ಮೀನಿನ ಮುಳ್ಳು ನಿಮ್ಮ ಗಂಟಲಿನಲ್ಲಿ ಸಿಕ್ಕಿಕೊಂಡರೆ ತಕ್ಷಣ ಹೀಗೆ ಮಾಡಿ ಮುಳ್ಳು ಹೊರಗೆ ಬರುತ್ತೆ

Written by Anand raj

Published on:

ನಾನ್ ವೆಜಿಟೇರಿಯನ್ ಗಳಲ್ಲಿ 90% ಜನರಿಗೆ ಫಿಶ್ ಅಂದ್ರೆ ತುಂಬಾನೇ ಇಷ್ಟ. ಫಿಶ್ ಫ್ರೈ, ಫಿಶ್ ಮಸಾಲಾ, ಫಿಶ್ ಬಿರಿಯಾನಿ,ಫಿಶ್ ಗ್ರಾವಿ ಇದರ ಹೆಸರು ಕೇಳಿದರೆ ಫಿಶ್ ತಿನ್ನುವವರಿಗೆ ಬಾಯಲ್ಲಿ ನೀರು ಬರುತ್ತದೆ. ಆದ್ರೆ ಬಾಕಿ 20% ಜನರಿಗೆ ಅದರಲ್ಲಿರುವ ಮುಳ್ಳುಗಳು ದೊಡ್ಡ ಪ್ರಾಬ್ಲಮ್.ಎಲ್ಲರಿಗೂ ಮೀನಿನಲ್ಲಿರುವ ಮುಳ್ಳುಗಳನ್ನು ತೆಗೆದು ತಿನ್ನುವುದಕ್ಕೆ ಬರುವುದಿಲ್ಲ.ಅದರಲ್ಲೂ ಚಿಕ್ಕ ಮಕ್ಕಳಿಗೆ ತಿನಿಸುವಾಗ ತುಂಬಾನೇ ಎಚ್ಚರಿಕೆವಹಿಸಬೇಕು. ಫಿಶ್ ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಇದರಲ್ಲಿ ಕೊಬ್ಬಿನ ಅಂಶ ಕಡಿಮೆ ಇರುತ್ತೆ.ಆದ್ರೆ ಪ್ರೊಟೀನ್ ಹೆಚ್ಚಾಗಿರುತ್ತೆ.

ಮೀನಿನಲ್ಲಿ ಒಮೇಗಾ 3 ಫ್ಯಾಟಿ ಆಸಿಡ್, ವಿಟಮಿನ್ ಡಿ, ವಿಟಮಿನ್ ಬಿ ಹೆಚ್ಚಾಗಿರುತ್ತದೆ. ಅಷ್ಟೇ ಅಲ್ಲದೆ ಮೀನಿನಲ್ಲಿ ಕ್ಯಾಲ್ಸಿಯಂ, ಫಾಸ್ಪರಸ್,ಐರನ್,ಅಯೋಡಿನ್,ಪ್ರೋಟೀನ್ ಮ್ಯಾಗ್ನಿಷಿಯಂ ಮತ್ತು ಫೋಟೊಸಿಯಂ ಕೂಡ ಹೆಚ್ಚಾಗಿರುತ್ತದೆ. ಮೀನು ತಿನ್ನುವುದರಿಂದ ನಿಮ್ಮ ಮೆದುಳು ಚುರುಕಾಗುತ್ತದೆ ಹಾಗೆ ನಿಮ್ಮ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ.ಮೀನು ತಿನ್ನುವಾಗ ಮೀನಿನಲ್ಲಿರುವ ಮುಳ್ಳುಗಳು ನಮ್ಮ ಗಂಟಲಿನಲ್ಲಿ ಸಿಕ್ಕಿಕೊಂಡರೆ ಅನ್ನುವ ಭಯ ಇರುತ್ತದೆ.ನೀವು ಮೀನು ತಿನ್ನುವಾಗ ಹಾಗೂ ಅದರ ಮುಳ್ಳು ಗಂಟಲಲ್ಲಿ ಸಿಕ್ಕಿಕೊಂಡರೆ ಏನು ಮಾಡಬೇಕು ಮತ್ತು ಆ ಚಿಕ್ಕ ಮುಳ್ಳನ್ನ ಹೇಗೆ ಹೊರಗೆ ತೆಗೆಯಬೇಕು. ಒಂದು ವೇಳೆ ಮೀನು ತಿನ್ನುವಾಗ ಮುಳ್ಳು ಹೊಟ್ಟೆಗೆ ಸೇರಿದರೆ ಏನು ಆಗುತ್ತೆ ಎಂದು ತಿಳಿಯೋಣ.

ಪ್ರತಿಸಲ ಮೀನು ತಿಂದಾಗಲು ಮುಳ್ಳು ಹೊಟ್ಟೆಗೆ ಸೇರುವುದಿಲ್ಲ. ಕೆಲವೊಮ್ಮೆ ಅಪರೂಪಕ್ಕೆ ಅಕಸ್ಮಾತಾಗಿ ಹೊಟ್ಟೆಗೆ ಸೇರಿಕೊಳ್ಳುತ್ತದೆ. ಆದರೆ ಈ ಮುಳ್ಳು ಹೊಟ್ಟೆಗೆ ಹೋಗಿ ಜಠರ ಮತ್ತು ಕರುಳಿನಲ್ಲಿ ಚುಚ್ಚಿಕೊಂಡ್ರೆ ಅನ್ನುವ ಭಯ ಎಲ್ಲರಲ್ಲೂ ಇದ್ದೆ ಇರುತ್ತೆ.ಹೊಟ್ಟೆಯಲ್ಲಿರುವ ಆಸಿಡ್ ನ ಅಂಶ ಹೊಟ್ಟೆಗೆ ಸೇರಿದ ಮುಳ್ಳನ್ನ ಜೀರ್ಣವಾಗುವಂತೆ ಮಾಡುತ್ತದೆ.ಆದರೆ ನಿಜವಾದ ತೊಂದರೆ ಇರುವುದು ಗಂಟಲು ಅಥವಾ ಅನ್ನನಾಳದಲ್ಲಿ ಮುಳ್ಳು ಚುಚ್ಚಿಕೊಂಡಗ ಮಾತ್ರ. ಈ ರೀತಿ ಆದಾಗ ಕೆಲವು ಸುಲಭವಾದಂತಹ ಕ್ರಮಗಳಿಂದ ಆ ಮುಳ್ಳನ್ನ ತೆಗೆಯಬಹುದು.

ಒಂದು ವೇಳೆ ನೀವು ಮೀನು ತಿನ್ನುವಾಗ ಅದರ ಮುಳ್ಳು ಕಿರು ನಾಲಿಗೆ ಕೆಳಗೆ ಸಿಕ್ಕಿಕೊಂಡರೆ ಆಗ ನೀವು ನಿಮ್ಮ ಪೂರ್ತಿ ಉಸಿರನ್ನು ಎಳೆದುಕೊಂಡು ಕೈ ಯನ್ನು ಬಾಯಿ ಮುದಕ್ಕೆ ಕಟ್ಟಬೇಕು ಮತ್ತು ನಿಮ್ಮ ಜೊತೆಯಲ್ಲಿ ಇರುವವರಿಗೆ ಗಟ್ಟಿಯಾಗಿ ಹಿಂದಿನಿಂದ ಅಪ್ಪಿಕೊಳ್ಳುವುದಕ್ಕೆ ಹೇಳಿ ಆ ಸಮಯದಲ್ಲಿ ನೀವು ಹಿಡಿದುಕೊಂಡ ಉಸಿರನ್ನ ಜೋರಾಗಿ ಬಿಡಿ. ಆಗ ಮುಳ್ಳು ಹೊರಗೆ ಬರುತ್ತೆ.ಕೆಲವೊಂದು ಬಾರಿ ನೀವು ಬಗ್ಗಿ ಬಾಯಿಯನ್ನು ತೆಗೆಯಿರಿ ಆಗ ನಿಮ್ಮ ಜೊತೆಯಲ್ಲಿ ಇರುವವರಿಗೆ ನಿಮ್ಮ ಬೆನ್ನಿನಮೇಲೆ ಬೊಗಸೆ ಕೈಯಿಂದ ತಟ್ಟಲು ಹೇಳಿ.ಈ ರೀತಿ ಮಾಡಿದಾಗ ಶ್ವಾಸನಾಳದ ಮೇಲ್ಭಾಗದಲ್ಲಿ ಚುಚ್ಚಿಕೊಂಡಿರುವಂತಹ ಮುಳ್ಳು ಹೊರಗೆ ಬರುತ್ತದೆ.

ಕೆಲವೊಂದು ಬಾರಿ ಮುಳ್ಳು ಕರುಳಿನಲ್ಲಿ ಚುಚ್ಚಿಕೊಂಡಿದ್ದಾರೆ ಆ ದಿನ ಉಪವಾಸ ಇರುವುದು ಒಳ್ಳೆಯದು. ಆದರೆ ಸಾಧ್ಯವಾದಷ್ಟು ಹೆಚ್ಚು ನೀರು ಕುಡಿಯಿರಿ ಆಗ ಮುಳ್ಳು ಸ್ವಾಭಾವಿಕವಾಗಿ ತನ್ನಷ್ಟಕ್ಕೆ ತಾನೇ ಹೊರಗೆ ಬರುತ್ತದೆ.ಇನ್ನೂ ಗಂಟಲಲ್ಲಿ ಮುಳ್ಳು ಸಿಕ್ಕಿಕೊಂಡಾಗ ಒಂದು ಬಾಳೆಹಣ್ಣನ್ನು ಜಗಿಯದೆ 2-3 ತುಂಡು ಮಾಡಿ ಒಂದೊದಾಗಿ ನುಂಗಿ. ನುಂಗುವಾಗ ಆ ತುಂಡನ್ನ 2-3 ನಿಮಿಷ ಬಾಯಲಿ ಹಾಗೆ ಇಟ್ಟುಕೊಂಡು ನಂತರ ನುಂಗಿ.ಆಗ ಬಾಯಿಯಲ್ಲಿ ಇರುವಂತಹ ಲಾಲಾರಸ ಬಾಳೆಹಣ್ಣಿನ ಜೊತೆ ಸೇರಿ ಮುಳ್ಳು ಹೊರಗೆ ಬರಲು ಸಹಾಯ ಮಾಡುತ್ತದೆ.

ಈ ರೀತಿ ಮುಳ್ಳು ಸಿಕ್ಕಿಹಾಕಿಕೊಂಡಾಗ 2 ಚಮಚ ಶೇಂಗಾ ಬೀಜವನ್ನ ಚೆನ್ನಾಗಿ ಜಗಿದು ನುಂಗಬೇಕು ಅಥವಾ ಬರೀ ಅನ್ನವನ್ನ ಜಗಿಯದೆ ಹಾಗೆ ನುಂಗಿ. ಈ ರೀತಿ ಅನ್ನವನ್ನು ನುಂಗಿದ ನಂತರ ಒಂದು ಲೋಟ ನೀರನ್ನು ಕುಡಿಯಿರಿ ಆಗ ಮುಳ್ಳು ತುಂಬಾ ಸುಲಭವಾಗಿ ಹೊಟ್ಟೆಯನ್ನು ಸೇರುತ್ತದೆ ಅಥವಾ ಬ್ರೌನ್ ಬ್ರೆಡ್ ಗೆ ಪೀನಟ್ ಬಟರ್ ಹಚ್ಚಿ ಚೆನ್ನಾಗಿ ಜಗಿದು ತಿಂದು ಒಂದು ಲೋಟ ನೀರನ್ನು ಕುಡಿಯಿರಿ.ಆಗ ಸಿಕ್ಕಿಕೊಂಡಿರುವಂತಹ ಮುಳ್ಳು ಸರಿದು ಒಳಗೆ ಹೋಗುತ್ತದೆ. ಈ ಎಲ್ಲಾ ವಿಧಾನಗಳನ್ನು ಪ್ರಯತ್ನಿಸಿದ ನಂತರವು ಮುಳ್ಳು ಹೋಗದೆ ಇದ್ರೆ ಮತ್ತೆ ಪ್ರಯತ್ನಿಸದೆ ಡಾಕ್ಟರ್ ಸಲಹೆ ಪಡೆಯುವುದು ಉತ್ತಮ. ಯಾಕೇಂದರೆ ಮೀನಿನ ಮುಳ್ಳು ಹಾಗೆ ಉಳಿದುಕೊಂಡರೆ ಆ ಭಾಗದಲ್ಲಿ ಸೋಂಕು ಕಾಣಿಸಿಕೊಳ್ಳುತ್ತದೆ.ಒಂದು ವೇಳೆ ಮುಳ್ಳು ಗಂಟಲಿನ ಆಳದಲ್ಲಿ ಚುಚ್ಚಿ ಕೊಂಡಿದ್ದಾರೆ ಚಿಕ್ಕ ಸರ್ಜರಿ ಕೂಡ ಮಾಡಬೇಕಾಗಬಹುದು.

Related Post

Leave a Comment