ಕೊನೆಗೂ ವೈವಾಹಿಕ ಜೀವನದ ಬಗ್ಗೆ ಮೌನ ಮುರಿದ ನಿಧಿ ಸುಬ್ಬಯ್ಯ!

Featured-Article

ಕನ್ನಡದ ಫೇಮಸ್ ರಿಯಾಲಿಟಿ ಶೋ ಬಿಗ್ ಬಾಸ್ 72ನೇ ದಿನಕ್ಕೆ ಸ್ಥಗಿತಗೊಂಡಿದೆ.ಸದ್ಯ ಬಿಗ್ ಮನೆಯಿಂದ ದೂರ ಬಂದಿರುವ ಸ್ಪರ್ಧಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳ ಜೊತೆ ಮಾತುಕತೆ ನಡೆಸಿದ್ದಾರೆ.ಅಂತೆಯೇ ನಟಿ ನಿಧಿ ಸುಬ್ಬಯ್ಯ ಅವರು ಕೂಡ ಫೇಸ್ ಬುಕ್ ಮೂಲಕ ಲೈವ್ ಗೆ ಬಂದಿದ್ದು, ಈ ವೇಳೆ ತಮ್ಮ ವೈವಾಹಿಕ ಜೀವನದ ಬಗ್ಗೆ ಬಿಚ್ಚಿಟ್ಟಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದರು.ನಿಧಿ ಕೂಡ ತಮ್ಮ ತಂದೆಗೆ ಕ್ಯಾನ್ಸರ್ ಆಗಿತ್ತು ಎಂಬ ಇತ್ಯಾದಿ ವಿಷಯಗಳನ್ನು ಹಂಚಿಕೊಂಡಿದ್ದರು.ಆದರೆ ಅವರು ತನಗೆ ಮದುವೆಯಾಗಿದೆ ಎನ್ನುವ ವಿಚಾರವನ್ನು ಎಲ್ಲಿಯೂ ಬಹಿರಂಗಪಡಿಸಿರಲಿಲ್ಲ.

ಇದು ಏಕೆ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡಿತ್ತು ಆದ್ರೆ ಇದೀಗ ಈ ಕುರಿತು ಗುಟ್ಟು ಬಿಟ್ಟುಕೊಡುವ ಮೂಲಕ ಮದುವೆ ವಿಚಾರಕ್ಕೆ ನಿಧಿ ಫುಲ್ ಸ್ಟಾಪ್ ಹಾಕಿದ್ದಾರೆ.ಮನೆಯಿಂದ ಹೊರಬಂದ ಬಳಿಕ ಮೈಸೂರಿನಲ್ಲಿರುವ ನಿಧಿ ಫೇಸ್ ಬುಕ್ ಲೈವ್ ಮೂಲಕ ತಮ್ಮ ಬಿಗ್ ಬಾಸ್ ಜರ್ನಿ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ.ಈ ವೇಳೆ ಬಿಗ್ ಬಾಸ್ ನಲ್ಲಿ ಎಲ್ಲರೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿಕೊಂಡಿದ್ದರು ಆದರೆ ನೀವು ನಿಮ್ಮ ಮದುವೆ ಹಾಗೂ ಮದುವೆ ನಂತರದ ವೈವಾಹಿಕ ಜೀವನದ ಬಗ್ಗೆ ಯಾಕೆ ಮಾತನಾಡಿಲ್ಲ ಎಂಬ ಪ್ರಶ್ನೆಯನ್ನು ಕೇಳಲಾಗಿದೆ.ಈ ಪ್ರಶ್ನೆಗೆ ನಿಧಿ ಅವರು ನಾಜೂಕ್ಕಾಗಿ ಉತ್ತರಿಸಿದ್ದಾರೆ.

“ಈ ಪ್ರಶ್ನೆಗೆ ನಾನು ಹೇಗೆ ಉತ್ತರಿಸಲಿ ,ನಿಜ ಜೀವನದಲ್ಲಿ ಏನಾದರೂ ಕೆಟ್ಟದ್ದು ಆದಾಗ ಅದರ ಬಗ್ಗೆ ಮಾತಾಡುವುದು
ಈ ಮೂಲಕ ಸಿಂಪತಿ ಪಡೆಯಬೇಕು ಎನ್ನುವ ವ್ಯಕ್ತಿ ನಾನಲ್ಲ.ಎಲ್ಲರ ಜೀವನದಲ್ಲಿಯು ಏರು ಪೇರು ಇದ್ದೆ ಇರುತ್ತದೆ
ಒಳ್ಳೆಯ ಸಂಗತಿಗಳನ್ನು ಜನ ತುಂಬಾ ಕಡಿಮೆ ಮಾತನಾಡುತ್ತಾರೆ ಬೇಸರದ ಬಗ್ಗೆ ತುಂಬಾ ಮಾತಾನಾಡುತ್ತಾರೆ
ಆದರೆ ನಾನು ಸ್ವಲ್ಪ ವಿಭಿನ್ನ ಎಂದು ನಿಧಿ ಹೇಳಿದ್ದಾರೆ.

ಅಲ್ಲದೆ ನನ್ನ ಜೀವನದಲ್ಲಿ ಏನಾಯ್ತು ಎನ್ನುವುದು ಎಲ್ಲರಿಗೂ ಗೊತ್ತು.ಅಲ್ಲಿ ನಾನು ಏನಾದರೂ ಹೇಳಿದರೆ ಅದು ಒಂದು ಕಡೆಯ ಮಾತಾಗಿರುತ್ತದೆ.ನಾನು ಮದುವೆಯಾಗಿದ್ದೆ , 10 ತಿಂಗಳ ನಂತರ ಅದು ಮುಂದುವರಿಯಲಿಲ್ಲ.ಅಮ್ಮನ ಬಳಿಯೂ ಈ ಬಗ್ಗೆ ನಾನು ಚರ್ಚೆ ಮಾಡಲ್ಲ ಅದನ್ನು ಅಲ್ಲಿಗೇ ಬಿಟ್ಟು ಜೀವನದ ಜೊತೆ ಮುಂದೆ ಸಾಗೋಣ ಎನ್ನುವುದು ನನ್ನ ಪಾಲಿಸಿ ಅದಕ್ಕೆ ನಾನು ನಾನು ಅದರ ಬಗ್ಗೆ ಅಲ್ಲಿ ಮಾತನಾಡಲಿಲ್ಲ” ಎಂದು ತಿಳಿಸಿದ್ದಾರೆ.

2017 ರಲ್ಲಿ ನಿಧಿ ಸುಬ್ಬಯ್ಯ ಉದ್ಯಮಿ ಲವೇಶ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದರು.ಆ ಬಳಿಕ ನಟಿ ತಮ್ಮ ಪತಿ ಜೊತೆ ವಿದೇಶಕ್ಕೆ ಹಾರಿದ್ದು ಸಾಮಾಜಿಕ ಜಾಲತಾಣಗಳಿಂದ ದೂರ ಇದ್ದರು.ಮೂಲಗಳ ಪ್ರಕಾರ ಮದುವೆಯಾದ ಒಂದೇ ವರ್ಷದಲ್ಲಿ ಇಬ್ಬರು ವಿಚ್ಛೇದನ ಪಡೆದಿದ್ದರು ಎನ್ನಲಾಗಿದ್ದು ಈ ಕುರಿತು ಎಲ್ಲಿಯೂ ನಟಿ ನಿಧಿ ಸುಬ್ಬಯ್ಯ ಅಧಿಕೃತವಾಗಿ ಹೇಳಿಕೊಂಡಿಲ್ಲ.

ಧನ್ಯವಾದಗಳು.

Leave a Reply

Your email address will not be published. Required fields are marked *