ಈ ಗುಣಗಳನ್ನು ಬಿಡದೇ ಇದ್ದರೆ ಲಕ್ಷ್ಮಿ ದೇವಿ ಒಲಿಯುವುದು ಕಷ್ಟ ಯಾವಾಗಲೂ ಧನವಂತರು ಆಗೋದಿಲ್ಲ

Featured-Article

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಈ ಗುಣಗಳನ್ನು ಬಿಡದೇ ಇದ್ದರೆ ಶ್ರೀ ಮಹಾ ಲಕ್ಷ್ಮಿ ಒಲಿಯುವುದು ಬಹಳ ಕಷ್ಟ. ಹೌದು ಸಂಪತ್ತು, ಸಮೃದ್ಧಿ, ಆದಿ ದೇವತೆಯಾದ ಮಹಾಲಕ್ಷ್ಮಿ ಇವುಗಳ ಪ್ರತಿ ನಿಧಿ ಲೌಕಿಕದ ಆಸೆಗಳ ಶ್ರೀಮತಿಗೆ ಇಚ್ಛೆಗಳನ್ನು ಈಡೇರಿಸಿಕೊಳ್ಳಲು ಲಕ್ಷ್ಮಿ ಕೃಪೆ ಬಹಳ ಮುಖ್ಯವಾಗುತ್ತದೆ. ಲಕ್ಷ್ಮಿಯ ಕೃಪೆ ದೊರೆತರೆ ಜೀವನದಲ್ಲಿ ಯಶಸ್ಸು ಸಿಗುವುದು ಖಂಡಿತಾ ಎಂಬ ನಂಬಿಕೆ ಇದೆ. ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳುವುದು ಅಷ್ಟು ಸುಲಭವಲ್ಲ ಅವಳನ್ನು ಒಲಿಸಿಕೊಂಡ ನಂತರ ಅವಳನ್ನು ಉಳಿಸಿಕೊಳ್ಳುವುದು ಅಷ್ಟು ಸುಲಭವಾಗಿಲ್ಲ ನಿರಂತರವಾಗಿರಬೇಕೆಂದರೆ ಕೆಲವು ನಕಾರಾತ್ಮಕ ಅಂಶಗಳಿಂದ ಸಾಧ್ಯವಾದಷ್ಟು ದೂರ ಇರುವುದು ಒಳ್ಳೆಯದು.ಅಥಾವ ಅಂತಹ ಗುಣಗಳನ್ನು ಅಳವಡಿಸಲು ಹೋಗಬಾರದು. ಮೊದಲನೆಯದಾಗಿ ಸ್ವಚ್ಛತೆಯಿಂದ ಮನೆಯನ್ನು ಇಡಬೇಕು ಎಲ್ಲಿ ಸ್ವಚ್ಛತೆ ಇರುವುದಿಲ್ಲ ಅಲ್ಲಿ ಶ್ರೀ ಮಹಾ ಲಕ್ಷ್ಮಿ ಇರುವುದಿಲ್ಲ ಅದರಿಂದ ಹಣ ಸಂಪತ್ತು ವೃದ್ಧಿ ಆಗಬೇಕು ಎಂದರೆ ಸ್ವಚ್ಛತೆ ಪ್ರಭಾವ ಹೆಚ್ಚು ಬೀರುತ್ತದೆ

ಎರಡನೇಯದಾಗಿ ಸೊಂಬೇರಿತನ ಯಾವುದೇ ಪ್ರಯತ್ನ ನಡೆಸದೆ ಏಕಾಎಕಿ ಸಂಪತ್ತು ಗಳಿಸಲು ಸಾದ್ಯವಿಲ್ಲ ಕಷ್ಟ ಪಡದೆ ಲಕ್ಷ್ಮಿಯನ್ನು ಒಲಿಸಿಕೊಳ್ಳಬಹುದು ಎಂದು ಕೊಂಡಿದರೆ ಅದು ಸಾಧ್ಯವೇ ಇಲ್ಲ ಎಂದು ತಿಳಿದುಕೋಳ್ಳಬೇಕು. ಬೆಳಗ್ಗೆ ಲೇಟಾಗಿ ಏಳುವುದು, ಸಂಜೆ ಲೇಟಾಗಿ ಮಲಗುವುದು ಈ ಸೊಂಬೇರಿತನವನ್ನು ಬಿಡಬೇಕು ಎಂದು ಹೇಳುತ್ತಾರೆ ಹಿರಿಯರು. ಮೂರನೇಯದಾಗಿ ನಿಮ್ಮನ್ನು ನೀವು ನಂಬದ ಜನ ದೇವರನ್ನು ನಂಬಿದರೆ ಏನು ಪ್ರಯೋಜನ ಎಂದಿದ್ದಾರೆ ಸ್ವಾಮಿ ವಿವೇಕಾನಂದರು. ಸಂಪತ್ತು ಹೆಚ್ಚಾಗಬೇಕು ಎಂದರೆ ನಮ್ಮನ್ನು ನಾವು ನಂಬಬೇಕು

ಅತಿ ಆಸೆ, ಅತಿಯಾದರೆ ಅಮೃತವು ವಿಷ ಎಂಬ ಗಾದೆ ಕೂಡ ಇದೆ ಅದರಂತೆ ಶ್ರೀಮಂತಿಕೆ ಕೂಡ ಇನ್ನಷ್ಟು ಗಳಿಸಬೇಕೆಂಬ ಆಸೆ ಲಕ್ಷ್ಮಿ ದೇವಿಯ ಬರುವಿಕೆಯನ್ನು ತಡೆದಂತೆ. ಸ್ವಾರ್ಥ, ಅತಿ ಆಸೆ, ಕೋಪ, ಎಲ್ಲವನ್ನು ತೇಜಿಸಿದರೆ ಲಕ್ಷ್ಮಿ ದೇವಿಯ ಕೃಪೆ ನಿಮ್ಮದಾಗುತ್ತದೆ. ಮನೆಯಲ್ಲಿ ಈ ವಸ್ತು ಇದ್ದರೆ ಸಾಕು ಲಕ್ಷ್ಮಿ ದೇವಿಯ ಅನುಗ್ರಹ ಆಗುತ್ತದೆ ಎಂದು ಹೇಳುತ್ತಾರೆ ಹಿರಿಯರು ಪ್ರತಿ ದಿನ ಲಕ್ಷ್ಮಿ ದೇವಿಯನ್ನು ಭಕ್ತಿಯಿಂದ ಪ್ರಾರ್ಥನೆ ಮಾಡಿದರೆ ನಿಮ್ಮ ಆರ್ಥಿಕ ಸಮಸ್ಯೆಯಿಂದ ಪಾರು ಮಾಡುತ್ತಾಳೆ ಅದರಿಂದ ವ್ಯಾಪಾರ ಸ್ಥಳದಲ್ಲಿ, ಮನೆಯಲ್ಲಿ ಭಕ್ತಿಯಿಂದ ಪೂಜೆ ಮಾಡಿ ವರಾಹ ಲಕ್ಷ್ಮಿ ಹಬ್ಬ ಎಂದರೆ ಮಹಿಳೆಯರಿಗೆ ಬಹಳ ಪ್ರೀತಿ ಆದರೆ ಬರೀ ಪೂಜೆ ಮಾಡಿದರೆ ಸಾಕಾಗುವುದಿಲ್ಲ ಲಕ್ಷ್ಮಿ ದೇವಿಯ ಕೃಪೆ ಆಗಬೇಕು ಎಂದರೆ ಲಕ್ಷ್ಮಿ ದೇವಿ ಫೋಟೋ ಇಡುವ ಬಳಿ ಒಂದು ನವಿಲು ಗರಿಯನ್ನ ಇಟ್ಟು ಪೂಜೆ ಮಾಡಿ.

ಇದರಿಂದ ಲಕ್ಷ್ಮಿ ದೇವಿಯ ಅನುಗ್ರಹ ಜೊತೆಗೆ ಮನೆಯಲ್ಲಿ ಇರುವಂತಹ ನಕಾರಾತ್ಮಕ ಶಕ್ತಿ ಎಲ್ಲ ದೂರ ಆಗುತ್ತೆ ಎಲ್ಲಾ ಸಮಸ್ಯೆಗಳು ದೂರ ಆಗುತ್ತದೆ ಮತ್ತು ದೇವರ ಕೋಣೆಯಲ್ಲಿ ಲಕ್ಷ್ಮಿ ಇರುವ ಬೆಳ್ಳಿ ನಾಣ್ಯವನ್ನು ಕೂಡ ಇಡಬೇಕು ಹಾಗೂ ಶ್ರೀ ಮಹಾಲಕ್ಷ್ಮಿ ಗೆ ತಾವರೆ ಹೂವು ಇರುವ ಫೋಟೋ ಎಂದರೆ ಬಹಳ ಪ್ರೀತಿ ತಾವರೆ ಹೂವು ಯಿಂದ ಪೂಜೆ ಸಲ್ಲಿಸಿದರೆ ನಿಮ್ಮ ಆರ್ಥಿಕ ಸಮಸ್ಯೆಗಳು ದೂರ ಆಗುತ್ತದೆ.

ತಾವರೆ ಹೂವಿನ ಮೇಲೆ ಕುಳಿತಿರುವಂತಹ ಲಕ್ಷ್ಮಿ ದೇವಿಯ ಫೋಟೋ ವನ್ನು ಪೂಜೆ ಮಾಡಬೇಕು. ಮನೆಯಲ್ಲಿ ಮಹಿಳೆಯರು ಇಟ್ಟುಕೊಳ್ಳುವ ವಸ್ತುಗಳನ್ನು ಯಾವಾಗಲೂ ಇರಬೇಕು ಅಂದರೆ ಬಳೆ, ಕುಂಕುಮ, ಘೋರಂಟಿ.. ಮನೆಯನ್ನು ಯಾವಾಗಲೂ ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು. ಮೂಲೆ ಗಳಲ್ಲಿ ಕಸ ಇರಬಾರದು. ಈ ಎಲ್ಲಾ ದನ್ನು ಪಾಲಿಸಿದರೆ ನಿಮ್ಮ ಆರ್ಥಿಕ ಸಮಸ್ಯೆ ದೂರ ಆಗುತ್ತದೆ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು ಓಂ ಲಕ್ಷ್ಮಿ ದೇವಿ ಎಂದು ಕಾಮೆಂಟ್ ಮಾಡಿ

Leave a Reply

Your email address will not be published. Required fields are marked *