ಮನೆಯ ಈ ದಿಕ್ಕಿನಲ್ಲಿ ಈ ವಸ್ತುವನ್ನು ಇಡುವುದರಿಂದ ಸದಾ ತುಂಬಿರುತ್ತೆ ಸಂಪತ್ತು

Featured-Article

ವಾಸ್ತು ಶಾಸ್ತ್ರದಲ್ಲಿ ಪ್ರತಿ ಕೋಣೆಯಿಂದ ಹಿಡಿದು ಮನೆಯ ಮೂಲೆ ಮೂಲೆಗೂ ಪ್ರಮುಖ ವಿಷಯಗಳನ್ನು ಹೇಳಲಾಗುತ್ತದೆ. ಅದು ಮನೆಯ ಮುಖ್ಯ ದ್ವಾರ, ಅಡುಗೆ ಕೋಣೆ, ಸ್ಟೋರ್ ರೂಂ, ಮಲಗುವ ಕೋಣೆ, ಸ್ನಾನಗೃಹ ಅಥವಾ ಅಧ್ಯಯನ ಕೊಠಡಿಯಾಗಿರಲಿ ಎಲ್ಲಕ್ಕೂ ಅದರದೇ ಆದ ಮಹತ್ವವಿದೆ. ವಾಸ್ತು ಶಾಸ್ತ್ರದ ಈ ನಿಯಮಗಳನ್ನು ಪಾಲಿಸಿದರೆ ಮನೆಯಲ್ಲಿ ಸದಾ ಸುಖ ಸಂತೋಷ ನೆಲೆಸುತ್ತದೆ. ಜೊತೆಗೆ ಯಾವತ್ತೂ ಹಣದ ಕೊರತೆಯಾಗುವುದಿಲ್ಲ. ಮನೆಯವರು ಆರೋಗ್ಯವಾಗಿ ಇರುತ್ತಾರೆ ಮತ್ತು ವೇಗವಾಗಿ ಪ್ರಗತಿ ಹೊಂದುತ್ತಾರೆ. ತಾಯಿ ಲಕ್ಷ್ಮಿಯ ಕೃಪೆಯಿಂದ ಮನೆಯು ಹಣ ಮತ್ತು ಧಾನ್ಯಗಳಿಂದ ತುಂಬಿರುತ್ತದೆ ಎಂದು ಹೇಳಲಾಗುತ್ತದೆ. ಈ ಲೇಖನದಲ್ಲಿ ನಾವು ಮನೆಯನ್ನು ಯಾವಾಗಲೂ ಆಹಾರ ಧಾನ್ಯಗಳಿಂದ ತುಂಬಿಸುವ ವಾಸ್ತು ಸಲಹೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಈ ವಾಸ್ತು ಸಲಹೆಗಳು ಧಾನ್ಯಗಳ ಶೇಖರಣೆಗೆ ಸಂಬಂಧಿಸಿವೆ :ಇಂದಿಗೂ ಅನೇಕ ಮನೆಗಳಲ್ಲಿ ವರ್ಷಕ್ಕಾಗುವಷ್ಟು ಧಾನ್ಯವನ್ನು ಶೇಖರಿಸಿ ಇಡಲಾಗುತ್ತದೆ. ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಬೇಸಿಗೆ ಕಾಲದಲ್ಲಿ ಮಾತ್ರ ಮಾಡಲಾಗುತ್ತದೆ. ಇದು ಧಾನ್ಯವನ್ನು ತೊಳೆಯುವುದು, ಒಣಗಿಸುವುದು, ಸ್ವಚ್ಛಗೊಳಿಸುವುದು ಎಲ್ಲವನ್ನೂ ಒಳಗೊಂಡಿದೆ. ಇದೇ ವೇಳೆ ಕೆಲ ಮನೆಗಳಲ್ಲಿ ಕನಿಷ್ಠ ಮಳೆಯಾಗುವವರೆಗೆ ಆಹಾರ ಧಾನ್ಯದ ವ್ಯವಸ್ಥೆ ಮಾಡಲಾಗುತ್ತದೆ. ಈ ಧಾನ್ಯ ಮತ್ತು ಅಡುಗೆ ಮನೆಯಲ್ಲಿ ಬಳಸುವ ವಸ್ತುಗಳನ್ನು ನಿರ್ದಿಷ್ಟ ಜಾಗದಲ್ಲಿ ಇಟ್ಟರೆ ಅಥವಾ ವಾಸ್ತು ಶಾಸ್ತ್ರದಲ್ಲಿ ಹೇಳಿರುವ ದಿಕ್ಕಿಗೆ ಕಿಚನ್ ಸ್ಟೋರ್ ರೂಂ ಮಾಡಿದರೆ ಮನೆಯಲ್ಲಿ ಹಣ ಮತ್ತು ಆಹಾರ ಧಾನ್ಯಗಳ ಕೊರತೆ ಇರುವುದಿಲ್ಲ ಎಂಬ ನಂಬಿಕೆಯಿದೆ. 

ನೀವು ಅಡುಗೆ ಮನೆಯಲ್ಲಿಯೇ ಆಹಾರ ಧಾನ್ಯಗಳನ್ನು ಸಂಗ್ರಹಿಸುವ ವ್ಯವಸ್ಥೆಯನ್ನು ಮಾಡುತ್ತಿದ್ದರೆ, ಇದಕ್ಕಾಗಿ ಅಡುಗೆಮನೆಯ ಪಶ್ಚಿಮ ಕೋನ (ವಾಯುವ್ಯ ದಿಕ್ಕು) ಉತ್ತಮವಾಗಿರುತ್ತದೆ. ಈ ದಿಕ್ಕಿನಲ್ಲಿ ವಸ್ತುಗಳನ್ನು ಇಡುವುದರಿಂದ, ಮನೆಯಲ್ಲಿ ಯಾವುದಕ್ಕೂ ಕೊರತೆಯಾಗುವುದಿಲ್ಲ. ದೀರ್ಘಕಾಲ ಶೇಖರಿಸಿಡಬೇಕಾದ ಆಹಾರ ಮತ್ತು ಪಾನೀಯಕ್ಕೆ ಸಂಬಂಧಿಸಿದ ವಸ್ತುಗಳನ್ನು ನೈತ್ರತ್ಯ ಕೋನದಲ್ಲಿ (ನೈಋತ್ಯದ ಕೇಂದ್ರ ಸ್ಥಳ) ಇಡುವುದು ಒಳ್ಳೆಯದು. ಧಾನ್ಯಗಳನ್ನು ಸಂಗ್ರಹಿಸಲು ಪ್ರತ್ಯೇಕ ಸ್ಟೋರ್ ರೂಂ ನಿರ್ಮಿಸುತ್ತಿದ್ದರೆ, ಮನೆಯ ಪಶ್ಚಿಮ ಕೋನವೂ ಇದಕ್ಕೆ ಉತ್ತಮ ಎಂದು ಹೇಳಲಾಗುತ್ತದೆ.

Leave a Reply

Your email address will not be published.