ತಪ್ಪಾಗಿ ಮಲಗುವುದರಿಂದ ಏನಾಗುತ್ತದೆ ಗೊತ್ತಾ!ಶಾಕಿಂಗ್ ಸುದ್ದಿ

Featured-Article

ತನ್ನ ಬೆನ್ನ ಮೇಲೆ ಮಲಗುವ ಏಕೈಕ ಪ್ರಾಣಿ ಯಾವುದು ಗೊತ್ತೇ ??-ಅದೇ ಮನುಷ್ಯ .ನಮ್ಮ ದೇಹಕ್ಕೆ ಆಹಾರದಷ್ಟೇ ನಿದ್ರೆಯೂ ಮುಖ್ಯವಾಗಿದೆ .ಆದರೆ ನಿದ್ರಿಸುವಾಗ ಅನುಸರಿಸುವ ಭಂಗಿಯು ಅಗತ್ಯ,ಇದು ಸರಿಯಾಗಿದ್ದರೆ ಆರೋಗ್ಯವನ್ನು ವೃದ್ಧಿಸುತ್ತದೆ.
ಅದೇ ತಪ್ಪು ಭಂಗಿ ನಿಮ್ಮ ಆರೋಗ್ಯವನ್ನು ಕೆಡಿಸಬಹುದು .ತಜ್ಞರ ಪ್ರಕಾರ ನಾವೆಲ್ಲರೂ ಇದುವರೆಗೆ ಮಲಗುವುದೇ ಹೀಗೆ ಎಂದು ತಿಳಿದುಕೊಂಡು ಬಂದಿರುವ ಬೆನ್ನ ಮೇಲೆ ಮಲಗುವುದು ತಪ್ಪು ಭಂಗಿ ,ಹಾಗಾದರೆ ಸರಿಯಾದ ಭಂಗಿ ಯಾವುದು ಹಾಗೂ ಅದರ ಲಾಭಗಳ ಬಗ್ಗೆ ಈಗ ತಿಳಿಯೋಣ ಬನ್ನಿ .

ಹಾಗಾದರೆ ಸರಿಯಾದ ಭಂಗಿ ಯಾವುದು ಎಂಬ ಪ್ರಶ್ನೆಗೆ ಉತ್ತರ ಎಡ ಮಗ್ಗುಲಲ್ಲಿ ಮಲಗುವುದು
ಅಂದರೆ ಎಡಗೈ ಕೆಳಗೆ ಬರುವಂತೆ ಅಡ್ಡಲಾಗಿ ಮಲಗುವುದು.ಸಾಮಾನ್ಯವಾಗಿ ಹೆಚ್ಚಿದ ಸಸ್ತನಿಗಳು ಹೊಟ್ಟೆಯ ಮೇಲೆ ಮಲಗಿದಂತೆ ಕಂಡು ಬಂದರೂ ಕೊಂಚ ಎಡಕ್ಕೆ ಬಾಗಿರುವುದನ್ನು ಗಮನಿಸಬಹುದು.ನಮ್ಮ ಶರೀರದ ಅಂಗಗಳ ರಚನೆಯನ್ನು ಗಮನಿಸಿದರೆ ಎಡಕ್ಕೆ ಮಲಗುವುದರಿಂದ ಪಚನಾಂಗ ಗಳಿಗೆ ಅತಿ ಕಡಿಮೆ ಭಾರ ಬಿದ್ದು ಅವುಗಳ ಕ್ರಿಯೆ ಸರಾಗವಾಗಿ ನಡೆಯಲು ಸಾಧ್ಯವಾಗುತ್ತದೆ.

ಎಡ ಮಗ್ಗುಲಲ್ಲಿ ಮಲಗುವುದರಿಂದ ಪಚನ ಕ್ರಿಯೆಗೆ ಹೊರತಾಗಿ ಇನ್ನೂ ಹಲವು ಪ್ರಯೋಜನಗಳಿವೆ.ಆದರೆ ಇದಕ್ಕೆ ವಿರುದ್ಧವಾಗಿ ಬಲಮಗ್ಗುಲಿಗೆ ಮಲಗಿ ಕೊಂಡರೆ ಪಚನ ಕ್ರಿಯೆಯ ಬಳಿಕ ದೇಹದಲ್ಲಿ ಸಂಗ್ರಹವಾದ ವಿಷಕಾರಿ ವಸ್ತುಗಳು ಪೂರ್ಣವಾಗಿ ವಿಸರ್ಜನೆಯಾಗದೆ ದೇಹದಲ್ಲಿ ಸಂಗ್ರಹವಾಗುತ್ತಾ ಹೋಗುತ್ತದೆ ಅಲ್ಲದೆ ಹೆಚ್ಚಿನ ಭಾರ ಪಡೆದ ಪಚನಾಂಗಗಳು ಪೂರ್ಣವಾಗಿ ಕಾರ್ಯನಿರ್ವಹಿಸಲು ಹೆಚ್ಚಿನ ರಕ್ತ ಬೇಡುತ್ತವೆ ಇದು ಹೃದಯದ ಒತ್ತಡದಂತಹ ಮೊದಲಾದ ಇತರ ತೊಂದರೆಗಳಿಗೆ ನಾಂದಿಯಾಗುತ್ತದೆ.ಎಡ ಮಗ್ಗಲಿಗೆ ಮಲಗಿದರೆ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ಈಗ ತಿಳಿಯೋಣ
ಹಾಗೂ ಇದನ್ನು ಇಂದಿನಿಂದಲೇ ಅನುಸರಿಸಲು ಪ್ರಾರಂಭಿಸಿ….!

ನಿಮ್ಮ ಮೂತ್ರಪಿಂಡ ಮತ್ತು ಯಕೃತ್ ಗಳ ಕಾರ್ಯಕ್ಷಮತೆ ಹೆಚ್ಚುತ್ತದೆ. ನಮ್ಮ ಶರೀರದ ಅನೈಚ್ಚಿಕ ಕಾರ್ಯದಲ್ಲಿ ಮೂತ್ರಪಿಂಡ ಮತ್ತು ಯಕೃತ್ ಪ್ರಮುಖ ಪಾತ್ರ ವಹಿಸುತ್ತವೆ.ಇವು ನಮ್ಮ ರಕ್ತವನ್ನು ಶೋಧಿಸಿ ಕಲ್ಮಶಗಳನ್ನು ಸಂಗ್ರಹಿಸಿ ಹೊರಹಾಕುವ ಕೆಲಸವನ್ನು ನಿದ್ದೆಯ ಸಮಯದಲ್ಲಿ ಹೆಚ್ಚಾಗಿ ಮಾಡುತ್ತವೆ.ಎಡ ಮಗ್ಗುಲಲ್ಲಿ ಮಲಗುವುದರಿಂದ ಇವುಗಳ ಮೇಲೆ ಯಾವುದೇ ಭಾರ ಬೀಳದ ಕಾರಣ ಇವುಗಳ ಕ್ಷಮತೆ ಅತಿ ಹೆಚ್ಚಾಗಿ ದೇಹದಿಂದ ಸಂಗ್ರಹವಾದ ಎಲ್ಲ ವಿಷಕಾರಿ ವಸ್ತುಗಳು ಹೊರ ಹಾಕಲು ಸಾಧ್ಯವಾಗುತ್ತದೆ .ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

ಅನೈಚ್ಛಿಕ ಕಾರ್ಯಗಳಲ್ಲಿ ಇನ್ನೊಂದು ಅತಿ ಪ್ರಮುಖವಾದ ಕಾರ್ಯವೆಂದರೆ ಜೀರ್ಣಕ್ರಿಯೆ , ಎಡ ಮಗ್ಗುಲಲ್ಲಿ ಮಲಗುವುದರಿಂದ ಜಠರ ಮತ್ತು ಮೇದೋಜೀರಕಾಂಗಗಳ ಮೇಲೆ ಯಾವುದೇ ಒತ್ತಡ ಬೀಳದೆ ಇವುಗಳು ತಮ್ಮ ಪೂರ್ಣ ಕ್ಷಮತೆಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಮೇದೋಜೀರಕ ಗ್ರಂಥಿಯಿಂದ
ಸ್ರವಿತವಾಗುವ ರಸಗಳು ಪೂರ್ಣ ಪ್ರಮಾಣದಲ್ಲಿದ್ದು ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ .
ಜಠರದಲ್ಲಿ ಪೂರ್ಣ ಪ್ರಮಾಣದಲ್ಲಿ ಜೀರ್ಣವಾದ ಆಹಾರ ಕರುಳುಗಳ ಕೆಲಸವನ್ನು ಸುಲಭಗೊಳಿಸುತ್ತದೆ ,
ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ .

  • ಸುಖವಾದ ವಿಸರ್ಜನೆಗೆ ಸಹಕರಿಸುತ್ತದೆ .

ನಮ್ಮ ಆಹಾರದ ಬಹುಪಾಲು ಜೀರ್ಣಗೊಂಡ ಬಳಿಕ ಅಗತ್ಯ ಕೆಲಸಗಳಿಗಾಗಿ ಹೀರಿಕೊಳ್ಳಲ್ಪಡುವುದು ಸಣ್ಣ ಕರುಳಿನಲ್ಲಿ ,
ಬಳಿಕ ಉಳಿದ ತ್ಯಾಜ್ಯ ದೊಡ್ಡ ಕರುಳಿಗೆ ರವಾನೆಯಾಗುತ್ತದೆ.ಎಡ ಮಗ್ಗುಲಲ್ಲಿ ಮಲಗುವ ಮೂಲಕ ಈ ರವಾನೆ ಕೆಲಸಕ್ಕೆ ಗುರುತ್ವಾಕರ್ಷಣೆ ನೆರವಾಗುವುದರಿಂದ ಯಾವುದೇ ಕಷ್ಟವಿಲ್ಲದೆ ಸಣ್ಣ ಕರುಳಿನಿಂದ ತ್ಯಾಜ್ಯ ದೊಡ್ಡ ಕರುಳಿಗೆ ಬರುತ್ತದೆ.ಮರುದಿನ ದೊಡ್ಡ ಕರುಳಿನಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯ ಸುಲಭವಾಗಿ ಕಡಿಮೆ ಒತ್ತಡದಲ್ಲಿ ವಿಸರ್ಜನೆಗಳು ಸಹಕಾರಿಯಾಗಿದೆ.

  • ಹೃದಯದ ಕ್ಷಮತೆ ಹೆಚ್ಚುತ್ತದೆ

ಎಡ ಮಗ್ಗುಲಲ್ಲಿ ಮಲಗುವುದರಿಂದ ಶರೀರದ ಅನೈಚ್ಚಿಕ ಕಾರ್ಯದಲ್ಲಿ ನಿರತರಾಗಿರುವ ಎಲ್ಲ ಅಂಗಗಳು ಕಡಿಮೆ ಹೊರೆ ಹೊತ್ತಿರುವ ಕಾರಣ ಇವುಗಳಿಂದ ರಕ್ತ ಪೂರೈಸಲು ಹೃದಯಕ್ಕೆ ಹೆಚ್ಚಿನ ಶ್ರಮ ಬೇಕಾಗಿಲ್ಲ ಇದರಿಂದ ಹೃದಯದ ಕ್ಷಮತೆ ಹೆಚ್ಚುತ್ತದೆ.ಅಲ್ಲದೇ ಗುರುತ್ವಾಕರ್ಷಣೆ ಬಲದಿಂದಲೇ ಹೆಚ್ಚಿನ ಪ್ರಮಾಣ ಅಂಗಗಳಿಗೆ ಲಭ್ಯವಾಗುವುದರಿಂದ ಅಷ್ಟರ ಮಟ್ಟಿಗೆ ಹೃದಯದ ಭಾರ ಕಡಿಮೆಯಾಗುತ್ತದೆ.ಹೆಚ್ಚಿನ ಒತ್ತಡ ಅಗತ್ಯವಿಲ್ಲದಿರುವುದರಿಂದ ಹೃದಯಕ್ಕೆ ಒಯ್ಯುವ ರಕ್ತ ನಾಳಗಳು (inferior vena cava ) ಸಹ ಕಡಿಮೆ ಒತ್ತಡವನ್ನು ಅನುಭವಿಸುತ್ತವೆ ಇದು ಹೃದಯದ ಕ್ಷಮತೆಯನ್ನು ಹೆಚ್ಚಿಸುತ್ತದೆ .

  • ಎದೆ ಉರಿ ಮತ್ತು ಹೊಟ್ಟೆಯಲ್ಲಿ ಆಮ್ಲೀಯತೆಯನ್ನು ನಡೆಯುತ್ತದೆ .

ಎಡ ಮಗ್ಗುಲಲ್ಲಿ ಮಲಗುವುದರಿಂದ ಪಚನಗೊಂಡ ಆಹಾರ ಮುಂದೆ ಸಾಗಲು ಸುಲಭವಾಗುತ್ತದೆ ಅಲ್ಲದೆ ಹಿಂದೆ ಸರಿಯುವ ಸಾಧ್ಯತೆಗಳು ಕಡಿಮೆಯಾಗುತ್ತದೆ ಹಿಂದೆ ಸರಿದ ಆಹಾರ ಹೆಚ್ಚು ಆಮ್ಲಿಯವಾಗಿ ಹುಳಿತೇಗು , ಎದೆ ಉರಿ , ಹೊಟ್ಟೆ ಉರಿ ಮೊದಲಾದವುಗಳನ್ನು ಉಂಟು ಮಾಡುತ್ತವೆ,ಎಡ ಮಗ್ಗುಲಲ್ಲಿ ಮಲಗುವುದರಿಂದ ಇವೆಲ್ಲ ತೊಂದರೆಗಳು ಇಲ್ಲವಾಗುತ್ತವೆ .

ಬೆಳಗಿನ ಆಯಾಸವನ್ನು ಇಲ್ಲವಾಗಿಸುತ್ತದೆ .ಎಡ ಮಗ್ಗುಲಲ್ಲಿ ಮಲಗಿದ್ದಾಗ ಯಕೃತ್ ಮತ್ತು ಪಿತ್ತಕೋಶ ಸಡಿಲವಾಗಿದ್ದು ,
ಇವುಗಳು ಯಾವುದೇ ಒತ್ತಡವಿಲ್ಲದೆ ಯಾವುದೇ ಪ್ರಮಾಣ ವ್ಯರ್ಥವಾಗದಂತೆ ಪಿತ್ತ ರಸವನ್ನು ಸ್ರವಿಸಬಹುದು ,ಇದು ಆಹಾರವನ್ನು ಪೂರ್ಣವಾಗಿ ಮತ್ತು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಕರಿಸುವುದರಿಂದ ಮುಂಜಾನೆ ದೇಹಕ್ಕೆ ಹೆಚ್ಚಿನ ಶಕ್ತಿ ಲಭಿಸುತ್ತದೆ.ಪರಿಣಾಮವಾಗಿ ಮುಂಜಾನೆಯ ಆಯಾಸ ಇಲ್ಲವಾಗುತ್ತದೆ.ಕೊಬ್ಬು ಕರಗುತ್ತದೆ ಮತ್ತು ಯಕೃತ್ನಲ್ಲಿ ಕೊಬ್ಬು ಸಂಗ್ರಹವಾಗುವುದು ತಪ್ಪುತ್ತದೆ.

ಆಹಾರದಲ್ಲಿ ಕೊಬ್ಬು ಕರಗಲು ಯಕೃತ್ ಮತ್ತು ಪಿತ್ತ ಕೋಶಗಳು ಸ್ರವಿಸುವ ಪಿತ್ತರಸ ಅಗತ್ಯವಾಗಿದೆ ಇದಕ್ಕೆ emulsification ಎನ್ನುತ್ತಾರೆ .ಒಂದು ವೇಳೆ ಪಿತ್ತರಸದ ಪ್ರಮಾಣ ಸಾಕಷ್ಟು ಇಲ್ಲದಿದ್ದರೆ ಕೊಬ್ಬು ಕರಗದೆ ಒಳಗೆ ಉಳಿದುಬಿಡುತ್ತದೆ. ಇದಕ್ಕೆ ಫ್ಯಾಟಿ ಲಿವರ್ (fatty liver ) ಎಂದು ಕರೆಯುತ್ತಾರೆ.ಎಡ ಮಗ್ಗುಲಲ್ಲಿ ಮಲಗುವುದರಿಂದ ಕೊಬ್ಬು ಉಳಿಯುದೇ ಇರಲು ನೇರವಾಗಿ ಈ ಸ್ಥಿತಿಗೆ ಬರುವುದು ತಪ್ಪಿದಂತಾಗುತ್ತದೆ.

ಧನ್ಯವಾದಗಳು.

Leave a Reply

Your email address will not be published. Required fields are marked *