ಹೆಸರಿನ ಮೂಲಕ ನಕ್ಷತ್ರ ಮತ್ತು ರಾಶಿ ತಿಳಿಯುವುದು ಹೇಗೆ?

Written by Anand raj

Published on:

ಮೊದಲನೆಯದಾಗಿ ರಾಶಿಯನ್ನು ತಿಳಿಯುವ ವಿಧಾನಗಳು ಜನ್ಮನಕ್ಷತ್ರದ ಮೂಲಕ ನಕ್ಷತ್ರದ ಮೂಲಕ ಮತ್ತು ನಾಮ ನಕ್ಷತ್ರದ ಮೂಲಕ. ಜನ್ಮನಕ್ಷತ್ರ ಹುಟ್ಟಿದ ದಿನಾಂಕದಿಂದ ತಿಳಿಯುವಂತಹದು, ನಾಮ ನಕ್ಷತ್ರ ಹೆಸರಿನ ಮೊದಲ ಅಕ್ಷರದಿಂದ ತಿಳಿಯುವಂತದ್ದು. ರಾಶಿ ಕುಂಡಲಿಯಲ್ಲಿ 12 ರಾಶಿಗಳು 22 ಕುಂಡಲಿಗಳು 108 ಪಾದಗಳ ಸಂಪೂರ್ಣ ಸಮೂಹವೇ ರಾಶಿ ಕುಂಡಲಿ.

ರಾಶಿಗಳು 12 ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನಸ್ಸು, ಮಕರ, ಕುಂಭ, ಮೀನ ರಾಶಿಗಳು. ನಕ್ಷತ್ರಗಳು 22 ಅಶ್ವಿನಿ ನಕ್ಷತ್ರದಿಂದ ರೇವತಿ ನಕ್ಷತ್ರದವರೆಗೆ ನಮ್ಮ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಕ್ಷತ್ರಾ ಧರತೀ ಪಾಪಂ ಅಂದರೆ ನಕ್ಷತ್ರ ದಿಂದ ಮಾಡಿರುವ ಪಾಪ ಕಳೆಯುತ್ತದೆ, ಅಂದರೆ ನಕ್ಷತ್ರಕ್ಕೆ ನಮ್ಮ ಪಾಪಗಳನ್ನು ಕಳೆಯುವಂತಹ ಶಕ್ತಿ ಇರುತ್ತದೆ.

ಯಾವ ರಾಶಿಗೆ ಯಾವ ನಕ್ಷತ್ರ ಮತ್ತು ಯಾವ ನಕ್ಷತ್ರಕ್ಕೆ ಯಾವ ಅಕ್ಷರ ಎಂದು ನೋಡುವುದಾದರೆ. ಅಶ್ವಿನಿ ಭರಣಿ ಕೃತ್ತಿಕಾ ಪಾದ ಮೇಷಃ, ಕೃತಿಕಾ ತ್ರಯೋಪಾದಂ ರೋಹಿಣಿ ಮೃಗಶಿರಾರ್ಧಮ್ ವೃಷಭಃ, ಮೃಗಶಿರಾರ್ಧಮ್ ಆರ್ಧಾ ಪುನರ್ವಸು ತ್ರಯೋಪಾದಂ ಮಿಥುನಃ, ಪುನರ್ವಸು ಏಕಪಾದ ಪುಷ್ಯ ಆಶ್ಲೇಷಾಂತಂ ಕರ್ಕಟಃ, ಮಖಾ ಪುಬ್ಬ ಉತ್ತರಾ ಏಕಪಾದಂ ಸಿಂಹಃ, ಉತ್ತರಾತ್ರ ಯೋಪಾದಂ ಹಸ್ತಾ ಚಿತ್ರಾರ್ಧಮ್ ಕನ್ಯಾ, ಚಿತ್ರಾರ್ಧಮ್ ಸ್ವಾತೀ ವಿಷಾಖ್ಯಾತ್ರಯೋ ಪಾದಂ ತುಲಾ, ವಿಶಾಖ ಏಕಪಾದಮ್ ಅನುರಾಧಾ ಜ್ಯೋಷ್ಠಾಂತಂ ವೃಶ್ಚಿಕಃ, ಮೂಲ ಪೂರ್ವಾಷಾಡಾ ಉತ್ತರಾಷಾಡಾ ಏಕ ಪಾದಂಧನುಃ, ಉತ್ತರಾಷಾಡಾ ತ್ರಯೋಪಾದಂ ಶ್ರವಣ ಧನಿಷ್ಠಾರ್ಧಮ್ ಮಕರಃ, ಧನಿಷ್ಠಾರ್ಧಮ್ ಶತಿಭಾಷಾ ಪೂರ್ವಭಾದ್ರಾ ತ್ರಯೋಪಾದಂ ಕುಂಭಃ, ಪೂರ್ವಭಾದ್ರಾ ಏಕಪಾದಂ ಉತ್ತರಾಭದ್ರಾ ರೇವತಂತ್ಯಮ್ ಮೀನಃ.

Related Post

Leave a Comment