ಈ ನಾಲ್ಕು ರಾಶಿಯವರು ಈ ದೀಪ ಹಚ್ಚಿ ನೋಡಿ ಮನೆಯಲ್ಲಿ ಹಣದ ಹೊಳೆ ಸುರಿಯುತ್ತದೆ ನಿಮ್ಮ ಈಡೇರಿಕೆಗಳು ನೆರವೇರುತ್ತದೆ 100%

Featured-Article

ಪ್ರತಿ ಮಂಗಳವಾರ ಮತ್ತು ಶುಕ್ರವಾರ ನಿಂಬೆಹಣ್ಣಿನ ದೀಪವನ್ನು ಈ ನಾಲ್ಕು ರಾಶಿಯವರು ಮನೆಯಲ್ಲಿ ಹಚ್ಚಿದರೆ ಮನೆಯಲ್ಲಿರುವ ದುಷ್ಟಶಕ್ತಿಗಳು ಹಾಗೂ ನಿಮ್ಮ ಮನೆಯಲ್ಲಿ ಯಾವುದೇ ಕಷ್ಟಗಳು ಇದ್ದರು ಸಹ ಪರಿಹಾರವಾಗುತ್ತದೆ. ನಿಮ್ಮ ಮನೆಯಲ್ಲಿ ಧನಸಂಪತ್ತು ವೃದ್ಧಿಯಾಗುತ್ತದೆ.ನಿಮ್ಮ ಕಷ್ಟಗಳೆಲ್ಲ ನೀರಿನಂತೆ ಕರಗಿಹೋಗುತ್ತದೆ. ಈ ಒಂದು ಉಪಾಯವನ್ನು ಮನೆಯಲ್ಲಿ ಮಾಡುವುದರಿಂದ ನಿಮಗೆ ಯಾವುದೇ ಒಂದು ತೊಂದರೆಗಳು ಕೂಡ ಕಾಡುವುದಿಲ್ಲ. ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ.

ನಿಂಬೆ ಹಣ್ಣಿನ ಉಪಯೋಗ ಕೇವಲ ಅಡುಗೆ ತಯಾರಿಕೆಗೆ ಮಾತ್ರವಲ್ಲದೇ ದೇವರ ಪೂಜೆಗೆ ಅತ್ಯಂತ ಪ್ರಮುಖವಾದದ್ದು.ನಿಂಬೆಹಣ್ಣು ದೇವಿ ಸ್ವರೂಪಿಯಾದ ದುರ್ಗಾದೇವಿಗೆ ಬಹಳ ಪ್ರಿಯವಾದದ್ದರಿಂದ ದೇವಿಯ ಕೃಪೆ ಮತ್ತು ಆಶೀರ್ವಾದ ಸಿಗಲೆಂದು ದೀಪವನ್ನು ಹಚ್ಚುತ್ತಾರೆ. ದೇವಿಗೆ ನಿಂಬೆಹಣ್ಣಿನ ದೀಪ ಹಚ್ಚುವುದರಿಂದ ನಿಮ್ಮ ಎಲ್ಲಾ ರೀತಿಯ ಸಮಸ್ಯೆಗಳು ನಿವಾರಣೆಯಾಗುತ್ತದೆ. ನಿಂಬೆಹಣ್ಣಿನ ದೀಪವನ್ನು ಪಾರ್ವತಿ ಸ್ವರೂಪವಾದ ಅಂಬಾಭವಾನಿ, ಕಾಳಿಕಾದೇವಿ, ಚೌಡೇಶ್ವರಿ ಮಾರಿಯಮ್ಮ, ದುರ್ಗಾದೇವಿ ಹಾಗೂ ಶಕ್ತಿ ದೇವಿ ದೇವಸ್ಥಾನಗಳಲ್ಲಿ ಕೂಡ ದೀಪ ಹಚ್ಚುವುದು ತುಂಬಾನೆ ಒಳ್ಳೆಯದು.

ದೇವಿಯ ವಾರ ಆಗಿರುವ ಮಂಗಳವಾರ ಮಧ್ಯಾಹ್ನ 3:30 ರಿಂದ 5:00 ಗಂಟೆ ವರೆಗೂ ಹಾಗೂ ಶುಕ್ರವಾರ ಬೆಳಗ್ಗೆ 11:00 ಯಿಂದ 12:30 ರವರೆಗೆ ಈ ಒಂದು ನಿಂಬೆಹಣ್ಣಿನ ದೀಪವನ್ನು ಹಚ್ಚಬಹುದು.ನಿಂಬೆಹಣ್ಣಿನ ದೀಪವನ್ನು ನೀವು ಮಂಗಳವಾರ ಹಚ್ಚುವುದಕ್ಕಿಂತ ಶುಕ್ರವಾರ ಹಚ್ಚಿದರೆ ತುಂಬಾ ಒಳ್ಳೆಯದು. ಶುಕ್ರವಾರದ ದೀಪವು ಸತ್ವದಿಂದ ಕೂಡಿರುತ್ತದೆ ಮತ್ತು ಶುಭವಾಗಿರುತ್ತದೆ.

ನಿಂಬೆಹಣ್ಣಿನ ದೀಪವನ್ನು ಹಚ್ಚಿ ದೇವಿಗೆ ಅಷ್ಟೋತ್ತರ ಪೂಜೆಯನ್ನು ಮಾಡಿಸಬೇಕು.ಪೂಜೆಯಾದ ನಂತರ ಹೆಂಗಸರು ಮುತ್ತೈದೆಯರಿಗೆ ಅರಿಶಿಣ-ಕುಂಕುಮವನ್ನು ಕೊಡಬೇಕು ಮತ್ತು ನಮಸ್ಕಾರವನ್ನು ಮಾಡಬೇಕು.ನಿಂಬೆಹಣ್ಣಿನ ದೀಪವನ್ನು ಮಕ್ಕಳು ಹುಟ್ಟಿದಾಗ, ಆರೋಗ್ಯ ಸರಿಯಿಲ್ಲದಾಗ ಹಚ್ಚಬಾರದು. ಈ ದೀಪವನ್ನು ಮಂಗಳವಾರ ಶುಕ್ರವಾರ ಹಚ್ಚುವುದರಿಂದ ಮನೆಯಲ್ಲಿ ಧನ ಸಂಪತ್ತು ವೃದ್ಧಿಯಾಗುತ್ತದೆ.

Leave a Reply

Your email address will not be published. Required fields are marked *