ವರಮಹಾಲಕ್ಷ್ಮಿ ಹಬ್ಬದ ದಿನ ಉಪ್ಪಿನ ದೀಪರಾಧನೆ ಹಚ್ಚಬಹುದೇ..? ಹಬ್ಬದ ದಿನ ಉಪ್ಪಿನ ದೀಪ ಹಚ್ಚುವುದರಿಂದ ಫಲಗಳೇನು?

Written by Anand raj

Published on:

ಕಲ್ಲು ಉಪ್ಪನ್ನು ಲಕ್ಷ್ಮಿ ಸ್ವರೂಪ ಎಂದು ಭಾವಿಸುತ್ತೇವೆ. ಲಕ್ಷ್ಮಿಯ ಕೃಪಾ ಕಟಾಕ್ಷ ಪಡೆಯುವುದಕ್ಕೆ ಈ ಉಪ್ಪಿನ ದೀಪರಾಧನೆ ಮಾಡಬೇಕು. ಜೊತೆಗೆ ಹಣಕಾಸಿನ ಸಮಸ್ಸೆಗಳು ಕಡಿಮೆ ಆಗಲಿ ಎಂದು ಈ ಉಪ್ಪಿನ ದೀಪರಾಧನೆಯನ್ನು ಸುಮಾರು ಜನರು ಹಚ್ಚುತ್ತಾರೆ.

ಇನ್ನು ವರಮಹಾಲಕ್ಷ್ಮಿ ಹಬ್ಬದ ದಿನ ಉಪ್ಪಿನ ದೀಪರಾಧನೆ ಮಾಡಿದರೆ ಒಳ್ಳೆಯದು.ಉಪ್ಪನ್ನು ಯಾವುದೇ ಕಾರಣಕ್ಕೂ ಮಂಗಳವಾರ ಶುಕ್ರವಾರ ದಿನ ಮನೆಯಿಂದ ಹೊರಗೆ ಹಾಕಬಾರದು ಹಾಗು ಶನಿವಾರದ ದಿನ ಉಪ್ಪನ್ನು ತಂದರೆ ತುಂಬಾ ಒಳ್ಳೆಯದು.ಉಪ್ಪು ಸಮುದ್ರದಲ್ಲಿ ಸಿಗುವುದು ಮತ್ತು ಲಕ್ಷ್ಮಿಗೆ ಹೊಲಿಸುತ್ತಾರೆ.ಹಾಗಾಗಿ ಉಪ್ಪು ತುಂಬಾನೇ ಶ್ರೇಷ್ಠ.ಅದರೆ ಕೆಲವರು ಉಪ್ಪಿನ ದೀಪರಾಧನೆ ಮಾಡಬಾರದು ಎಂದು ಹೇಳುತ್ತಿದ್ದಾರೆ.

ಇನ್ನು ಮಣ್ಣಿನ ಮಡಿಕೆ ಮೇಲೆ ಉಪ್ಪು ಹಾಕಿ. ಅದರ ಮೇಲೆ ಎರಡು ವೀಳ್ಯದೆಲೆ ಇಟ್ಟು. ಅದರ ಮೇಲೆ ದೀಪ ಇಟ್ಟು ಅದರ ಒಳಗೆ ಅಕ್ಷತೆ ಹಾಕಿ ಮತ್ತು ಅದರ ಮೇಲೆ ದೀಪ ಇಟ್ಟು ದೀಪರಾಧನೆ ಮಾಡುವುದನ್ನು ತಿಳಿಸಿಕೊಟ್ಟಿದ್ದೇವೆ. ಡೈರೆಕ್ಟ್ ಆಗಿ ಉಪ್ಪಿನ ಮೇಲೆ ದೀಪ ಮತ್ತು ಬತ್ತಿ ಹಾಕಿ ದೀಪರಾಧನೆ ಮಾಡಿರುವುದಿಲ್ಲ.ಇನ್ನು ದೀಪರಾಧನೆಯನ್ನು 4 ವರ್ಷದಿಂದ ಮಾಡಿದರು ನಮಗೆ ಯಾವುದೇ ರೀತಿಯ ಕಷ್ಟಗಳು ಬಂದಿಲ್ಲ ಮತ್ತು ಹಣದ ಕೊರತೆ ಎದುರು ಆಗಿಲ್ಲ.

ಒಂದು ಪೀಠದ ಮೇಲೆ ಅರಿಶಿಣ ಹಚ್ಚಿ ಅಷ್ಟದಳ ರಂಗೋಲಿ ಹಾಕಬೇಕು. ರಂಗೋಲಿಗೆ ಅರಿಶಿಣ ಕುಂಕುಮ ಅಕ್ಷತೆ ಹೂವನ್ನು ಇಟ್ಟು ಪೂಜೆಯನ್ನು ಮಾಡಬೇಕು. ನಂತರ ಮಣ್ಣಿನ ದೀಪವನ್ನು ತೆಗೆದುಕೊಂಡು ಅರಿಶಿಣವನ್ನು ಹಚ್ಚಿ ರಂಗೋಲಿ ಮೇಲೆ ಇಡಬೇಕು. ನಂತರ ಬತ್ತಿ ಹಾಕಿ ತುಪ್ಪದ ದೀಪವನ್ನು ಹಚ್ಚಬೇಕು.

ಇನ್ನು ಕೆಂಪು ಬಣ್ಣದ ಬತ್ತಿ ಮತ್ತು ಅರಿಶಿಣ ಬಣ್ಣದ ಬತ್ತಿಯನ್ನು ಹಾಕಿದರೆ ತುಂಬಾ ಒಳ್ಳೆಯದು. ತುಪ್ಪ ಇಲ್ಲಾ ಎನ್ನುವವರು ಏಳ್ಳು ಎಣ್ಣೆ ಮತ್ತು ಕೊಬ್ಬರಿ ಎಣ್ಣೆಯನ್ನು ಕೂಡ ಹಾಕಬೇಕು. ನಂತರ ದೀಪ ಹಚ್ಚಿ ಮನಸ್ಸುಪೂರ್ತಿಯಾಗಿ ಬೇಡಿಕೊಳ್ಳಬೇಕು. ಉಪ್ಪಿನ ದೀಪರಾಧನೆ ಬ್ರಾಹ್ಮೀ ಮುಹೂರ್ತದಲ್ಲಿ ಹಚ್ಚಿದರೆ ತುಂಬಾ ಒಳ್ಳೆಯದು.ಬ್ರಾಹ್ಮೀ ಮುಹೂರ್ತದಲ್ಲಿ ಪೂಜೆ ಮಾಡಲು ಸಾಧ್ಯ ಆಗದೆ ಇದ್ದರೆ ಸಂಜೆ ಸಮಯದಲ್ಲಿ ಗೊದೂಳಿ ಸಮಯದಲ್ಲಿ ಮಾಡಿದರೆ ಸಾಕು.

Related Post

Leave a Comment