ರೈತ ವಿದ್ಯಾನಿಧಿ ಯೋಜನೆ! ರೈತರ ಮಕ್ಕಳ ಬ್ಯಾಂಕ್ ಖಾತೆಗೆ 2500 ರಿಂದ 11000 ಜಮಾ!

Featured-Article

ರಾಜ್ಯದ ರೈತರಿಗೆ ಮತ್ತು ರೈತರ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದ್ದು. ರೈತರ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕಾಗಿ ಸ್ಕಾಲರ್ಶಿಪ್ ನೀಡುವ ಮುಖ್ಯಮಂತ್ರಿ ವಿದ್ಯಾನಿಧಿ ಯೋಜನೆ ಅಡಿಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿವೆ. ಈ ಬದಲಾವಣೆಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ರೈತರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರು ತಾವು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನದಂದೇ ಹೊಸ ಶಿಷ್ಯವೇತನ ಯೋಜನೆಯನ್ನು ಘೋಷಣೆ ಮಾಡಿದರು. ಹೊಸ ಶಿಷ್ಯವೇತನ ಯೋಜನೆಗೆ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ಎಂದು ಹೆಸರಿಸಲಾಗಿದೆ.

ಈ ಯೋಜನೆ ಅಡಿಯಲ್ಲಿ ರಾಜ್ಯದ ರೈತರ ಮಕ್ಕಳು ಉನ್ನತ ವಿದ್ಯಾಭ್ಯಾಸಕ್ಕಾಗಿ ಸ್ಕೋಲರ್ ಶಿಪ್ ಪಡೆಯಲು ನಿಗದಿಪಡಿಸಿದ್ದಾ ಅರ್ಹತೆಗಳಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿ ಯೋಜನೆಗೆ ತಿದ್ದುಪಡಿ ತಂದಿದೆ. ರಾಜ್ಯ ಸರ್ಕಾರವು ತನ್ನ ಮಹತ್ವಾಕಾಂಕ್ಷೆ ಯೋಜನೆಯಾದ ರೈತ ವಿದ್ಯಾನಿಧಿ ಯೋಜನೆಗೆ ಮಹತ್ವದ ಬದಲಾವಣೆ ಮಾಡಿದ್ದು ಅರ್ಜಿ ಸಲ್ಲಿಸದೇ ಇದ್ದರು ರೈತ ಕುಟುಂಬದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ರೈತ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲು ಸರ್ಕಾರ ಮುಂದಾಗಿದೆ. ಸರ್ಕಾರದ ಬಳಿ ಇರುವ ರೈತರ ದಾಖಲೆಗಳ ಆಧಾರದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿ ರೈತ ವಿದ್ಯಾನಿಧಿ. ವಿದ್ಯಾರ್ಥಿ ವೇತನ ನೀಡಲು ಸರ್ಕಾರ ನಿರ್ಧರಿಸಿದೆ.

ಒಂದು ವೇಳೆ ವಿದ್ಯಾರ್ಥಿಗಳು ರೈತರ ಮಕ್ಕಳು ಆಗಿದ್ದು ವಿದ್ಯಾನಿಧಿ ಯೋಜನೆಯ ಸ್ಕಾಲರ್ಶಿಪ್ ಪಡೆಯಲು ಅರ್ಹರಾಗಿದ್ದು ಬರದೇ ಇದ್ದಾರೆ ಅವರು ತಮ್ಮ ಎಲ್ಲಾ ದಾಖಲೆಗಳ ಮೂಲಕ ಆನ್ಲೈನ್ ನಲ್ಲಿ raitamitra. Karnataka.govt.in ಈ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಲು ಕೂಡ ಅವಕಾಶವನ್ನು ಸರ್ಕಾರ ನೀಡಿದೆ.ಹೊಸದಾಗಿ ಹೊರಡಿಸಿದ ಆದೇಶದ ಪ್ರಕಾರ ವಿವಿಧ ಇಲಾಖೆಗಳಲ್ಲಿ ಲಭ್ಯ ಇರುವ ಮಾಹಿತಿಯ ಆಧಾರದ ಮೇಲೆ ಕರ್ನಾಟಕ ರೈತಮಕ್ಕಳ ವಿದ್ಯಾರ್ಥಿ ವೇತನ ಯೋಜನೆಗೆ ಅರ್ಹರಾಗಿರುವ ವಿದ್ಯಾರ್ಥಿಗಳನ್ನು ಸರ್ಕಾರ ಗುರುತಿಸುತ್ತದೆ.ಅವರಿಗೆ ಉನ್ನತ ಶಿಕ್ಷಣಕ್ಕಾಗಿ ಆರ್ಥಿಕ ನೆರವನ್ನು ನೀಡುತ್ತದೆ.ಪ್ರಮುಖವಾಗಿ ವಿದ್ಯಾರ್ಥಿಗಳು ರೈತರ ಮಕ್ಕಳು ಎನ್ನುವುದನ್ನು ಕತಾರಿ ಪಡಿಸಲು ಅವರ ತಂದೆ ಅಥವಾ ತಾಯಿಯ ಹೆಸರಿನಲ್ಲಿ ರೈತರ ಗುರುತಿನ ಚೀಟಿಯ ಸಂಖ್ಯೆಯನ್ನು ನೀಡಬೇಕು.

ವಿದ್ಯಾರ್ಥಿಗಳು ಈಗಾಗಲೇ ಸರ್ಕಾರದ ಯಾವುದೇ ಸ್ಕಿಕಾರ್ಶಿಪ್ ಪಡೆದುಕೊಂಡಿದ್ದರು ರೈತ ವಿದ್ಯಾನಿಧಿಯ ಯೋಜನೆಯ ಸ್ಕೋಲರ್ ಶಿಪ್ ಅನ್ನು ಸಹ ಪಡೆದುಕೊಳ್ಳಬಹುದಾಗಿದೆ.ಯಾವುದೇ ವಿದ್ಯಾರ್ಥಿ ವೇತನ ಪಡೆಯುತ್ತಿದ್ದರು ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಾ ಸ್ಕ್ಯಾಲರ್ ಶಿಪ್ ಪಡೆಯಲು ಅನುಮತಿ ನೀಡಿದೆ.ಇನ್ನು ತುಂಬು ಕುಟುಂಬ ಇದ್ದರು ಸಹ ಮುಖ್ಯಮಂತ್ರಿ ಅವರು ಅನುಮತಿ ನೀಡಿದ್ದಾರೆ.ತಾತನ ಹೆಸರಿನಲ್ಲಿ ಅಸ್ತಿ ಇದ್ದರು ಅವರ ಕುಟುಂಬದ ವಂಶವಳಿ ವ್ಯವಸ್ಥೆಯನ್ನು ಅಳವಡಿಸಿ ರೈತ ಕುಟುಂಬದ ಮೊಮ್ಮಕ್ಕಳಿಗೂ ಈ ಯೋಜನೆಯ ಲಾಭ ದೊರೆಯುವಂತೆ ಸರ್ಕಾರ ತಿಂದುಪಡಿ ಮಾಡಿದೆ.ಮಾಹಿತಿ ಪ್ರಕಾರ 1.75 ಲಕ್ಷ ವಿದ್ಯಾರ್ಥಿಗಳು ಇದ್ದಾರೆ ಎಂದು ಹೇಳಲಾಗಿದೆ.ಹಾಗಾಗಿ ಅರ್ಜಿ ಸಲ್ಲಿಸದೆ ಇದ್ದರು ಅವರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಬೀಳುತ್ತದೆ.

Leave a Reply

Your email address will not be published.