಷ ಸಮಯದಲ್ಲಿ ಈ ರೀತಿಯ ತಪ್ಪುಗಳನ್ನು ಮಾಡಬೇಡಿ.

Related Post

Leave a Comment