ಸೀತಾಫಲ ಹಣ್ಣಿನ ವಿಶೇಷತೆ!ತಿಳಿದರೆ ಅವನ್ನು ಈಗಲೇ ತಿನ್ನುತ್ತೀರ !

Featured-Article

ಸೀತಾಫಲ

ಸೀತಾಫಲ ಈ ಕಾಲದಲ್ಲಿ ನಮಗೆ ಲಭಿಸುವ ಹಣ್ಣುಗಳಲ್ಲಿ ಇದೂ ಒಂದು.ಇದರಲ್ಲಿ ವಿಟಮಿನ್ ಎ , ಮ್ಯಾಗ್ನಿಶಿಯಮ್ ,ಪೊಟ್ಯಾಷಿಯಂ , ಫೈಬರ್ , ವಿಟಮಿನ್ ಬಿ-6 , ಕ್ಯಾಲ್ಷಿಯಂ , ವಿಟಮಿನ್ ಸಿ , ಐರನ್ ನಂತಹ ಅತ್ಯಂತ ಮುಖ್ಯವಾದ ಪೋಷಕಗಳು ಇವೆ.ಇದನ್ನು ನಿತ್ಯ ನಾವು ಆಹಾರದ ಭಾಗವಾಗಿ ತಿನ್ನುವುದರಿಂದ ನಮಗೆ ಅನೇಕ ವಿಧದ ಅನಾರೋಗ್ಯಗಳು ದೂರವಾಗುತ್ತವೆ.
ಸೀತಾಫಲವಷ್ಟೇ ಅಲ್ಲ ಇದರ ಎಲೆಗಳು , ತೊಗಟೆ , ಬೇರು ಹೀಗೆ ಎಲ್ಲಾ ಭಾಗಗಳು ನಮಗೆ ಉಪಯುಕ್ತ.ಅವುಗಳಿಂದ ಆಗುವ ಲಾಭಗಳ ಬಗ್ಗೆ ಈಗ ನಾವು ತಿಳಿದುಕೊಳ್ಳೋಣ.

ದೇಹದ ಮೇಲೆ ಬೆವರಿನ ಗುಳ್ಳೆ ಗಳಾದರೆ ಸೀತಾಫಲ ಎಲೆಗಳನ್ನು ತೆಗೆದುಕೊಂಡು ಅರೆದು ಆ ಮಿಶ್ರಣವನ್ನು ಕಟ್ಟಬೇಕು.ಇದರಿಂದ ಬೆವರಿನ ಗುಳ್ಳೆಗಳ ಸಮಸ್ಯೆ ನಿವಾರರೆಯಾಗುತ್ತದೆ.

ಸೀತಾಫಲದ ಗಿಡದಿಂದ ತೆಗೆದ ತೊಗತೆಯನ್ನು ನೀರಿನಲ್ಲಿ ಹಾಕಿ ಅದರಿಂದ ಕಷಾಯ ಮಾಡಿಕೊಂಡು ಕುಡಿದರೆ ಡಯೇರಿಯಾದಂತ ಅನಾರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಸೀತಾಫಲ ಎಲೆಗಳನ್ನು ನೀರಿನಲ್ಲಿ ಹಾಕಿ ಕಷಾಯ ಮಾಡಿಕೊಂಡು ಕುಡಿದರೆ ನೆಗಡಿ ಕಡಿಮೆಯಾಗುತ್ತದೆ.ಸೀತಾಫಲವನ್ನು ಬೆಳಗ್ಗೆ ಅಲ್ಪ ಆಹಾರವಾಗಿ ತಿಂದರೆ ಇದರಿಂದ ಸ್ನಾಯುಗಳು ನರಗಳ ಬಲಹೀನತೆ ಕಡಿಮೆಯಾಗುತ್ತದೆ.ದೇಹಕ್ಕೆ ಬೇಕಾದ ಶಕ್ತಿ ಲಭಿಸುತ್ತದೆ.ವಿಟಮಿನ್ ಎ ಹೆಚ್ಚಾಗಿ ಇರುವುದರಿಂದ ಕಣ್ಣಿನ ರೋಗಗಳು ನಿವಾರಣೆಯಾಗುತ್ತವೆ.ದೃಷ್ಟಿ ಸಮಸ್ಯೆಗಳು ದೂರವಾಗುತ್ತವೆ.ಸೀತಾಫಲ ದಲ್ಲಿರುವ ಮೆಗ್ನಿಷಿಯಂ ಹೃದಯ ಕಾಯಿಲೆಗಳು ಬರದಂತೆ ತೆಡೆಯುತ್ತದೆ.

ಇವುಗಳಿಗೆ ಇರುವ ಪೋಷಕ ಗಳು ದೇಹದಲ್ಲಿ ಸೇರಿಕೊಂಡು ಕೊಬ್ಬನ್ನು ಕರಗಿಸುತ್ತವೆ.ಸೀತಾಫಲವನ್ನು ನಿತ್ಯ ಸೇವಿಸಿದರೆ ಹೊಟ್ಟೆಯಲ್ಲಿರುವ ಜಂತು ಹುಳುಗಳು ಸಾಯುತ್ತವೆ.ಅಲ್ಸರ್ ನಿವಾರಣೆ ಆಗುತ್ತದೆ.ಗ್ಯಾಸ್ , ಅಸಿಡಿಟಿ , ಅಜೀರ್ಣ , ಮಲ ಬದ್ಧತೆ ಯಂತಹ ಜೀರ್ಣ ಸಂಬಂಧಿಸಿದಂತಹ ಸಮಸ್ಯೆಗಳು ಗುಣವಾಗುತ್ತವೆ.ರಕ್ತ ಕಡಿಮೆ ಇರುವವರು ಸೀತಾಫಲ ತಿನ್ನುವುದು ಉತ್ತಮ ಇದರಿಂದ ರಕ್ತ ಹೆಚ್ಚುತ್ತದೆ.

ಉಷ್ಣತೆಯ ದೇಹ ಹೊಂದಿರುವವರು ಸೀತಾಫಲವನ್ನು ತಿಂದರೆ ಕೂಡಲೆ ಉಷ್ಣತೆಯಿಂದ ಉಪಶಮನ ಪಡೆಯಬಹುದು.ಚಿಕ್ಕ ಮಕ್ಕಳು ಬಾಣಂತಿಯರಿಗೆ ಸೀತಾಫಲ ಒಳ್ಳೆಯ ಪೋಷಕಾಂಶಗಳನ್ನು ನೀಡುತ್ತದೆ.ಅವರಿಗೆ ಸೂಕ್ತ ಶಕ್ತಿ ಲಭಿಸುತ್ತದೆ.ಬೆಳೆಯುತ್ತಿರುವ ಮಕ್ಕಳು ನಿತ್ಯ ಸೀತಾಫಲವನ್ನು ತಿನ್ನುತ್ತಿದ್ದರೆ ಅದರಿಂದ ಕ್ಯಾಲ್ಸಿಯಂನಂತಹ ಪೋಷಕ ಗಳು ಹೆಚ್ಚಾಗಿ ಲಭಿಸುತ್ತವೆ.ಇದರಿಂದ ಮೂಳೆಗಳು ಬಲವಾಗುತ್ತವೆ.ದೇಹದಲ್ಲಿನ ವ್ಯರ್ಥ ಗಳನ್ನು ಹೊರಗೆ ಕಳಿಸುವುದಲ್ಲದೆ ಸೀತಾಫಲ ತುಂಬಾ ಉಪಯುಕ್ತವಾಗಿದೆ.

ರಕ್ತ ಶುದ್ಧಿ ಸಹ ಆಗುತ್ತದೆ.ಸೀತಾಫಲದ ತಿರುಳುಗಳನ್ನು ತೆಗೆದುಕೊಂಡು ರಸದಂತೆ ಮಾಡಿ ಅದಕ್ಕೆ ಹಾಲು ಬೆರೆಸಿ ಮಕ್ಕಳಿಗೆ ಕುಡಿಸಬೇಕು.ಇದರಿಂದ ಅವರಿಗೆ ಶಕ್ತಿ ಲಭಿಸುತ್ತದೆ.ಸೀತಾಫಲ ಎಲೆಗಳನ್ನು ನುಣ್ಣಗೆ ಅರೆದು ಹಚ್ಚಿಕೊಂಡರೆ ಗಾಯಗಳು , ಗಜ್ಜಿ ಗಜಕರ್ಣ ದಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ.ಇವುಗಳ ಎಲೆಗಳನ್ನು ನುಣ್ಣಗೆ ಅರೆದು ಬೋರಿಕ್ ಪೌಡರ್ ಬೆರೆಸಿ ಮಂಚ , ಕುರ್ಚಿಗಳ ಮೂಲೆಗಳಲ್ಲಿ ಇಟ್ಟರೆ ತಿಗಣೆ ಸಮಸ್ಯೆ ಇರುವುದಿಲ್ಲ.

ಸೀತಾಫಲದ ಬೀಜಗಳನ್ನು ಪುಡಿ ಮಾಡಿ ತಲೆಗೆ ಹಚ್ಚಿಕೊಂಡರೆ ಹೇನಿನ ಸಮಸ್ಯೆ ಇರಲ್ಲ ಆದರೆ ಕಣ್ಣಿಗೆ ಬೀಳದಂತೆ ಎಚ್ಚರ ವಹಿಸಬೇಕು.ಗರ್ಭಿಣಿಯರು ಈ ಹಣ್ಣನ್ನು ಸಾಧ್ಯವಾದಷ್ಟು ಕಡಿಮೆ ತಿನ್ನಬೇಕು.ಆಕಸ್ಮಿಕವಾಗಿ ಬೀಜ ನುಂಗಿದರೆ ಗರ್ಭಸ್ರಾವ ಆಗುವ ಅಪಾಯ ಇದೆ.ಸೀತಾಫಲವನ್ನು ಅತಿಯಾಗಿ ಒಮ್ಮೆಲೇ ತಿನ್ನಬಾರದು. ಇದರಿಂದ ಹೊಟ್ಟೆಯಲ್ಲಿ ಉರಿ , ಉಬ್ಬಸ ಉಂಟಾಗುತ್ತದೆ.ಅಂತಹ ಸಂದರ್ಭದಲ್ಲಿ ಬಿಸಿ ನೀರು ಕುಡಿದು ಅರ್ಧ ಸ್ಪೂನ್ ಓಂ ಕಾಳು ಅಥವಾ ಸ್ವಲ್ಪ ಉಪ್ಪು ಜಗಿದರು ಫಲಿತಾಂಶ ಇರುತ್ತದೆ.

ಮಧುಮೇಹ ಇರುವವರು , ಸ್ಥೂಲಕಾಯ ಸಮಸ್ಯೆ ಇರುವವರು ಈ ಹಣ್ಣನ್ನು ವೈದ್ಯರ ಸಲಹೆ ತೆಗೆದುಕೊಂಡು ತಿನ್ನ ಬೇಕು ಇಲ್ಲದಿದ್ದರೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿವೆ.

ಧನ್ಯವಾದಗಳು.

Leave a Reply

Your email address will not be published. Required fields are marked *